More

    ಮನೆಯಲ್ಲೇ ಕುಳಿತು ಮಕ್ಕಳನ್ನು ಹುಟ್ಟಿಸ್ತಾ ಇರಿ! ರಷ್ಯಾ ಮಹಿಳೆಯರಿಗೆ ಪುಟಿನ್​ ಆದೇಶ, ಕಾರಣ ಹೀಗಿದೆ….

    ಮಾಸ್ಕೋ: ಯೂಕ್ರೇನ್​ ವಿರುದ್ಧ 2022ರ ಫೆ.24ರಂದು ಯುದ್ಧ ಆರಂಭವಾದಾಗಿನಿಂದ ರಷ್ಯಾ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಲ್ಲಿನ ಸರ್ಕಾರ ಕೆಲವೊಂದಿಷ್ಟು ಸ್ವಾತಂತ್ರವನ್ನು ಕಸಿದುಕೊಂಡು ಜನರ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಬಹುಕಾಲದವರಗೆ ಅಲ್ಲಿನ ಜನರ ಹಕ್ಕುಗಳಲ್ಲಿ ಒಂದಾಗಿದ್ದ ಗರ್ಭಪಾತದ ಹಕ್ಕಿಗೂ ಇದೀಗ ಕೊಕ್ಕೆ ಬಿದ್ದಿದೆ.

    ಹೌದು, ಗರ್ಭಪಾತ ಹಲವು ದಶಕಗಳವರೆಗೆ ರಷ್ಯಾದಲ್ಲಿ ಕಾನೂನುಬದ್ಧವಾಗಿತ್ತು. ಆದರೆ, ಈಗ ಅದರ ಮೇಲೆ ನಿರ್ಬಂಧವನ್ನು ಹೇರಲಾಗಿದೆ. ಒಂದು ದೇಶವು ಯುದ್ಧದ ಸ್ಥಿತಿಯಲ್ಲಿದ್ದಾಗ ಇಂತಹ ಕಾಯಿದೆಗಳನ್ನು ರಚಿಸುವುದು ಸಾಮಾನ್ಯ ಎಂದು ಜಾರ್ಜಿಯಾದಲ್ಲಿ ಗರಿಪಾರು ಆಗಿರುವ ರಷ್ಯಾದ ಮಹಿಳಾ ಕಾರ್ಯಕರ್ತೆ ಲೆಡಾ ಗರಿನಾ ಎಎಫ್​ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಮನೆಯಲ್ಲೇ ಕುಳಿತು ಇನ್ನು ಹೆಚ್ಚಿನ ಯೋಧ (ಮಕ್ಕಳು) ರಿಗೆ ಜನ್ಮ ನೀಡುವಂತೆ ರಷ್ಯಾದ ಪ್ರತಿ ಮಹಿಳೆಗೂ ಸರ್ಕಾರ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಅಲ್ಲದೆ, ಗರ್ಭಪಾತವು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಲೆಡಾ ಗರಿನಾ ಅವರು ಹೇಳಿದರು.

    ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರಿದಿದ್ದು, ರಷ್ಯಾದ 6,17,000 ಸೈನಿಕರು ಯುದ್ಧಭೂಮಿಯಲ್ಲಿದ್ದಾರೆ ಎಂದು ಪುಟಿನ್ ಬಹಿರಂಗಪಡಿಸಿದ್ದಾರೆ. ದೇಶಾದ್ಯಂತ ಪ್ರತಿದಿನ 1,500 ಜನರು ಸೇನೆಗೆ ಸೇರುತ್ತಿದ್ದಾರೆ. ಇದರ ನಡುವೆ ರಷ್ಯಾದ ಸಾಂಪ್ರದಾಯಿಕ ಚರ್ಚ್‌ನ ಬೇಡಿಕೆಗಳ ಪ್ರಕಾರ, ಅನೇಕ ಪ್ರದೇಶಗಳ ಖಾಸಗಿ ಚಿಕಿತ್ಸಾಲಯಗಳಲ್ಲಿ ಗರ್ಭಪಾತವನ್ನು ನಿರ್ಬಂಧಿಸಲಾಗಿದೆ.

    ಮಹಿಳೆಯರು ಕನಿಷ್ಠ ಎಂಟು ಮಕ್ಕಳನ್ನು ಪಡೆಯಲು ಮತ್ತು ದೊಡ್ಡ ಕುಟುಂಬಗಳನ್ನು ಹೊಂದಲು ಈ ತಿಂಗಳ ಆರಂಭದಲ್ಲಿ ಪುಟಿನ್​ ಒತ್ತಾಯಿಸಿದರು. ರಷ್ಯಾದ ಜನಸಂಖ್ಯಾಶಾಸ್ತ್ರಜ್ಞ ವಿಕ್ಟೋರಿಯಾ ಸಕೆವಿಚ್ ಪ್ರಕಾರ, ರಷ್ಯಾದಲ್ಲಿ ಗರ್ಭಪಾತದ ಪ್ರಮಾಣವು 1990ಕ್ಕೆ ಹೋಲಿಸಿದರೆ ಈಗಾಗಲೇ ಹತ್ತು ಪಟ್ಟು ಕಡಿಮೆಯಾಗಿದೆ.

    ಮಹಿಳೆಯರಿಗೆ ಬಂಪರ್​ ಆಫರ್​
    ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಪುಟಿನ್​ ಮಹಿಳೆಯರಿಗೆ ಬಂಪರ್​ ಆಫರ್​ ಘೋಷಣೆ ಮಾಡಿದ್ದಾರೆ. ಮಹಾಮರಿ ಕರೊನಾ ಹಾಗೂ ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ರಷ್ಯಾದಲ್ಲಿ ಸಾಕಷ್ಟು ಸಾವುಗಳು ಸಂಭವಿಸಿದ್ದು, ಜನಸಂಖ್ಯೆ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಹೊರಬರಲು ಮಹಿಳೆಯರಿಗೆ ಆಫರ್​ ನೀಡಲಾಗಿದೆ. ಅದೇನೆಂದರೆ, ಹತ್ತು ಮಕ್ಕಳಿಗೆ ಜನ್ಮ ನೀಡಿ, ಆ ಹತ್ತು ಮಕ್ಕಳನ್ನು ಜೀವಂತ ಇರಿಸಿದರೆ 13,500 ಪೌಂಡ್​ (12,93,163 ರೂಪಾಯಿ) ಹಣದ ಜೊತೆಗೆ ಅನೇಕ ಸೌಲಭ್ಯಗಳನ್ನು ನೀಡುವುದಾಗಿ ರಷ್ಯಾ ಸರ್ಕಾರ ಘೋಷಣೆ ಮಾಡಿದೆ. (ಏಜೆನ್ಸೀಸ್​)

    10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಂಪರ್​ ಆಫರ್​ ಘೋಷಿಸಿದ ರಷ್ಯಾ ಅಧ್ಯಕ್ಷ: ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts