More

    10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಂಪರ್​ ಆಫರ್​ ಘೋಷಿಸಿದ ರಷ್ಯಾ ಅಧ್ಯಕ್ಷ: ಕಾರಣ ಹೀಗಿದೆ…

    ಮಾಸ್ಕೋ: ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಹೋಗಲಾಡಿಸಲು 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್,​ ಹಣದ ಆಫರ್​ ಅನ್ನು ಘೋಷಣೆ ಮಾಡಿದ್ದಾರೆ.

    ಮಹಾಮರಿ ಕರೊನಾ ಹಾಗೂ ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ರಷ್ಯಾದಲ್ಲಿ ಸಾಕಷ್ಟು ಸಾವುಗಳು ಸಂಭವಿಸಿದ್ದು, ಜನಸಂಖ್ಯೆ ಬಿಕ್ಕಟ್ಟು ಉಂಟಾಗಿರುವುದರಿಂದ ರಷ್ಯಾ ಸರ್ಕಾರ ಈ ವಿನೂತನ ಯೋಜನೆಗೆ ಮುಂದಾಗಿದೆ. ಹತ್ತು ಮಕ್ಕಳಿಗೆ ಜನ್ಮ ನೀಡಿ, ಆ ಹತ್ತು ಮಕ್ಕಳನ್ನು ಜೀವಂತ ಇರಿಸಿದರೆ 13,500 ಪೌಂಡ್​ (12,93,163 ರೂಪಾಯಿ) ಹಣದ ಜೊತೆಗೆ ಅನೇಕ ಸೌಲಭ್ಯಗಳನ್ನು ರಷ್ಯಾ ಸರ್ಕಾರ ಘೋಷಣೆ ಮಾಡಿದೆ. ಆದರೆ, ಈ ಯೋಜನೆಯು ಒಂದು ಹತಾಶ ಪ್ರಯತ್ನ ಎಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಯೋಜನೆ ಬಗ್ಗೆ ರಷ್ಯಾದ ರಾಜಕಾರಣಿ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮ್ಯಾಥರ್ಸ್​ ಮಾತನಾಡಿದ್ದು, ರಷ್ಯಾ ಹೊರ ತಂದಿರುವ ಹೊಸ ಯೋಜನೆಯನ್ನು ಮದರ್​ ಹೀರೋಯಿನ್​ (ತಾಯಿಯೇ ನಾಯಕಿ) ಎಂದು ಕರೆಯಲಾಗುತ್ತದೆ. ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಮರಳಿ ಹಾದಿಗೆ ತರುವ ಉಪಕ್ರಮವಾಗಿ ಈ ಯೋಜನೆಯನ್ನು ಅಧ್ಯಕ್ಷ ಪುತಿನ್​ ಜಾರಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.

    ಈ ವರ್ಷದ ಮಾರ್ಚ್​ನಿಂದ ರಷ್ಯಾದಲ್ಲಿ ಅತ್ಯಂತ ಪ್ರಮಾಣದಲ್ಲಿ ಪ್ರತಿನಿತ್ಯದ ಕರೊನಾ ವೈರಸ್ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಯುದ್ಧದಿಂದಾಗಿ ಯೂಕ್ರೇನ್​ನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರಷ್ಯಾ ಯೋಧರು ಮೃತಪಟ್ಟಿದ್ದಾರೆ. ಯಾರು ರಷ್ಯಾದಲ್ಲಿ ದೊಡ್ಡ ಕುಟುಂಬವನ್ನು ಹೊಂದುತ್ತಾರೋ ಅವರು ದೇಶ ಪ್ರೇಮಿಗಳು ಎಂದು ಪುತಿನ್​ ಕರೆದಿದ್ದಾರೆ.

    ಇದು ನಿಸ್ಸಂಶಯವಾಗಿ ರಷ್ಯಾದ ಮಹಿಳೆಯರನ್ನು ಪ್ರೋತ್ಸಾಹಿಸಲು ಅಥವಾ ಅವರಿಗೆ ಹೆಚ್ಚು ಮಕ್ಕಳನ್ನು ಹೊಂದಲು ಮತ್ತು ನಿಜವಾಗಿಯೂ ದೊಡ್ಡ ಕುಟುಂಬಗಳನ್ನು ಹೊಂದಲು ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಮ್ಯಾಥರ್ಸ್​ ಅವರು ಹೇಳಿದ್ದಾರೆ. ಆದರೆ, ರಷ್ಯಾದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿರುವಾಗ 13,500 ಪೌಂಡ್‌ಗಳಿಗೆ 10 ಮಕ್ಕಳನ್ನು ಬೆಳೆಸುವುದು ಸುಲಭದ ಮಾತಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)

    ಕುಣಿಗಲ್​ನಲ್ಲಿ ಅಕ್ರಮವಾಗಿ ಜಲ್ಲಿಕಲ್ಲು ಸಾಗಾಟ: ರಸ್ತೆಬದಿ ನಿಂತು ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಆಯ್ತು ತಕ್ಕಶಾಸ್ತಿ

    ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

    ಪ್ರೀತಿ ನಿರಾಕರಿಸಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿಗೆ ಗುಂಡಿಕ್ಕಿದ ಯುವಕ: ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts