More

    ಮೊಳಗಲಿಲ್ಲ ಮಂಗಳವಾದ್ಯ… ಇಸ್ರೇಲ್​- ಹಮಾಸ್ ಯುದ್ಧದಲ್ಲಿ ಭಾರತೀಯ ಮೂಲದ ಯೋಧ ಹುತಾತ್ಮ

    ಜೆರುಸಲೇಂ: ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಯುದ್ಧ ಭೀಕರವಾಗಿ ಮುಂದುವರಿದಿದೆ. ಈ ಯುದ್ಧದಲ್ಲಿ ಭಾರತವೇನೂ ನೇರವಾಗಿ ಇಲ್ಲವೇ ಪರೋಕ್ಷವಾಗಿ ಭಾಗವಹಿಸಿಲ್ಲ. ಹೀಗಿದ್ದರೂ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಈ ಕದನದಲ್ಲಿ ಕೊನೆಯುಸಿರೆಳೆದಿದ್ದಾರೆ.

    ಹಮಾಸ್ ಆಳ್ವಿಕೆಯ ಗಾಜಾ ಪಟ್ಟಿಯಲ್ಲಿ ಈ ವಾರ ನಡೆದ ಹೋರಾಟದಲ್ಲಿ 34 ವರ್ಷದ ಭಾರತೀಯ ಮೂಲದ ಇಸ್ರೇಲಿ ಯೋಧ ಹುತಾತ್ಮರಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಗಿಲ್​ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು.

    ಇವರು ಬೆನೆ ಇಸ್ರೇಲ್ ಸಮುದಾಯದ ಸದಸ್ಯರಾಗಿದ್ದರು. ಇವರ ಮೂಲವು ಭಾರತದ ಮಹಾರಾಷ್ಟ್ರ ಪ್ರದೇಶದಲ್ಲಿದೆ,

    ಅಶ್ಡೋಡ್‌ ನಿವಾಸಿಯಾಗಿರುವ 34 ವರ್ಷದ ಮಾಸ್ಟರ್ ಸಾರ್ಜೆಂಟ್ ಗಿಲ್ ಡೇನಿಯಲ್ಸ್ ಅವರು ಮಂಗಳವಾರ ಗಾಜಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಹುಟ್ಟೂರಿನ ಮಿಲಿಟರಿ ಸ್ಮಶಾನದಲ್ಲಿ ನಡೆಸಲಾಗಿದೆ.

    ಗಾಜಾ ಸ್ಟ್ರಿಪ್‌ನಲ್ಲಿ ನಡೆಸಿದ ಹೋರಾಟದಲ್ಲಿ ಕೊಲ್ಲಲ್ಪಟ್ಟ ಇಬ್ಬರು ಸೈನಿಕರಲ್ಲಿ ಗಿಲ್ ಒಬ್ಬರಾಗಿದ್ದಾರೆ ಇಸ್ರೇಲ್ ರಕ್ಷಣಾ ಪಡೆ ಕೂಡ ಖಚಿತಪಡಿಸಿದೆ.

    “ಈ ಕೆಟ್ಟ ಮತ್ತು ಕ್ರೂರ ಯುದ್ಧದಲ್ಲಿ ಇಸ್ರೇಲ್ ಅನೇಕ ಸೈನಿಕರನ್ನು, ಇಡೀ ಇಸ್ರೇಲ್ ರಾಷ್ಟ್ರದ ಗೌರವಕ್ಕಾಗಿ ಹೋರಾಡಲು ನಿಂತ ಅತ್ಯುತ್ತಮ ಪುತ್ರರು ಮತ್ತು ಹೆಣ್ಣುಮಕ್ಕಳನ್ನು ಕಳೆದುಕೊಂಡಿದೆ, ಇಂದು ನಾವು ಇನ್ನೊಬ್ಬ IDF (ಇಸ್ರೇಲ್ ರಕ್ಷಣಾ ಪಡೆ) ಸೈನಿಕ ಮಾಸ್ಟರ್ ಸಾರ್ಜೆಂಟ್ ಗಿಲ್ ಡೇನಿಯಲ್ಸ್ (34), (ಯೋಯೆಲ್ ಮತ್ತು ಮಜಲ್ ಅವರ ಪುತ್ರ) ಸಾವಿಗೆ ಶೋಕಿಸುತ್ತೇವೆ ಎಂದು” ಭಾರತೀಯ ಯಹೂದಿ ಹೆರಿಟೇಜ್ ಸೆಂಟರ್ ಹೇಳಿದೆ.

    “ಯುದ್ಧ ಪ್ರಾರಂಭವಾದ ಕೂಡಲೇ ಗಿಲ್ ಅವರು ಅಕ್ಟೋಬರ್ 10 ರಂದು ರಣರಂಗ ಪ್ರದೇಶಕ್ಕೆ ಹೋದರು. ಅವರ ಸ್ಮರಣೆಯು ಆಶೀರ್ವದಿಸಲ್ಪಡಲಿ” ಎಂದು ಅದು ಹೇಳಿದೆ.

    “ಅವರು ಮಹಾನ್ ವ್ಯಕ್ತಿತ್ವದ ಪ್ರತಿಭಾವಂತರಾಗಿದ್ದರು. ಒಂದು ತಿಂಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡರು. ಎಂತಹ ನಷ್ಟ!” ಎಂದು ಸ್ನೇಹಿತ ತಿರ್ಜಾ ಲವಿ ಶೋಕಿಸಿದ್ದಾರೆ.

    ಗಿಲ್ ಅವರು ಹೀಬ್ರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಕಿಫ್ ಗಿಮೆಲ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದರು.

    “ಅಪಾರವಾದ ನೋವಿನೊಂದಿಗೆ, 2007 ರ ತರಗತಿಯ 61 ನೇ ಗುಂಪಿನ ಸದಸ್ಯರು ನಾವು ಅವರ ಸಾವಿಗೆ ಸಂತಾಪ ಸೂಚಿಸುತ್ತೇವೆ… ಅವರ ನಗುವನ್ನು ಅವರ ಎಲ್ಲಾ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ” ಎಂದು ಗಿಲ್ ಅವರ ಸಹಪಾಠಿ ಹೇಳಿದ್ದಾರೆ.

    ಭಾರತೀಯ ಷೇರು ಮಾರುಕಟ್ಟೆ ಗಗನಮುಖಿ; ಸ್ಮಾಲ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳಲ್ಲಿ ಲಾಭದ ಹೊಳೆ

    ಜಪಾನ್‌ನ ಈ ಸ್ನೇಕ್​ ವಿಸ್ಕಿ ವಿಷಪೂರಿತವೇ? ‘ಹಬುಶು’ ಸೇವಿಸಿದರೆ ಪರಲೋಕಕ್ಕೆ ಪ್ರಯಾಣವೇ?

    ಮೂರು ರಾಜ್ಯಗಳಲ್ಲಿ ಯಾರಾಗಲಿದ್ದಾರೆ ಸಿಎಂ?: ವೀಕ್ಷಕರ ನೇಮಕಕ್ಕೆ ಬಿಜೆಪಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts