More

    ಪತ್ನಿ, ನಾದಿನಿಯನ್ನು ಕೊಂದು ಜೈಲುಪಾಲಾಗಿದ್ದ ಪ್ರಸಿದ್ಧ ವೀಣಾವಾದಕನಿಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮತ್ತು ನಾದಿನಿಯನ್ನು ಕೊಲೆ ಮಾಡಿ ಜೈಲುಪಾಲಾಗಿದ್ದ ಬೆಂಗಳೂರಿನ ಪ್ರಸಿದ್ಧ ವೀಣಾವಾದಕ ಬಿ.ಎಂ. ಚಂದ್ರಶೇಖರ್ ಅಲಿಯಾಸ್ ಚಂದ್ರುಗೆ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

    2013ರಲ್ಲಿ ಈ ಘಟನೆ ನಡೆದಿತ್ತು. ಕುಡುಕನಾಗಿದ್ದ ಚಂದ್ರಶೇಖರ್‌ ಅವರು ಹಣ ನೀಡುವಂತೆ ಪತ್ನಿ ಪ್ರೀತಿ ಹಾಗೂ ನಾದಿನಿಗೆ ಒತ್ತಾಯ ಮಾಡಿದ್ದರು. ಆದರೆ ಇದಕ್ಕೆ ಅವರು ಒಪ್ಪದಿದ್ದಾಗ ಮದ್ಯ ಕುಡಿಸಿ ಕೊಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಂಗಳೂರಿನ ಗಿರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಜೀವಾವಧಿ ಶಿಕ್ಷೆಯ ಜತೆ ಅವರ ಮಗಳಿಗೆ ಲಕ್ಷ ರೂಪಾಯಿ ಪರಿಹಾರ ಹಣ ನೀಡುವಂತೆ ನ್ಯಾಯಾಧೀಶ ಗುರುರಾಜ್ ಸೋಮಕಳ್ಳರ್ ಆದೇಶಿಸಿದ್ದಾರೆ. ಒಂದು ವೇಳೆ ಹಣ ನೀಡಲು ಅವರು ವಿಫಲರಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮಗುವಿನ ಭವಿಷ್ಯಕ್ಕೆ ಹಣ ಠೇವಣಿ ಇಡುವಂತೆ ಅವರು ನಿರ್ದೇಶಿಸಿದ್ದಾರೆ.

    ಇಂಥ ಕೃತ್ಯ ಎಸಗಿದವನಿಗೆ ಜೀವಾವಧಿ ಶಿಕ್ಷೆ ಸಾಲದು. ಗಲ್ಲುಶಿಕ್ಷೆಯೇ ಆಗಬೇಕು ಎಂದು ಕೋರಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರಾಗಿರುವ ಸತ್ಯವತಿ ಹೇಳಿದ್ದಾರೆ.

    ಕೈಯಲ್ಲಿ ಪಿಸ್ತೂಲ್‌- ಉಸಿರುಬಿಟ್ರೆ ಶೂಟ‌್ಔಟ್‌: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್‌ ಕಳ್ಳ ಸಿಕ್ಕಿಬಿದ್ದ

    ಕ್ರಷರ್‌ ಜಿಲೆಟಿನ್‌ ಸ್ಫೋಟ: ಪರಾರಿಯಾಗಿದ್ದ ಬಿಜೆಪಿ ಮುಖಂಡ ಸಿಕ್ಕಿಬಿದ್ದ – ಇನ್ಸ್‌ಪೆಕ್ಟರ್‌, ಎಸ್‌ಐ ಅಮಾನತು

    ನನ್ನ ಕಾಮನೆಗಳನ್ನು ಬಾಯಿಬಿಟ್ಟು ಹೇಳಿದ್ರೂ ಪತಿ ದೂರ ಹೋಗ್ತಿದ್ದಾರೆ, ದಾರಿ ತೋಚದಾಗಿದೆ… ಏನು ಮಾಡಲಿ?

    VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts