More

    ಉತ್ತರಾಖಂಡದಲ್ಲಿ ಹಿಮಸ್ಫೋಟ- ಅಪಾಯದಂಚಿನಲ್ಲಿ ಶ್ರೀನಗರ, ಹರಿದ್ವಾರ, ರಿಷಿಕೇಶ ಪ್ರವಾಸಿತಾಣ

    ಉತ್ತರಾಖಂಡ: ಉತ್ತರಾಖಂಡದಲ್ಲಿನ ಹಿಮ ಕುಸಿತದಿಂದಾಗಿ ಶ್ರೀನಗರ, ಹರಿದ್ವಾರ ಮತ್ತು ರಿಷಿಕೇಶ ಅಪಾಯದ ಅಂಚಿನಲ್ಲಿವೆ. ಇಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿರುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಂಜೆ ನಾಲ್ಕು ಗಂಟೆಗೆ ಶ್ರೀನಗರದಲ್ಲಿ ನೀರಿನ ಮಟ್ಟ 536 ಮೀಟರ್, ರಿಷಿಕೇಷಿಯಲ್ಲಿ 8 ಗಂಟೆಗೆ ಹೊತ್ತಿಗೆ 340.50 ಮೀ ಹಾಗೂ ಹರಿದ್ವಾರದಲ್ಲಿ 9 ಗಂಟೆಗೆ 294.00 ಮೀಟರ್​ಗೆ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆಯಿದೆ. ಶ್ರೀನಗರ, ಹೃಷಿಕೇಶಿ ಮತ್ತು ಹರಿದ್ವಾರದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಭಾಗಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ, ಅವರಿಗೆ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿರುವುದರಿಂದ ಜನರು ತಾಳ್ಮೆಯಿಂದಿರಿ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಐದು ತಂಡಗಳನ್ನು ಪ್ರವಾಹ ಸ್ಥಳಕ್ಕೆ ಕಳುಹಿಸಲಾಗಿದೆ.

    ಪ್ರವಾಹ ಭಾದಿತ ಪ್ರದೇಶಗಳಲ್ಲಿ ಸಿಲುಕಿದ್ದು, ಸಹಾಯ ಬೇಕಿದ್ದಲ್ಲಿ ವಿಪತ್ತು ಕಾರ್ಯಾಚರಣೆ ಸೆಂಟರ್ ನಂಬರ್ 1070 ಅಥವಾ 9557444486 ಸಂಪರ್ಕಿಸುವಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾಹಿತಿ ನೀಡಿದ್ದಾರೆ.

    ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ಉತ್ತರ್ ಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಪ್ರವಾಹ ಪೀಡಿತ ಜನರ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಹೆಚ್ಚುವರಿ ಪಡೆಯನ್ನು ದೆಹಲಿಯಿಂದ ಏರ್ ಲಿಫ್ಟ್ ಮಾಡಲಾಗುವುದು ಎಂದು ಅವರು ಟ್ವೀಟ್​ ಮಾಡಿದ್ದಾರೆ.

    ಹಿಮ ಯಮನಿಗೆ ಎಂಟು ಬಲಿ! 160ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿರುವ ಶಂಕೆ

    ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!

    ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts