More

    VIDEO: ಕರೊನಾ ನಿಜಕ್ಕೂ ತೊಲಗಿ ಹೋಗುತ್ತಾ? ಅಮೆರಿಕದ ಪ್ರಸಿದ್ಧ ವೈರಾಲಜಿಸ್ಟ್‌ ನೀಡಿದ್ದಾರೆ ನೆಮ್ಮದಿಯ ಸುದ್ದಿ…

    ವಾಷಿಂಗ್ಟನ್‌: ಕಳೆದ ಎರಡೂವರೆ ವರ್ಷಗಳಿಂದ ಕರೊನಾದಿಂದಾಗಿ ವಿಶ್ವದ ಜನರ ಬದುಕು ಹೈರಾಣಾಗಿ ಹೋಗಿದೆ. ಇದರ ನಡುವೆಯೇ ಒಮಿಕ್ರಾನ್‌ ಸೇರಿದಂತೆ ಹಲವಾರು ವೈರಸ್‌ಗಳು ಬಾಧಿಸಲು ಶುರು ಮಾಡಿದ್ದು, ಇವುಗಳ ಅಂತ್ಯವೇ ಇಲ್ಲ ಎನ್ನುವಂಥ ಸ್ಥಿತಿ ತಲುಪಿದ್ದೇವೆ.

    ಇವುಗಳ ಮಧ್ಯೆ ಇದೀಗ ವಾಷಿಂಗ್ಟನ್​ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ನೆಮ್ಮದಿಯ ವಿಷಯವನ್ನು ತಿಳಿಸಿದ್ದಾರೆ. ಅದೇನೆಂದರೆ ಕರೊನಾದ ಅಂತ್ಯವು ಬಹಳ ಹತ್ತಿರದಲ್ಲಿದೆ. ಕರೊನಾ ಲಸಿಕೆಯು ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಕರೊನಾ ರೂಪಾಂತರ ಹೊಂದುವುದರಲ್ಲಿ ಆಶ್ಚರ್ಯವಿಲ್ಲ. ಲಸಿಕೆಯ ಮೂಲಕ ಅವನ್ನು ಎದುರಿಸಲು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮರು ಸೋಂಕು ಉಂಟಾಗುತ್ತದೆ. ಅದನ್ನು ಬೂಸ್ಟರ್​ ಡೋಸ್​ನಿಂದ ಎದುರಿಸಬಹುದು ಎಂದಿದ್ದಾರೆ.

    ಸುದ್ದಿಸಂಸ್ಥೆ ಎಎನ್​ಐ ಜತೆ ಅವರು ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ್ದಾರೆ. ಈ ವೈರಸ್‌ ಶಾಶ್ವತವಾಗಿ ಮುಂದುವರೆಯುವುದಿಲ್ಲ. ಇದು ಮನುಷ್ಯ ಹಾಗೂ ವೈರಸ್ ನಡುವಿನ ಚೆಸ್ ಆಟದಂತೆ. ಇದರಲ್ಲಿ ಮನುಷ್ಯನ ಸಣ್ಣ ನಡೆಗಳೆಂದರೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ. ವೈರಸ್ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳು.’ ಆದರೆ ಇಲ್ಲಿ ವಿಜೇತರಿಲ್ಲ. ಪಂದ್ಯ ಡ್ರಾ ಆಗಲಿದೆ. ಇದರ ಅರ್ಥ ವೈರಸ್‌ ತೊಲಗಲಿದೆ. ಶೀಘ್ರದಲ್ಲೇ ಎಲ್ಲರೂ ಮಾಸ್ಕ್ ಇಲ್ಲದೇ ಓಡಾಡುವ ದಿನಗಳು ಬರಲಿವೆ ಎಂದು ಅವರು ಹೇಳಿದ್ದಾರೆ.

    ಭಾರತವು ವರ್ಷದೊಳಗೆ ಶೇ.60 ರಷ್ಟು ಲಸಿಕೆ ನೀಡಕೆ ಪೂರ್ತಿಗೊಳಿಸಿದ್ದಕ್ಕೆ ದೇಶವನ್ನು ಇದೇ ವೇಳೆ ಡಾ.ಕುತುಬ್ ಅಭಿನಂದಿಸಿದ್ದಾರೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. ಈ ಒಂದು ವರ್ಷದಲ್ಲಿ ನಾವು ಸುಮಾರು 60 ಪ್ರತಿಶತದಷ್ಟು ಲಸಿಕೆಯ ಗುರಿ ಸಾಧಿಸಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್​ನ ಬೂಸ್ಟರ್ ಡೋಸ್ ಒಮಿಕ್ರಾನ್ ವಿರುದ್ಧ 90 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಡಾ.ಕುತುಬ್, ಎರಡು ವರ್ಷದ ಮಕ್ಕಳಲ್ಲೂ ಇದು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.​

    ಇಲ್ಲಿದೆ ನೋಡಿ ಅವರು ಹೇಳಿರುವ ಮಾತು

    ‘ಮೇಡಂ ಬ್ಲೌಸ್‌ ಧರಿಸಿ ವಿಮಾನ ಹತ್ತಿ, ಇಲ್ಲದಿದ್ರೆ ಹೊರ ಹೋಗಿ’ ಎಂದ ಏರ್‌ಲೈನ್ಸ್‌: ಶಾಕ್‌ನಲ್ಲಿ ಮಾಜಿ ಭುವನ ಸುಂದರಿ!

    ಇವರೇ ನೋಡಿ ಭಾರತದ ‘ವಿವಾಹಿತ ಸುಂದರಿ’… ಮಿಸೆಸ್ ವರ್ಲ್ಡ್ ಆಗಲು ಹೊರಟ ಆರು ವರ್ಷದ ಮಗಳ ಅಮ್ಮ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts