More

    ಅಮೆರಿಕದಲ್ಲಿ ರಾಷ್ಟ್ರೀಯ ಕಾಲೇಜ್ ಬಾಕ್ಸಿಂಗ್ ಟೂರ್ನಿ; ರಾಜ್ಯದ ಅವನೀಶ್​ ಬೆಂಕಿಗೆ ಚಿನ್ನದ ಪದಕ

    ಶಾರ್ಲೆಟ್: ಕಳೆದ ವರ್ಷದ ಚಾಂಪಿಯನ್ ಅವನೀಶ್ ಬೆಂಕಿ (20) ಇದೇ ಏಪ್ರಿಲ್ 11 ರಿಂದ 13 ರವರಗೆ ಶಾರ್ಲೆಟ್ ನಾರ್ತ್ ಕ್ಯಾರೋಲಿನ ದಲ್ಲಿ ನಡೆದ “ಅಮೆರಿಕಾದ ನ್ಯಾಷನಲ್ ಕಾಲೇಜಿಯಟ್ ಬಾಕ್ಸಿಂಗ್” ಟೂರ್ನಿಯಲ್ಲಿ 119 ಪೌಂಡ್ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ಅವನೀಶ್ ಬೆಂಕಿ ಫೈನಲ್ ಪಂದ್ಯದಲ್ಲಿ ಯುನಿವರ್ಸಿಟಿ ಆಫ್ ಕನ್ನೆಕ್ಟಿಕಟ್​ನ ಬಾಕ್ಸರ್ ಹೆಡನ್ ಈಸ್ಟಮನ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದು ವಿಜಯೋತ್ಸವ ಆಚರಿಸಿದರು. ಇದಕ್ಕೂ ಮೊದಲು ಅವನೀಶ್ ಸೆಮಿ ಫೈನಲ್ ನಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಸಂತಾಕ್ಲೇರ ಯುನಿವರ್ಸಿಟಿಯ ಇತನ್ ಚುಂಗ್ ಅವರನ್ನು ಸೋಲಿಸಿದ್ದರು.

    ಕರ್ನಾಟಕ ಮೂಲದ ಅಪ್ಪಟ ಕನ್ನಡ ಪ್ರೇಮಿ ಬೆಂಕಿ ಬಸಣ್ಣ ಮತ್ತು ಉಮಾ ಅವರ ಪುತ್ರ 20 ವರ್ಷದ ಅವನೀಶ್ ಬೆಂಕಿ ವಿಶ್ವವಿಖ್ಯಾತ ಪ್ರತಿಷ್ಠಿತ ಯುನೈಟೆಡ್ ಸ್ಟೇಟ್ಸ್ ಮಿಲ್ಟ್ರಿ ಅಕಾಡೆಮಿ ವೆಸ್ಟ್ ಪಾಯಿಂಟ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಅವನೀಶ್ ತನ್ನ ಕಾಲೇಜು ಜೀವನದ ಎರಡು ವರ್ಷಗಳಲ್ಲಿ ತನ್ನ ತೂಕದ ಕೆಟಗರಿಯಲ್ಲಿ ಅಮೇರಿಕಾದ ನ್ಯಾಷನಲ್ ಕಾಲೇಜಿಯೇಟ್ ಬಾಕ್ಸಿಂಗ್ ಚಾಂಪಿಯನ್ಶಿಪ್​​​ನಲ್ಲಿ ಸತತವಾಗಿ ಎರಡನೇ ಬಾರಿಯೂ ಚಿನ್ನದ ಪದಕ ಗೆಲ್ಲುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.

    Avaneesh benki

    ಇದನ್ನೂ ಓದಿ: ಸೌಂದರ್ಯ ಜಗದೀಶ್​ ಸೂಸೈಡ್​ ಪ್ರಕರಣ; ಸ್ನೇಹಿತ ಕೊಟ್ಟ ಸ್ಪಷ್ಟನೆ ಹೀಗಿದೆ

    ಈ ಹಿಂದೆ 2013 ರಲ್ಲಿ ಕೇವಲ ಒಂಬತ್ತು ವರ್ಷದವನಾಗಿದ್ದಾಗ ತೈ ಕ್ವಾನ್ ಡೊ ನಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಅವನೀಶ್ ಬೆಂಕಿ ಫ್ಲೋರಿಡಾ ರಾಜ್ಯದ ಪೋರ್ಟ್ ಲಾಡರ್ ಡೇಲ್ ನಲ್ಲಿ ನಡೆದ ಅಮೇರಿಕಾದ ನ್ಯಾಷನಲ್ ಲೆವೆಲ್ ತೈ ಕ್ವಾನ್ ಡೊ ನಲ್ಲಿ ಚಿನ್ನದ ಪದಕ ಪಡೆದಿದ್ದನು. ಹಾಗೆಯೇ ಟೆನ್ನಿಸ್ ನಲ್ಲಿ ಸಹಿತ ಒಳ್ಳೆಯ ಆಟಗಾರನಾಗಿರುವ ಅವನೇಶ್ ನ್ಯೂ ಹಾರ್ಟ್ ರಾಜ್ಯಮಟ್ಟದ ಟೆನಿಸ್ ಟೂರ್ನಮೆಂಟ್ ನಲ್ಲಿ ತನ್ನ ನಿಷ್ಕಯುನ ಹೈಸ್ಕೂಲನ ಕ್ಯಾಪ್ಟನ್ ಆಗಿ ಪ್ರತಿನಿಧಿಸಿದ್ದನು.

    ಅವನೀಶ್ ಬೆಂಕಿ ತನ್ನ ಹೈಸ್ಕೂಲ್ ದಿನಗಳಲ್ಲಿ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆಯ ಯೂಥ್ ಪ್ರೋಗ್ರಾಮ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ದೇಣಿಗೆ ನೀಡುವ ಜ್ಞಾನ ದೀವಿಗೆ ಕಾರ್ಯಕ್ರಮದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿದ್ದಾನೆ ಹಾಗೆಯೇ ಆಲ್ಬನಿ ಕನ್ನಡ ಸಂಘದ ಹಲವಾರು ಕಾರ್ಯಕ್ರಮಗಳಲ್ಲಿ ಚಿಕ್ಕಂದಿನಿಂದಲೂ ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts