More

    ಸಿಎಂ ತವರಿನಲ್ಲಿ ಅಬ್ಬರಿಸಿದ ಪ್ರಧಾನಿ; ನಾನು ಇರೋವರೆಗೂ ಇದು ಅಸಾಧ್ಯ ಎಂದ ಮೋದಿ

    ಮೈಸೂರು: ದೇಶದಲ್ಲಿ ಸಾರ್ವತ್ರಿಕ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಮೂಲಕ ಕಾಂಗ್ರೆಸ್​ಗೆ ಟಕ್ಕರ್​ ಕೊಟ್ಟಿದ್ದಾರೆ.

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹಾಸನ, ಮಂಡ್ಯ, ಮೈಸೂರು. ಚಾಮರಾಜನಗರ ಕ್ಷೇತ್ರಗಳ ಅಭ್ಯರ್ಥಿ ಪರ ಮತಯಾಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಬೇಡ್ಕರ್​ ಅವರ ಭಾವಚಿತ್ರವನ್ನು ನೀಡುವ ಮೂಲಕ ಮೈತ್ರಿ ನಾಯಕರು ಮೋದಿ ಅವರನ್ನು ಸತ್ಕರಿಸಿದ್ದಾರೆ.

    ನಿಮ್ಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ಮೋದಿ  ಚೈತ್ರ ನವರಾತ್ರಿಯಂದು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ ಹಾಗೂ ತಾಯಿ ಕಾವೇರಿಯ ಪಾದಗಳಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳಿದರು.

    ಇದನ್ನೂ ಓದಿ: ಮುಂಬೈನಲ್ಲಿ ಮನೆ ಖರೀದಿಸಿದ ಮಂಗಳೂರು ಬೆಡಗಿ; ಇದರ ಬೆಲೆ ಕೇಳಿದರೆ ನೀವು ಬೆರಗಾಗೋದು ಗ್ಯಾರಂಟಿ

    ದೇವೇಗೌಡರು ದೇಶದ ಹಿರಿಯ ರಾಜಕಾರಣಿಗಳು. ಅವರ ಆಶೀರ್ವಾದ ಪಡೆದಿರುವುದು ನನ್ನ ಭಾಗ್ಯ. ಇವರು ಅಂದು ಮಾತನಾಡಿದ್ದರಲ್ಲಿ ಕೆಲವೊಂದು ನನಗೆ ಅರ್ಥವಾಯಿತು.  ಇವತ್ತು ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಇದು ಮೋದಿ ಗ್ಯಾರಂಟಿ. ಬಡವರಿಗೆ ಮೂರು ಕೋಟಿ ಮನೆ ನಿರ್ಮಾಣ.  ಫ್ರೀ ರೇಷನ್‌ಅನ್ನು ಇನ್ನೂ ಐದು ವರ್ಷ ವಿಸ್ತರಣೆ ಮಾಡಿದ್ದೇವೆ. 70 ವರ್ಷಕ್ಕಿಂತ ಹಿರಿಯರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಮುಂದುವರಿಸಲಿದ್ದೇವೆ.‌ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿಯಾಗಿದ್ದು ದೇಶದ ಪ್ರತಿಯೊಬ್ಬ ನಾಗರೀಕನಿಗೂ ತಲುಪುತ್ತದೆ.

    ಮೊದಲು ಭಾರತ ಕೆಟ್ಟ ರಸ್ತೆಗಳಿಂದ ಸುದ್ದಿ ಆಗುತ್ತಿತ್ತು. ಇಂದು ಎಕ್ಸ್​​ಪ್ರೆಸ್ ವೇ, ಅಂಟರ್ ವಾಟರ್ ವೇ, ಏರ್ ವೇಗಳಿಗೆ ಹೆಸರುವಾಸಿಯಾಗಿದೆ. ಭಾರತ ವಿಶ್ವದ ಸಂಶೋಧನೆಯ ಕೇಂದ್ರವಾಗಿ ಬೆಳೆಯಲಿದೆ. ಭಾರತ ಕಡಿಮೆ ದರದಲ್ಲಿ ಔಷಧಿ, ವಾಹನ, ಸೆಮಿಕಂಡಕ್ಟರ್, ಯಂತ್ರೋಪಕರಣ ತಯಾರಿಸಲಿದೆ. ಆರ್ಟಿಕಲ್ 370, ತ್ರಿಬಲ್ ತಲಾಕ್‌, ರಾಮ ಮಂದಿರ ಸಂಕಲ್ಪ ಆಗಿದೆ. ಎನ್‌ಡಿಎ ಹೇಳಿದ್ದನ್ನೇ ಮಾಡಿ ತೋರಿಸುತ್ತದೆ. ಮೋದಿ ಗ್ಯಾರಂಟಿಗಳಿಗೆ ಬಲ ಸಿಗೋದೇ ನಿಮ್ಮೆಲ್ಲರ ಮತಗಳಿಂದ ಎಂದು ಹೇಳಿದ್ದಾರೆ.

    ಕರ್ನಾಟಕ ದೇಶದ ಐಟಿ & ಟೆಕ್ನಾಲಜಿ ಹಬ್‌ ಆಗಿದೆ. ಇಲ್ಲಿನ ಯುವಕರಿಗೆ ಇದರ ಹೆಚ್ಚಿನ ಲಾಭ ಸಿಗಬೇಕುಎಂಬ ನಿಟ್ಟಿನಲ್ಲಿ ನಾವು ಸಂಕಲ್ಪ ಪತ್ರದಲ್ಲಿ ಸ್ಥಳೀಯ ಭಾಷೆಗಳ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದೇವೆ. ಕನ್ನಡ ದೇಶದ ಸಮೃದ್ಧ ಭಾಷೆ. ಬಿಜೆಪಿಯ ಈ ಮಿಷನ್‌ನಿಂದ ಕನ್ನಡದ ವಿಸ್ತಾರವಾಗುತ್ತದೆ ಹಾಗೂ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಮೈಸೂರು, ಹಂಪಿ, ಬಾದಾಮಿ ರೀತಿಯ ಹೆರಿಟೇಜ್‌ ಸೈಟ್‌ಗಳನ್ನು ವಿಶ್ವ ಟೂರಿಸಂ ಭೂಪಟದಲ್ಲಿ ಪ್ರಮೋಟ್‌ ಮಾಡಲಿದ್ದೇನೆವೆ. ಇದರಿಂದ ಕರ್ನಾಟಕದಲ್ಲಿ ಟೂರಿಸಂ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇವೆಲ್ಲವೂ ಜಾರಿಯಾಗಲು ಬಿಜೆಪಿಗೆ ಮತ ನೀಡುವುದು ಅಗತ್ಯವಿದೆ.

    ಇದನ್ನೂ ಓದಿ: ಸೌಂದರ್ಯ ಜಗದೀಶ್​ ಸೂಸೈಡ್​ ಪ್ರಕರಣ; ಸ್ನೇಹಿತ ಕೊಟ್ಟ ಸ್ಪಷ್ಟನೆ ಹೀಗಿದೆ

    ಕರ್ನಾಟಕದಲ್ಲಿ ಎನ್‌ಡಿಎಗೆ ದೇವೇಗೌಡರ ಬಲ ಇದೆ. ಕುಮಾರಸ್ವಾಮಿ ಅನುಭವ ಕರ್ನಾಟಕದ ವಿಕಾಸಕ್ಕೆ ಅವಶ್ಯವಾಗಿದೆ. ಸುತ್ತೂರು ಮಠದ ಪರಂಪರೆ, ಕುವೆಂಪು ಏಕತಾ ಸಂದೇಶವಿದೆ. ಫೀಲ್ಡ್​ ಮಾರ್ಷಲ್ ಕಾರ್ಯಪ್ಪ, ಕೃಷ್ಣರಾಜ ಒಡೆಯರ್‌ ಜನ್ಮಭೂಮಿ. ರಾಷ್ಟ್ರಸೇವೆಗಾಗಿ ಮಕ್ಕಳನ್ನು ಸೇನೆಗೆ ಕಳಿಸಿದವರು ಕೊಡವರು ಎಂದು ಹೇಳಿದರು. ದೇಶವನ್ನು ಒಡೆಯುವವರು ಕಾಂಗ್ರೆಸ್​ನಲ್ಲಿದ್ದಾರೆ. ಭಾರತ ಮಾತೆಗೆ ಜೈಕಾರ ಹಾಕೋದಿಕ್ಕೂ ಅವರ ನಾಯಕರ ಬಳಿ ಅನುಮತಿ ಕೇಳುವ ಇವರನ್ನೂ ಜನರು ಯಾವತ್ತಿಗೂ ಕ್ಷಮಿಸುವುದಿಲ್ಲ.

    ವಿಶ್ವದಲ್ಲಿ ಭಾರತದ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಸಹಿಸಲಾರದೆ ಕಾಂಗ್ರೆಸ್​ನವರು ಹೊಟ್ಟೆ ಉರಿಯಿಂದ ನಮ್ಮ ಮೇಲೆ ಆಪಾದನೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್​ ನಾಯಕ ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಮಾತನಾಡುತ್ತಾರೆ. ಸರ್ಜಿಕಲ್​ ಹಾಗೂ ಏರ್​ಸ್ಟ್ರೈಕ್​ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್​​ನವರು ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ. ಪ್ರತಿಯೊಂದರಲ್ಲೂ ವೋಟ್​ ಬ್ಯಾಂಕ್​ ರಾಜಕಾರಣ ಮಾಡುವವರ ಕೈಗೆ ದೇಶದ ಆಡಳಿತ ಕೊಡಲು ಹೇಗೆ ಸಾಧ್ಯವಾಗುತ್ತದೆ.

    ಮೈಸೂರು ದಸರಾ ಇಡೀ ವಿಶ್ವದಲ್ಲೇ ಪ್ರಸಿದ್ಧಿ. ಜನವರಿ 22ರಂದು 500 ವರ್ಷಗಳ ಕನಸು ಅಯೋಧ್ಯೆಯಲ್ಲಿ ನನಸಾಯ್ತು. ಆದರೆ ಇವರು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದರು. ಇಂಡಿಯಾ ಮೈತ್ರಿಕೂಟದ ನಾಯಕರು ಸನಾತನ ಧರ್ಮವನ್ನೇ ನಾಶ ಮಾಡ್ತೀವಿ ಎಂದು ಹೇಳುತ್ತಾರೆ. ಎಲ್ಲಿಯವರೆಗೂ ಮೋದಿ ಹಾಗೂ ಬಿಜೆಪಿ ಇರುತ್ತದರೋ ಅಲ್ಲಿಯವರೆಗೂ ಸನಾತನ ಹಾಗೂ ಹಿಂದೂ ಧರ್ಮದ ನಾಶ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಮೈಸೂರಿನಲ್ಲಿ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts