More

    ಪ್ರಾಂಶುಪಾಲ ಹುದ್ದೆಗೆ ನೇಮಕಾತಿ- ಯುಪಿಎಸ್​ಸಿಯಿಂದ ಅರ್ಜಿ ಆಹ್ವಾನ: 363 ಸ್ಥಾನಗಳ ಭರ್ತಿ

    ದೆಹಲಿ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುವ ಶಿಕ್ಷಣ ಇಲಾಖೆಯಲ್ಲಿ 363 ಪ್ರಿನ್ಸಿಪಾಲ್ ಹುದ್ದೆಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಅಧಿಸೂಚನೆ ಹೊರಡಿಸಿದೆ. 363 ಹುದ್ದೆಗಳಲ್ಲಿ ಪುರುಷರಿಗೆ 208 ಸ್ಥಾನ ಹಾಗೂ ಮಹಿಳೆಯರಿಗೆ 155 ಸ್ಥಾನ ಮೀಸಲಿರಿಸಲಾಗಿದೆ. ಎಸ್ಸಿಗೆ 57, ಎಸ್ಟಿಗೆ 26, ಇತರ ಹಿಂದುಳಿದ ವರ್ಗಕ್ಕೆ 106, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 34, ಸಾಮಾನ್ಯವರ್ಗದ ಅಭ್ಯರ್ಥಿಗೆ 140, ಅಂಗವಿಕಲ ಅಭ್ಯರ್ಥಿಗೆ 15 ಸ್ಥಾನ ಮೀಸಲಿರಿಸಿದ್ದು, ಇದರಲ್ಲೂ ಮಹಿಳಾ, ಪುರುಷ ಅಭ್ಯರ್ಥಿಗೆ ನಿಗದಿತ ಸ್ಥಾನ ಕಾಯ್ದಿರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಶಾಶ್ವತ ಹುದ್ದೆಗಳಾಗಿದ್ದು, 7ನೇ ವೇತನ ಶ್ರೇಣಿ ಅನ್ವಯ ಲೆವೆಲ್ 12ರ ಅನುಸಾರ ವೇತನ ನಿಗದಿಪಡಿಸಲಾಗಿದೆ.

    ಒಟ್ಟು ಹುದ್ದೆಗಳು: 363

    ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ ವಿವಿಯಿಂದ ಸ್ನಾತಕೋತ್ತರ ಪದವಿ/ ಪಿಎಚ್.ಡಿ ಪಡೆದಿದ್ದು, ಕನಿಷ್ಠ 10 ವರ್ಷ ಬೋಧನಾನುಭವ ಕೇಳಲಾಗಿದೆ.

    ವಯೋಮಿತಿ: ಗರಿಷ್ಠ 50 ವರ್ಷ ವಯೀಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ನಂತರ ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಥವಾ ಕೇವಲ ಸಂದರ್ಶನ ಮೂಲಕವೂ ಆಯ್ಕೆ ಮಾಡಬಹುದಾಗಿದೆ.

    ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.

    ಸೂಚನೆ: ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬೇಕು. ಆನ್​ಲೈನ್ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು 30.7.2021ರ ಸಂಜೆ 12 ಗಂಟೆ ಒಳಗಾಗಿ ತೆಗೆದಿಟ್ಟುಕೊಳ್ಳಬಹುದು. ದಾಖಲೆಗಳು ಹಿಂದಿ ಅಥವಾ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಅಂತಹ ದಾಖಲೆಗಳಿಗೆ ಗೆಜೆಟೆಡ್ ಅಧಿಕಾರಿಯಿಂದ ದೃಡೀಕರಣ ಪಡೆದು ಸಲ್ಲಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 29.7.2021

    ಅಧಿಸೂಚನೆಗೆ: https://bit.ly/3r1VQtJ

    ಮಾಹಿತಿಗೆ: www.upsc.gov.in

    ಇದು ಹಿಂದೂ-ಮುಸ್ಲಿಂ ದುರಂತ ಲವ್​ ಸ್ಟೋರಿ: ಹಸೆಮಣೆ ಏರಲು ಸಿದ್ಧವಾದವರಿಗೆ ಕೊಳ್ಳಿ ಇಟ್ಟ ‘ಲವ್​ ಜಿಹಾದ್​’

    VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts