More

    ಸ್ನಾನ ಮಾಡದೆ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣದಲ್ಲಿ ಸ್ನಾನ ಮಾಡಲು ಒತ್ತಾಯಿಸಿದ ಪ್ರಾಂಶುಪಾಲ!

    ಉತ್ತರಪ್ರದೇಶ: ಓರ್ವ ವ್ಯಕ್ತಿ ದೈಹಿಕವಾಗಿ ಶುದ್ಧನಾಗಲು ಪ್ರತಿಯೊಂದು ದಿನವೂ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಸ್ನಾನ ಮಾಡದೆ ತರಗತಿಗೆ ಹಾಜರಾಗಿದ್ದರು. ಗಮನಿಸಿದ ಪ್ರಾಂಶುಪಾಲರು ಅವರಿಗೆ ವಿನೂತನ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದ ಬರೇಲಿ ಛತ್ರಪತಿ ಶಿವಾಜಿ ಇಂಟರ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸ್ನಾನ ಮಾಡದೆ ತರಗತಿಗಳಿಗೆ ಹಾಜರಾಗಿದ್ದರು. ಈ ವಿಷಯ ತಿಳಿದ ಪ್ರಾಂಶುಪಾಲರು ಅವರಿಗೆ ವಿನೂತನ ಶಿಕ್ಷೆ ನೀಡಿದ್ದಾರೆ. ಕಾಲೇಜು ಆವರಣದಲ್ಲಿರುವ ಪಂಪ್‌ನಲ್ಲಿರುವ ಟ್ಯಾಂಕ್‌ನಲ್ಲಿ ನೀರು ಹಾಕಿ ಸ್ನಾನ ಮಾಡುವಂತೆ ಒತ್ತಾಯಿಸಲಾಯಿತು. 

    ಚಳಿಯಲ್ಲಿ ನಡುಗುತ್ತಿದ್ದ ವಿದ್ಯಾರ್ಥಿಗಳು ತಣ್ಣೀರಲ್ಲೇ ಸ್ನಾನ ಮಾಡಬೇಕಾಯಿತು. ಐವರು ವಿದ್ಯಾರ್ಥಿಗಳು ಬೆಳಗ್ಗೆ 10 ಗಂಟೆಗೆ ಪಂಪ್‌ಸೆಟ್ಟುವಿನಲ್ಲಿ ಸ್ನಾನ ಮಾಡಿದರು. ಇದನ್ನು ಸ್ವತಃ ಪ್ರಾಂಶುಪಾಲ ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 

    ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮೊದಲು, ಪ್ರತಿದಿನ ಸ್ನಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಚಳಿ ಭಯ ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹೀಗೆ ಮಾಡಿದ್ದೇನೆ ಎಂದು ಪ್ರಾಂಶುಪಾಲ ರಣವಿಜಯಸಿಂಗ್ ಯಾದವ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಾಂಶುಪಾಲರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. 

    ಕೋವಿಡ್‌ ರೂಪಾಂತರಿ JN.1ನ ಈ ಲಕ್ಷಣಗಳು ಕಾಣಿಸಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ…ಕೂಡಲೇ ಎಚ್ಚೆತ್ತುಕೊಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts