More

    ಎಂಕಾಂ, ಎಂಬಿಎ ಪದವೀಧರರಿಗೆ ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗಾವಕಾಶ

    ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​ನ (ಕೆಐಒಸಿಎಲ್​) ಬೆಂಗಳೂರು ಹಾಗೂ ಮಂಗಳೂರಿನ ವಿವಿಧ ವಿಭಾಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಒಟ್ಟು ಹುದ್ದೆಗಳು: 18
    ಕೆಐಒಸಿಎಲ್​ನಲ್ಲಿ ಟ್ರೇನಿ ಆಫೀಸರ್​ಗಳಾಗಿ
    * ಆಡಳಿತ, ಹಣಕಾಸು, ತಾಂತ್ರಿಕ, ಉತ್ಪಾದನೆ ವಲಯದಲ್ಲಿ ಅವಕಾಶ

    ಕೆಐಒಸಿಎಲ್​ನಲ್ಲಿ 3 ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ 2 ವರ್ಷ ಅವಧಿ ವಿಸ್ತರಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ, ವೃತ್ತಿ ಅನುಭವಗಳಲ್ಲಿ ವಿನಾಯಿತಿ ನೀಡಲಾಗುವುದು.

    ಹುದ್ದೆ ವಿವರ
    * ಆಫೀಸರ್​ ಟ್ರೇನಿ (ಫೈನಾನ್ಸ್​ ಆ್ಯಂಡ್​ ಅಕೌಂಟ್ಸ್​ ಇಲಾಖೆ) – 3
    * ಆಫೀಸರ್​ ಟ್ರೇನಿ (ಕಮಷಿರ್ಯಲ್​ ಇಲಾಖೆ) – 3
    * ಆಫೀಸರ್​ ಟ್ರೇನಿ (ಪಚೇರ್ಸ್​ ಇಲಾಖೆ) – 4
    * ಆಫೀಸರ್​ ಟ್ರೇನಿ (ಜಿಎಂ ಪ್ರೊಡಕ್ಷನ್​ ಮಂಗಳೂರು) – 2
    * ಆಫೀಸರ್​ ಟ್ರೇನಿ (ಕಾಂಟ್ರಾಕ್ಟ್​ ಇಲಾಖೆ) – 1
    * ಆಫೀಸರ್​ ಟ್ರೇನಿ (ಪೆಲೆಟ್​ ಪ್ಲಾಂಟ್​ ಆ್ಯಂಡ್​ ಪೋರ್ಟ್​ ಫೆಸಿಲಿಟಿ ಇಲಾಖೆ, ಮಂಗಳೂರು) – 2
    * ಆಫೀಸರ್​ ಟ್ರೇನಿ (ಟೆಕ್ನಿಕಲ್​ ಸವಿರ್ಸ್​ ಇಲಾಖೆ) – 2
    * ಆಫೀಸರ್​ ಟ್ರೇನಿ (ಕಾರ್ಪೋರೆಟ್‌​ ಕಮ್ಯುನಿಕೇಷನ್​/ ಪಬ್ಲಿಕ್​ ರಿಲೇಷನ್​ ಇಲಾಖೆ) – 1

    ಶೈಕ್ಷಣಿಕ ಅರ್ಹತೆ: ಎಂಬಿಎ / ಎಂಕಾಂ ಅನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕನಿಷ್ಠ ಶೇ.60-65 ಅಂಕ ಪಡೆದಿರಬೇಕು. ಕನಿಷ್ಠ 1 ವರ್ಷದ ವೃತ್ತಿ ಅನುಭವ ಅವಶ್ಯ. ದೂರ/ ಅರೆಕಾಲಿಕ ಮೂಲಕ ಪಡೆದ ಎಂಬಿಎ ಪದವಿಗೆ ಮಾನ್ಯತೆ ಇಲ್ಲ. ಆದ್ದರಿಂದ ಅತಂಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸೂಚಿಸಲಾಗಿದೆ.

    ವಯೋಮಿತಿ: 31.5.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಮಾಸಿಕ 20,00 ರೂ.ನಿಂದ 25,000 ರೂ. ಇದೆ.

    ಸೂಚನೆ: ಅರ್ಜಿ ಸಲ್ಲಿಸಿದ ಬಳಿಕ ಪ್ರಕಟವಾಗುವ ಅರ್ಜಿ ಸಂಖ್ಯೆಯನ್ನು ಅಭ್ಯರ್ಥಿಗಳು ಕಾಯ್ದಿರಿಸಿಕೊಳ್ಳಬೇಕು. ಅಲ್ಲದೇ 14.7.2021ರ ಒಳಗಾಗಿ ಆನ್​ಲಫೈನ್​ ಅರ್ಜಿ ಯ ಪ್ರತಿಪಡೆದು, ಅಗತ್ಯ ದಾಖಲೆಯೊಂದಿದೆ Joint General Manager (HR-A), HR Department, KIOCL Limited, Koramangala 2nd Block, Sarjapura Road, Bengaluru-560 034 ವಿಳಾಸಕ್ಕೆ ಪೋಸ್ಟ್​ ಮಾಡಬೇಕು. ಇದರಲ್ಲಿ ಅರ್ಜಿ ಸಂಖ್ಯೆಯನ್ನು ಮರೆಯದೆ ನಮೂದಿಸಬೇಕು ಎಂದು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 9.7.2021
    ಅಧಿಸೂಚನೆಗೆ: https://bit.ly/3gJYK1k
    ಮಾಹಿತಿಗೆ: https://www.kioclltd.in/

    ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸೇನಾ ಪಡೆಯಲ್ಲಿ 100 ವಿವಿಧ ಹುದ್ದೆಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ನೇಮಕಾತಿ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts