More

    ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಮುಗಿಸಿರುವಿರಾ? ನಿಮಗಾಗಿ ಕಾದಿವೆ 120 ಹುದ್ದೆಗಳು

    ಎನ್‍ಬಿಸಿಸಿ (ಇಂಡಿಯಾ) ಎಂದೇ ಖ್ಯಾತಿ ಪಡೆದಿರುವ ನ್ಯಾಷನಲ್ ಬಿಲ್ಡಿಂಗ್ಸ್ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್ ಲಿಮಿಟೆಡ್ ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಲವು ವಿಸ್ತರಣಾ ಕಾರ್ಯಗಳಲ್ಲಿ ತೊಡಗಿದ್ದು, ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ಶೋಧ ನಡೆಸಿದೆ.
    ಒಟ್ಟು ಹುದ್ದೆಗಳು: 120

    ಎನ್‍ಬಿಸಿಸಿ ಸಂಸ್ಥೆಯನ್ನು ದೇಶ ಹಾಗೂ ವಿದೇಶದಲ್ಲಿ ಬೆಳೆಸಬಲ್ಲ ಅಭ್ಯರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. 120 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 49 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 32 ಸ್ಥಾನ, ಎಸ್ಸಿಗೆ 18, ಎಸ್ಟಿಗೆ 9, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 12 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 5 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ.

    ಹುದ್ದೆ ವಿವರ
    * ಸೈಟ್ ಇನ್‍ಸ್ಪೆಕ್ಟರ್ (ಸಿವಿಲ್) – 80
    ಸಿವಿಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.55 ಅಂಕ ಪಡೆದಿರಬೇಕು. ಪಿಎಂಸಿ/ ಇಪಿಸಿ/ ರಿಯಲ್ ಎಸ್ಟೇಟ್/ ಇನ್​ಫ್ರಾಸ್ಟ್ರಕ್ಚರ್​ ವೃತ್ತಿ ಅನುಭವ ಇರಬೇಕು.

    * ಸೈಟ್ ಇನ್‍ಸ್ಪೆಕ್ಟರ್ (ಎಲೆಕ್ಟ್ರಿಕಲ್) – 40
    ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಮಾಡಿದ್ದು ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.55 ಅಂಕ ಪಡೆದಿರಬೇಕು. ವಿದ್ಯುತ್ ಯೋಜನೆಗಳ ಪ್ಲಾನಿಂಗ್ ಮತ್ತು ನಿರ್ವಹಣೆ ಬಗ್ಗೆ ವೃತ್ತಿ ಅನುಭವ ಇರಬೇಕು.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 5 ವರ್ಷ ವಯೋ ಸಡಿಲಿಕೆ ಇದೆ.

    ವೇತನ: ಮಾಸಿಕ 31,000 ರೂ. ವೇತನ ಜತೆ, ವಾರ್ಷಿಕ ಪಿಎಲ್‍ಐ, ವೈದ್ಯಕೀಯ ಸೌಲಭ್ಯ, ಪಿಎï/ ಗ್ರಾಚುಟಿ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಸಂಸ್ಥೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕ ಪಡೆಯಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಬೆಂಗಳೂರು ಸೇರಿ ಇತರ 21 ನಗರಗಳಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಸಮಯದಲ್ಲಿ ತಮ್ಮ ಆಯ್ಕೆಯ 2 ಪರೀಕ್ಷಾ ಕೇಂದ್ರಗಳನ್ನು ನಮೂದಿಸಬೇಕು. ಪರೀಕ್ಷೆ ಕುರಿತ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 14.4.2021
    ಅಧಿಸೂಚನೆಗೆ: https://bit.ly/2QBNNpb
    ಮಾಹಿತಿಗೆ: http://www.nbccindia.com

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಬಿಇ, ಬಿ.ಟೆಕ್ ಪದವೀಧರರಿಗೆ ಇನ್​ಸ್ಟೆಮ್​ನಲ್ಲಿದೆ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಪ್ಲೋಮಾ, ಹಿಂದಿ- ಇಂಗ್ಲಿಷ್​ನಲ್ಲಿ ಸ್ನಾತಕ ಪದವೀಧರರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ ಅರ್ಜಿ ಆಹ್ವಾನ

    ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts