More

    ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಏಮ್ಸ್​ನಲ್ಲಿದೆ 120 ಅರೆ ವೈದ್ಯಕೀಯ ಹುದ್ದೆಗಳು

    ಅರೆ ವೈದ್ಯಕೀಯ ಕೋರ್ಸ್‍ಗಳನ್ನು ವ್ಯಾಸಂಗ ಮಾಡಿದವರಿಗೆ ಭೋಪಾಲ್‍ನಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಬ್ರಾಡ್‍ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ಮೂಲಕ ಈ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪದವಿ, ಡಿಪ್ಲೋಮಾ, ಐಟಿಐ ಹಾಗೂ ಎಸ್‍ಎಸ್‍ಎಲ್‍ಸಿ ಆದವರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

    ಬಿಇಸಿಐಎಲ್‍ನಲ್ಲಿರುವ 120 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 68 ಸ್ಥಾನ, ಎಸ್ಸಿಗೆ 14, ಎಸ್ಟಿಗೆ 5, ಇತರ ಹಿಂದುಳಿದ ವರ್ಗಕ್ಕೆ 26, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಸರ್ಕಾರದ ನಿಯಮದಂತೆ ಇಪಿಎï, ಇಎಸ್‍ಐ, ಬೋನಸ್, ಮೆಟರ್ನಿಟಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು. ಒಬ್ಬ ಅಭ್ಯರ್ಥಿ ಬಹು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಪ್ರತಿ ಹುದ್ದೆಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಒಟ್ಟು ಹುದ್ದೆಗಳು: 120

    ವೇತನ ಈ ರೀತಿ ಇದೆ.
    ಸಿಎಸ್‍ಎಸ್‍ಡು ಟೆಕ್ನಿಷಿಯನ್ – 2 ಹುದ್ದೆ- ವೇತನ 33,450

    ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನೀಷಿಯನ್ – 2 ಹುದ್ದೆ- 42,950 ರೂ

    ಪರ್ಫ್ಯೂನಿಸ್ಟ್- 2 ಹುದ್ದೆ- 42,950 ರೂ

    ಲ್ಯಾಬ್ ಅಟೆಂಡೆಂಟ್ ಗ್ರೇಡ್ ಐಐ- 41 ಹುದ್ದೆ- 17,303ರೂ

    ಲ್ಯಾಬ್ ಟೆಕ್ನಿಷಿಯನ್- 1 ಹುದ್ದೆ- 27,250 ರೂ

    ಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್/ ರಿಸೆಪ್ಷನಿಸ್ಟ್- 10 ಹುದ್ದೆ- 27,250 ರೂ

    ಫಾರ್ಮಾ ಕೆಮಿಸ್ಟ್/ ಕೆಮಿಕಲ್ ಎಕ್ಸ್‍ಮೈನರ್-1 ಹುದ್ದೆ- 27,250 ರೂ

    ಫಾರ್ಮಸಿಸ್ಟ್ ಗ್ರೇಡ್ ಐಐ- 8 ಹುದ್ದೆ- 27,250 ರೂ

    ಡಾರ್ಕ್ ರೂಮ್ ಅಸಿಸ್ಟೆಂಟ್ ಗ್ರೇಡ್ ಐಐ- 5 ಹುದ್ದೆ- 23,550 ರೂ

    ಡಿಸ್ಪೆನ್ಸಿಂಗ್ ಅಟೆಂಡೆಂಟ್ಸ್- 4 ಹುದ್ದೆ- 23,550 ರೂ

    ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್- 38 ಹುದ್ದೆ- 23,550 ರೂ

    ಸೀನಿಯರ್ ಮೆಷಿನಿಸ್ಟ್ (ಎ/ಸಿ ಆ್ಯಂಡ್ ಆರ್) 6-ಹುದ್ದೆ- 23,550 ರೂ

    ಜೂನಿಯರ್ ಸ್ಕೇಲ್ ಸ್ಟೆನೊ (ಹಿಂದಿ) 1 ಹುದ್ದೆ- 23,550 ರೂ

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಡಿಪ್ಲೋಮಾ (ಫಾರ್ಮಸಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಪರ್ಫರ್ಯೂಷನ್ ಟೆಕ್ನಾಲಜಿ), ಐಟಿಐ, ದ್ವಿತೀಯ ಪಿಯುಸಿ, ಮೆಡಿಕಲ್, ನ್ಯೂಕ್ಲಿಯರ್ ಮೆಡಿಸನ್ ಟೆಕ್ನಾಲಜಿ, ಫಿಜಿಕ್ಸ್/ ಕೆಮಿಸ್ಟ್ರಿ/ ಬಯೋಕೆಮಿಸ್ಟ್ರಿ/ ಮೈಕ್ರೋಬಯೋಲಜಿ/ ಲೈಸೈನ್ಸ್, ಮಾಸ್ ಕಮ್ಯುನಿಕೇಷನ್, ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18, 21 ವರ್ಷ, ಗರಿಷ್ಠ 27, 30, 35, 40 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ಮೀಸಲಾತಿ ನಿಗದಿಯಾಗಿದೆ.

    ಆಯ್ಕೆ ಪ್ರಕ್ರಿಯೆ: ಆಯ್ದ ಅಭ್ಯರ್ಥಿಗಳನ್ನು 1:7 ಅನುಪಾತದಲ್ಲಿ ಪರೀಕ್ಷೆ/ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಇಂಗ್ಲಿಷ್, ಗಣಿತ, ಲಾಜಿಕಲ್ ರೀಸನಿಂಗ್, ಸಾಮಾನ್ಯ ಜ್ಞಾನ ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು. ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಪರೀಕ್ಷಾ ಕೇಂದ್ರ ನಿಗದಿಪಡಿಸಲಾಗುವುದು.

    ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗದ (ಮಾಜಿ ಸೈನಿಕರನ್ನೂ ಸೇರಿ) ಅಭ್ಯರ್ಥಿಗಳಿಗೆ 830 ರೂ., ಎಸ್ಸಿ, ಎಸ್ಟಿ, ಅಂಗವಿಕಲ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 600 ರೂ.

    ಅರ್ಜಿ ಸಲ್ಲಿಸಲು ಕೊನೇ ದಿನ: 22.2.2021
    ಅಧಿಸೂಚನೆಗೆ: https://bit.ly/3d7B7zR
    ಮಾಹಿತಿಗೆ: http://www.becil.com

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ

    ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

    ವಿವಿಧ ಇಂಜಿನಿಯರಿಂಗ್​ ಪದವೀಧರರಿಗೆ ಇಲ್ಲಿದೆ ಉದ್ಯೋಗಾವಕಾಶ- 38 ಹುದ್ದೆಗಳು ಖಾಲಿ

    ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts