More

    ಪದವಿ ಯಾವುದೇ ಇರಲಿ- ಕೇಂದ್ರ ಸರ್ಕಾರದಲ್ಲಿದೆ 300 ಹುದ್ದೆ: 60 ಸಾವಿರ ರೂ.ವರೆಗೆ ಸಂಬಳ

    ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ದ ನ್ಯೂ ಇಂಡಿಯಾ ಅಶ್ಯುರೆನ್ಸ್​ ಕಂಪನಿ ಲಿಮಿಟೆಡ್​ನಲ್ಲಿ 300 ಆಡಳಿತಾಧಿಕಾರಿಗಳ (ಅಡ್ಮಿನಿಸ್ಟ್ರೆಟೀವ್​ ಆಫೀಸರ್ಸ್​ – ಜರ್ನಲಿಸ್ಟ್​ ಕೇಡರ್​) ನೇಮಕ ಮಾಡಿಕೊಳ್ಳಲು ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. 300 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 121 ಸ್ಥಾನ, ಎಸ್ಸಿಗೆ 46, ಎಸ್ಟಿಗೆ 22, ಇತರ ಹಿಂದುಳಿದ ವರ್ಗಕ್ಕೆ 81, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 30 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ 17 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಅಂಗವಿಕಲತೆಯು ಶೇ.40ಕ್ಕಿಂತ ಹೆಚ್ಚಿರಬಾರದು ಎಂದು ಸೂಚಿಸಲಾಗಿದೆ.

    ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ಕಾಲೇಜು/ ವಿಶ್ವವಿದ್ಯಾಲಯದಲ್ಲಿ 30.9.2021ರ ಒಳಗಾಗಿ ಯಾವುದೇ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.60 (ಮೀಸಲಾತಿ ಅಭ್ಯರ್ಥಿಗಳು ಶೇ.55) ಅಂಕ ಪಡೆದಿರಬೇಕು. ಪ್ರಸ್ತುತ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಅಜಿರ್ಸಲ್ಲಿಸಬಹುದಾಗಿದ್ದು, ಅಂತಹ ಅಭ್ಯರ್ಥಿಗಳು 30.9.2021ರ ಒಳಗಾಗಿ ತಮ್ಮ ಅಂಕ ಪಟ್ಟಿ ಹಾಜರುಪಡಿಸಬೇಕು.

    ವೇತನ: ಮಾಸಿಕ ಮೂಲ ವೇತನವಾಗಿ 32,795– 60,000 ರೂ. ನೀಡಲಾಗುವುದು. ಇದರ ಜತೆ ಪೆನ್ಷನ್​, ಗ್ರಾಚ್ಯುಟಿ, ಎಲ್​ಟಿಎಸ್​, ವೈದ್ಯಕಿಯ ಸೌಲಭ್ಯ, ಅಪಘಾತ ಇನ್​ಶುರೆನ್ಸ್​ ಹಾಗೂ ಇತರ ಭತ್ಯೆ, ಸೌಲಭ್ಯಗಳನ್ನು ನೀಡಲಾಗುವುದು.

    ಬಾಂಡ್​ ಅವಧಿ: ಈ ಹುದ್ದೆಯು 4 ವರ್ಷದ ಅವಧಿಗೆ ಒಳಪಟ್ಟಿದ್ದು, ಇದರಲ್ಲಿ ಪ್ರೊಬೆಷನರಿ ಅವಧಿಯು ಒಳಗೊಂಡಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಒಂದು ವೇಳೆ ಬಾಂಡ್​ ಅವಧಿಗಿಂತ ಮೊದಲು ಅಭ್ಯಥಿರ್ಯು ಸಂಸ್ಥೆ ತೊರೆದಲ್ಲಿ ಅವರು ಪ್ರೊಬೆಷನರಿ ಅವಧಿಯಲ್ಲಿ ಅವರಿಗೆ ಪಾವತಿಸಲಾದ ಒಟ್ಟು ಸಂಬಳದ ಸಮನಾದ ಪರಿಹಾರವನ್ನು ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ: ಬಹು ಆಯ್ಕೆ ಮಾದರಿಯ ಪ್ರಿಲಿಮಿನರಿ (ಅಕ್ಟೋಬರ್​) ಹಾಗೂ ಮುಖ್ಯ ಪರೀಕ್ಷೆಯನ್ನು ನವೆಂಬರ್​ನಲ್ಲಿ ಆನ್​ಲೈನ್​ ಮೂಲಕ ನಡೆಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.ಕರ್ನಾಟಕ ಅಭ್ಯರ್ಥಿಗಳಿಗೆ ಆನ್​ಲೈನ್​ ಪರೀಕ್ಷೆಯ ಪರಿಾ ಕೇಂದ್ರ ಬೆಂಗಳೂರು ಆಗಿರುತ್ತದೆ.

    ಪರೀಕ್ಷೆ ಪೂರ್ವ ತರಬೇತಿ: ಎಸ್ಸಿ, ಎಸ್ಟಿ, ಅಂಗವಿಕಲ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷೆ ಪೂರ್ವ ತರಬೇತಿಯನ್ನು ಆನ್​ಲೈನ್​ ಮೂಲಕ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

    ವಯೋಮಿತಿ: 1.4.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ನಿಗದಿಪಡಿಸಿದ್ದು, ಮಿಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಅರ್ಜಿ ಶುಲ್ಕ: ಎಸ್​ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಹಾಗೂ ಉಳಿದ ಅಭ್ಯರ್ಥಿಗಳಿಗೆ 750 ರೂ. ಅಜಿರ್ ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.9.2021
    ಅಧಿಸೂಚನೆಗೆ: https://bit.ly/2XPxOHE
    ಮಾಹಿತಿಗೆ: http://www.newindia.co.in

    ವಿವಿಧ ಪದವೀಧರರಿಗೆ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ಭರಪೂರ ಉದ್ಯೋಗ- ಕೆಲವೇ ದಿನಗಳು ಬಾಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts