More

    ಇಲ್ಲಿ ಅನಿಲ, ಅಲ್ಲಿ ಸುನೀಲ- ಎರಡೆರಡು ಸರ್ಕಾರಿ ಸಂಬಳ ಪಡೀತಿದ್ದೋನ ಇಂಟರೆಸ್ಟಿಂಗ್‌ ಸ್ಟೋರಿ ಇದು…

    ಮುಜಾಫರ್‌ನಗರ (ಉತ್ತರ ಪ್ರದೇಶ): ಒಬ್ಬನೇ ವ್ಯಕ್ತಿ ಎರಡೆರಡು ಸರ್ಕಾರಿ ಹುದ್ದೆಗಳನ್ನು ನಿಭಾಯಿಸುತ್ತ, ಎರಡು ಸಂಬಳಗಳನ್ನು ಪಡೆಯುತ್ತಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ! ಅನಿಲ್‌ ಕುಮಾರ್‌ ಎಂಬ ಮುಜಾಫರ್​ನಗರದ ನಿವಾಸಿ 2016ರಿಂದಲೂ ಇಂಥ ಕೆಲಸ ನಿರಾತಂಕವಾಗಿ ಮಾಡುತ್ತ ಬಂದಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ!

    ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಈತ, ಅಲ್ಲಿಂದ 140 ಕಿ.ಮೀ. ದೂರದಲ್ಲಿರುವ ಮೊರಾದಾಬಾದ್​ನಲ್ಲಿ ಪೊಲೀಸ್​ ಇಲಾಖೆಯಲ್ಲೂ ಸೇವೆ ಸಲ್ಲಿಸುತ್ತಿದ್ದ.

    ಅನಿಲ್​ ಕುಮಾರ್​ ಮೊದಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಾಸ್​ ಆಗಿದ್ದ. ನಂತರ ಪೊಲೀಸ್​ ಇಲಾಖೆಯ ತುರ್ತು ಪ್ರತಿಕ್ರಿಯೆ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು. ಪೊಲೀಸ್‌ ಕೆಲಸ ಸಿಕ್ಕರೂ ಶಿಕ್ಷಕನ ಹುದ್ದೆಗೆ ರಾಜೀನಾಮೆ ನೀಡಿರಲಿಲ್ಲ. ಬದಲಿಗೆ ಪೊಲೀಸ್‌ ಹುದ್ದೆಗೆ ತನ್ನ ಬದಲು ಸೋದರ ಸಂಬಂಧಿಯನ್ನು ಕಳುಹಿಸುತ್ತಿದ್ದ. ಇದು ಯಾರ ಗಮನಕ್ಕೂ ಬಂದಿರಲಿಲ್ಲ.

    ಹೀಗಿರುವಾಗ ಇದೀಗ ಪೊಲೀಸ್‌ ಠಾಣೆಗೆ ಸತ್ಯೇಂದ್ರ ಸಿಂಗ್‌ ಎನ್ನುವವರು ದೂರು ಸಲ್ಲಿಸಿದಾಗ, ತನಿಖೆ ಕೈಗೊಂಡ ಪೊಲೀಸರಿಗೇ ಶಾಕ್‌ ಆಯಿತು. ಏಕೆಂದರೆ, ಅನಿಲ್​ ಕುಮಾರ್​​ರ ಗುರುತಿನ ಕಾರ್ಡ್​ನ್ನು ಬೇರೊಬ್ಬರು ಬಳಕೆ ಮಾಡುತ್ತಿರುವುದು ತಿಳಿಯಿತು. ನಂತರ ಪೊಲೀಸ್‌ ಇಲಾಖೆಯಲ್ಲಿದ್ದ ಅನಿಲ್‌ಕುಮಾರ್‌ (ನಕಲಿ) ಕರೆಸಲಾಯಿತು. ನಂತರ ಗುರುತಿನ ಚೀಟಿಯಲ್ಲಿ ಇರುವ ವ್ಯಕ್ತಿ ಈತನಲ್ಲ ಎಂದು ತಿಳಿದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಅಸಲಿಗೆ ನಕಲಿ ಅನಿಲ್‌ ಕುಮಾರ್‌, ನಿಜವಾದ ಅನಿಲ್‌ಕುಮಾರ್‌ನ ಪತ್ನಿಯ ಅಣ್ಣ ಸುನೀಲ್‌ ಕುಮಾರ್‌. ಅನಿಲ್​ ತನ್ನ ಸರ್ವೀಸ್​ ರಿವಾಲ್ವರ್​​ನ್ನೂ ಸುನೀಲ್​ಗೆ ನೀಡಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನೂ ಜೈಲಿಗೆ ಅಟ್ಟಿದ್ದು, ಇದರ ಹಿಂದೆ ಇನ್ಯಾರಿದ್ದಾರೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.

    ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?

    ಬೆಡ್‌ರೂಮ್‌ಗೆ ಬಂದ ಏಲಿಯನ್‌: ಪುರುಷನಿಗಿಂತಲೂ ಇವೇ ಬೆಸ್ಟ್‌- ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ!

    ಅಪಘಾತದಲ್ಲಿ ಸತ್ತವನ ಡಿಎನ್‌ಎ ಆಯ್ತು ಮ್ಯಾಚ್‌- 10 ವರ್ಷಗಳ ಬಳಿಕ ಪ್ರತ್ಯಕ್ಷನಾದವ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts