More

    ಬಳಕೆದಾರರ ಮಾಹಿತಿ ಕಳುವು: ಟ್ವಿಟರ್‌ಗೆ 1,876 ಕೋಟಿ ರೂ ದಂಡ!

    ಮಾಸ್ಕೊ: ಬಳಕೆದಾರರ ಮಾಹಿತಿಗಳನ್ನು ಕದ್ದಿರುವ ಆರೋಪ ಹೊತ್ತ ಟ್ವಿಟರ್‌ ಸಂಸ್ಥೆಗೆ ಅಮೆರಿಕ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ಭಾರಿ ದಂಡ ವಿಧಿಸಿದೆ. ಇದು ಎಫ್‌ಟಿಸಿ ಇತಿಹಾಸದಲ್ಲಿಯೇ ಅತಿದೊಡ್ಡ ದಂಡ ಎನ್ನಲಾಗಿದೆ.

    ತನ್ನ ಸಂಸ್ಥೆಯ ಜಾಹೀರಾತುಗಳನ್ನು ಬಳಕೆದಾರರಿಗೆ ನೀಡುವ ಸಂಬಂಧ ಅವರ ವೈಯಕ್ತಿಕ ಮಾಹಿತಿಯನ್ನು ನಿಯಮ ಉಲ್ಲಂಘಿಸಿ ಪಡೆದಿರುವ ಆರೋಪವನ್ನು ಟ್ವಿಟರ್‌ ಹೊತ್ತಿದೆ, ಈ ಕುರಿತು ಎಫ್‌ಟಿಸಿ ತನಿಖೆ ನಡೆಸುತ್ತಿದೆ. ಗೌಪ್ಯತೆ ಉಲ್ಲಂಘನೆಗಾಗಿ 250 ಮಿಲಿಯನ್‌ ಡಾಲರ್‌ (ಸುಮಾರು 1,876 ಕೋಟಿ ರೂಪಾಯಿ) ದಂಡ ವಿಧಿಸಲಾಗಿದೆ.

    2013 ಮತ್ತು 2019 ರ ನಡುವಿನ ಅವಧಿಯಲ್ಲಿ ಟ್ವಿಟರ್‌ಗೆ ನೀಡಲಾಗಿರುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಇದ್ದ ನಿಯಮಗಳನ್ನು ಉಲ್ಲಂಘನೆ ಮಾಡಿ ಸುರಕ್ಷತೆ ಮತ್ತು ಸುರಕ್ಷತೆ ಉದ್ದೇಶಗಳಿಗಾಗಿ ಒದಗಿಸಲಾದ ಡೇಟಾಗಳನ್ನು ಟ್ವಿಟರ್‌ ಕದ್ದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

    ಇದನ್ನೂ ಓದಿ: ಬಾರ್‌ ಓಪನ್‌ ಆದ್ರೂ ಸ್ಯಾನಿಟೈಸರ್‌ ಹೀರಿ ಪಾರ್ಟಿ- ಕುಡುಕರ ಹೊಸರೂಪಕ್ಕೆ ಪೊಲೀಸರು ಸುಸ್ತು!

    ಭದ್ರತಾ ಉದ್ದೇಶಗಳಿಗಾಗಿ ಬಳಕೆದಾರರು ಒದಗಿಸಿದ ಸಂಪರ್ಕ ವಿವರಗಳನ್ನು ಇದು ದುರುಪಯೋಗಪಡಿಸಿಕೊಂಡಿದೆ. ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಗೌಪ್ಯವಾಗಿ ಸಂಗ್ರಹಿಸುವ ಮೂಲಕ ತನ್ನ ಜಾಹೀರಾತಿಗೆ ಉತ್ತೇಜನ ನೀಡಲು ಬಯಸಿರುವ ಟ್ವಿಟರ‌, ನಿಯಮ ಉಲ್ಲಂಘನೆ ಮಾಡಿದೆ ಎಂದು ಹೇಳಲಾಗಿದೆ.

    2020 ರ ಎರಡನೇ ತ್ರೈಮಾಸಿಕದಲ್ಲಿ 3,683 ಮಿಲಿಯನ್ ಆದಾಯವನ್ನು ಟ್ವಿಟರ್‌ ಪಡೆದಿತ್ತು. ಇದರ ಬೆನ್ನತ್ತಿ ಹೋದಾಗ ಬಳಕೆದಾರರ ಇ-ಮೇಲ್‌ ಸಂಖ್ಯೆ ಮತ್ತು ಫೋನ್‌ ನಂಬರ್‌ಗಳನ್ನು ಬಳಸಿ ಅವರ ವೈಯಕ್ತಿಯ ಮಾಹಿತಿ ಸಂಗ್ರಹ ಮಾಡಿರುವುದು ತಿಳಿದಿದೆ.

    ಟಿಕ್‌ಟಾಕ್‌ ಮಾರಾಟಕ್ಕೆ ಗಡುವು- ಇಲ್ಲದಿದ್ದರೆ ಬ್ಯಾನ್‌: ಟ್ರಂಪ್‌ ಖಡಕ್ ವಾರ್ನಿಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts