More

    ನಾಳೆ ಸಾರಿಗೆ ನೌಕರರ ಪ್ರತಿಭಟನೆ: ಬಸ್ಸುಗಳ ರೋಡಿಗಿಳಿಯೋದು ದೌಟು!

    ಬೆಂಗಳೂರು: ಕರ್ನಾಟಕ ಬಂದಾಯ್ತು, ಭಾರತ ಬಂದಾಯ್ತು, ಇದೀಗ ಸಾರಿಗೆ ನೌಕರರ ಪ್ರತಿಭಟನೆ. ಹಿಂದಿನೆರಡು ಬಂದ್​ಗಳ ಸಂಚಾರದ ಮೇಲೆ ಪ್ರಭಾವ ಬೀರದಿದ್ದರೂ ನಾಳೆಯ (ಗುರುವಾರ) ಬಂದ್​ನ ಬಿಸಿ ಮಾತ್ರ ಅನೇಕ ಮಂದಿಗೆ ತಟ್ಟುವ ಸಾಧ್ಯತೆ ಇದೆ.

    ಏಕೆಂದರೆ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ನೌಕರರು, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ, ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಈ ಜಾಥಾ ಆರಂಭವಾಗಲಿದ್ದು, ಅಲ್ಲಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಹೊರಡಲಿದ್ದಾರೆ. ಇದರಲ್ಲಿ ಸಾರಿಗೆ ಇಲಾಖೆಯ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

    ಈ ಹಿನ್ನೆಲೆಯಲ್ಲಿ ನಾಳೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ರಸ್ತೆಗಳಿಯೋದು ಬಹುತೇಕ ಸಂದೇಹವಿದೆ. ಸಂಚಾರದಲ್ಲಿ ಭಾರಿ ಪ್ರಮಾಣದ ವ್ಯತ್ಯಯ ಆಗಲಿದೆ.

    ಈ ನಡುವೆಯೇ ಸಾರಿಗೆ ನೌಕರರ ನವೆಂಬರ್​ವರೆಗಿನ ಎಲ್ಲಾ ವೇತನ ಬಿಡುಗಡೆ ಮಾಡಲಾಗಿದೆ. ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಈಗ ಇಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಕರೊನಾ ಕಾರಣದಿಂದಾಗಿ ಹಣಕಾಸು ಸಮಸ್ಯೆ ಇದೆ. ಆದ್ದರಿಂದ ಈಗ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಿರ್ಣಯ ಮಾಡುತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದರೆ, ಉಳಿದ ನಿಗಮಗಳಲ್ಲಿ ಅನೇಕ ಮಂದಿ ಇದೇ ಬೇಡಿಕೆ ಇಡಬಹುದು. ಆದ್ದರಿಂದ ಸದ್ಯಕ್ಕೆ ಸರ್ಕಾರದ ಮುಂದೆ ಅವರನ್ನು ಸರ್ಕಾರಿ ನೌಕರರಾಗಿ ಮಾಡುವ ಪ್ರಸ್ತಾಪ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

    ವೇತನದ ಕುರಿತು ಮಾತನಾಡಿರುವ ಸವದಿ, 7 ತಿಂಗಳ ಸಂಬಳವನ್ನು ಎಲ್ಲಾ ನೌಕರರಿಗೆ ನೀಡಲಾಗಿದೆ. 2 ತಿಂಗಳ ವೇತನ ಶೇಕಡಾ 100ರಷ್ಟು, 4 ತಿಂಗಳ ವೇತನ 25-75ರ ಅನುಪಾತದಲ್ಲಿ, ಮತ್ತೆ ಎರಡು ತಿಂಗಳ ವೇತನ 50-50 ಅನುಪಾತದಲ್ಲಿ ಸರ್ಕಾರ ಕೊಟ್ಟಿದೆ. ನವೆಂಬರ್ ವರೆಗೆ ಎಲ್ಲರ ವೇತನ ನೀಡಲಾಗಿದೆ, ಡಿಸೆಂಬರ್ ತಿಂಗಳ ವೇತನ 8-10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಾರಿಗೂ ವೇತನ ಬಾಕಿ ಇಲ್ಲ ಎಂದಿದ್ದಾರೆ.

    ಈ ಜಾಥಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳೂ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಲಂಚ ಪ್ರಕರಣ: ಕಲಬುರಗಿ ಪೊಲೀಸ್​ ಅಧಿಕಾರಿಗೆ ನಾಲ್ಕು ವರ್ಷ ಜೈಲು

    ಬಿಜೆಪಿ ವಿಜಯೋತ್ಸವದಲ್ಲಿ ಕೈ ಕಾರ್ಯಕರ್ತರ ಗಲಾಟೆ: ಮಾರಾಮಾರಿಯಲ್ಲಿ ತಂದೆ-ಮಗನ ಸಾವು

    ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts