More

    ಲಂಚ ಪ್ರಕರಣ: ಕಲಬುರಗಿ ಪೊಲೀಸ್​ ಅಧಿಕಾರಿಗೆ ನಾಲ್ಕು ವರ್ಷ ಜೈಲು

    ಕಲಬುರಗಿ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ ಮಸಾರೆ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಸೆಷನ್ಸ್​ ಕೋರ್ಟ್​ ಆದೇಶಿಸಿದೆ.

    2015ರಲ್ಲಿ ಶಹಾಬಾದ್ ಠಾಣೆ ಇನ್ಸ್​ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದು, ಅದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಜಪ್ತಿ ಮಾಡಿದ ವಾಹನ ಬಿಡುಗಡೆಗೆ 25 ಸಾವಿರ ರೂ.‌ ಹಣದ ಬೇಡಿಕೆ ಇಟ್ಟಿದ್ದರು ಇವರು. ಈ ವೇಳೆ ವಾಹನ ಮಾಲೀಕ ನೀಡಿದ ದೂರಿನ ಮೇರೆಗೆ ಕಲಬುರಗಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದರು.

    ವಿಜಯಲಕ್ಷ್ಮಿ ನಾಗರಿಕ ಹಕ್ಕು ಜಾರಿ (ಸಿಆರ್‌ಇ) ಘಟಕದಲ್ಲಿ ಡಿವೈಎಸ್​ಪಿ ಆಗಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದರು.
    2015ರ ಡಿಸೆಂಬರ್‌ನಲ್ಲಿ ಶಹಾಬಾದ್ ತಾಲೂಕಿನ ದೇವನ ತೆಗನೂರಿನ ರಾಜು ಎಂಬುವವರು ಶಹಾಬಾದ್‌ನ ಬಂಕ್‌ವೊಂದರಲ್ಲಿ ತಮ್ಮ ಟಾಟಾ ಸುಮೊ ವಾಹನಕ್ಕೆ ಡೀಸೆಲ್ ಹಾಕಿಸಲು ಹೋಗಿದ್ದರು. ಈ ಸಮಯದಲ್ಲಿ ಬಂಕ್‌ನ ಸಿಬ್ಬಂದಿಯೊಂದಿಗೆ ಜಗಳವಾಗಿತ್ತು.

    ಈ ಬಗ್ಗೆ ಬಂಕ್‌ನ ಸಿಬ್ಬಂದಿ ರಾಜು ವಿರುದ್ಧ ಶಹಾಬಾದ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ರಾಜುವನ್ನು ಬಂಧಿಸಿ, ವಾಹನವನ್ನು ಜಪ್ತಿ ಮಾಡಿದ್ದರು. ಜಾಮೀನು ಮೇಲೆ ಬಿಡುಗಡೆಯಾಗಿದ್ದ ರಾಜು, ವಾಹನವನ್ನು ಬಿಡಿಸಿಕೊಳ್ಳಲು ಠಾಣೆಗೆ ಹೋಗಿದ್ದ ಸಮಯದಲ್ಲಿ ವಿಜಯಲಕ್ಷ್ಮಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

    ಈ ವಿಷಯವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದ ರಾಜು, ಲೋಕಾಯುಕ್ತ ಪೊಲೀಸರ ಸಲಹೆಯಂತೆ ಲಂಚದ ಹಣ ಕೊಡಲು ಮುಂದಾಗಿದ್ದರು. ವಿಜಯಲಕ್ಷ್ಮಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದ ಸಿಬ್ಬಂದಿ ಹಣದ ಸಮೇತ ವಶಕ್ಕೆ ಪಡೆಯಲಾಗಿತ್ತು.

    VIDEO: 144 ಮಹಡಿಗಳ ಕಟ್ಟಡ 10 ಸೆಕೆಂಡ್​ನಲ್ಲೇ ನೆಲಸಮ- ಮಾಡಿತು ವಿಶ್ವದಾಖಲೆ

    ಬೀಚ್​ನಲ್ಲಿ ಉಡುಪಿಯ ನವದಂಪತಿ ಆಚರಿಸಿದ್ರು ಡಿಫರೆಂಟ್​ ‘ಹನಿಮೂನ್​’- ಶ್ಲಾಘನೆಗಳ ಮಹಾಪೂರ

    ಇಂಡಿಯನ್ ಆಯಿಲ್ ಕಾರ್ಪೋರೇಷನ್​ನಲ್ಲಿ 436 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts