ಬಿಜೆಪಿ ವಿಜಯೋತ್ಸವದಲ್ಲಿ ಕೈ ಕಾರ್ಯಕರ್ತರ ಗಲಾಟೆ: ಮಾರಾಮಾರಿಯಲ್ಲಿ ತಂದೆ-ಮಗನ ಸಾವು

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ, ನಡೆಯುತ್ತಿದ್ದ ವಿಜಯೋತ್ಸವದಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ನಡೆದಿದೆ ಎನ್ನಲಾದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ವಿಜಯೋತ್ಸವದ ಸಮಯದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರಿಂದ ನಡೆದ ಮಾರಾಮಾರಿಯಲ್ಲಿ ತಂದೆ-ಮಗ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಗಲಾಟೆಯಲ್ಲಿ ಕನಿಷ್ಠ ಹತ್ತು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫತೇಪುರ ಪಟ್ಟಣದ ಬಲೋಡ್ ಬಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಂಚಾಯತ್ ಸಮಿತಿ ಫತೇಪುರ್ ವಾರ್ಡ್ … Continue reading ಬಿಜೆಪಿ ವಿಜಯೋತ್ಸವದಲ್ಲಿ ಕೈ ಕಾರ್ಯಕರ್ತರ ಗಲಾಟೆ: ಮಾರಾಮಾರಿಯಲ್ಲಿ ತಂದೆ-ಮಗನ ಸಾವು