More

    ಗುಜರಾತ್‌ನತ್ತ ‍ಪ್ರಯಾಣ ಬೆಳೆಸಿದ ತೌಕ್ತೆ- ಲಕ್ಷಾಂತರ ಮಂದಿ ಸ್ಥಳಾಂತರ

    ನವದೆಹಲಿ: ಇದಾಗಲೇ ತೌಕ್ತೆ ಚಂಡಮಾರುತ ತನ್ನ ರೌದ್ರರೂಪ ತೋರಿಸಲು ಶುರು ಮಾಡಿದ್ದು, ವಿವಿಧ ರಾಜ್ಯಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

    ಇದೀಗ ಈ ಚಂಡಮಾರುತವು ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಿಂದ ನಿಧಾನವಾಗಿ ಗುಜರಾತ್ ತೀರದತ್ತ ಹೊರಟಿದೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ತೀರದ ತಗ್ಗು ಪ್ರದೇಶಗಳಿಂದ ಸುಮಾರು 1 ಲಕ್ಷದ 50 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

    ಉತ್ತರ ವಾಯವ್ಯ ಭಾಗದತ್ತ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಕಳೆದ 6 ಗಂಟೆಗಳಿಂದ ಬೀಸುತ್ತಿದ್ದು ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್‌ನಷ್ಟು ಇರಲಿದೆ. ಸಾಯಂಕಾಲ ಗುಜರಾತ್ ತೀರಕ್ಕೆ ತಲುಪಿ ಪೋರಬಂದರ್ ಮತ್ತು ಭಾವನಗರ್ ಮಧ್ಯೆ ನಾಳೆ ಮುಂಜಾನೆ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ತುರ್ತು ಕೆಲಸಗಳಿಗೆ 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ.

    ಬಿರುಗಾಳಿ ಪ್ರತಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ. ವೇಗದಲ್ಲಿ ಸಾಗಲಿದೆ. ಲಕ್ಷದ್ವೀಪ ಪ್ರದೇಶ ಮತ್ತು ಅರಬ್ಬೀ ಸಮುದ್ರದ ವಾಯವ್ಯಕ್ಕೆ ಹೊಂದಿಕೊಂಡಿರುವ ಮತ್ತು ಅರಬ್ಬೀ ಸಮುದ್ರದ ಪಶ್ಚಿಮ ಕೇಂದ್ರದ ಪ್ರದೇಶದಲ್ಲಿ ಚಂಡಮಾರುತ ಪ್ರತಿ ಗಂಟೆಗೆ 75-85 ಕಿ.ಮೀ. ವೇಗದಿಂದ 95 ಕಿ.ಮೀ. ವೇಗದಲ್ಲಿ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ‘ಲವ್‌ ಯು ಜಿಂದಗಿ’ ಎಂದು ಹೇಳುತ್ತಲೇ ಜೀವ ತೊರೆದ ಯುವತಿ: ಬದುಕು ಕಸಿದ ಕರೊನಾ

    ಮದ್ಯ ನಿಷೇಧವಿದ್ದರೂ ಕುಡುಕರ ಹಾವಳಿ- ಅಧಿಕಾರಿಗಳ ಮೇಲೆ ಹಲ್ಲೆ: ವಾಹನ ಜಖಂ

    ಸೋಂಕಿನಿಂದ ಗುಣಮುಖರಾದ ಖುಷಿಯಲ್ಲಿದ್ದ ಯುವ ಅಧಿಕಾರಿಯನ್ನು ಏಕಾಏಕಿ ಬಲಿ ಪಡೆದ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts