More

    ಸಂಸದೆಗೆ ಟೈಟ್‌ ಪ್ಯಾಂಟ್‌ ತಂದ ಫಜೀತಿ- ಸಂಸತ್ತಿನ ಒಳಗೆ ಹೋಗ್ತಿದ್ದಂತೆಯೇ ಹೊರಬಂದಳೇಕೆ?

    ತಾಂಜೇನಿಯಾ: ಟೈಟ್‌ ಪ್ಯಾಂಟ್ ಧರಿಸಿ ಸಂಸತ್ತನ್ನು ಪ್ರವೇಶ ಮಾಡಿದ್ದ ಸಂಸದೆಯೊಬ್ಬರನ್ನು ಇಲ್ಲಿಯ ಸಂಸತ್ತು ಹೊರಕ್ಕೆ ಹಾಕಿದೆ. ಈ ಘಟನೆ ನಡೆದಿರುವುದು ತಾಂಜೇನಿಯಾದಲ್ಲಿ. ಇಂಥದ್ದೊಂದು ‘ಶಿಕ್ಷೆ’ಗೆ ಗುರಿಯಾದ ಸಂಸದೆ ಕಂಡಸ್ಟರ್ ಸೀಚ್ವಾಲೆ.

    ಸಂಸತ್‌ ಕಲಾಪದ ವೇಲೆ ಕಂಡಸ್ಟರ್‌ ಅವರು ಟೈಟ್‌ ಪ್ಯಾಂಟ್‌ ಧರಿಸಿ ಬಂದಿದ್ದರು. ಇದನ್ನು ನೋಡಿದ ಶಾಸಕ ಹುಸೇನ್ ಅಮರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ ಕೆಲವರು ಹುಸೇನ್‌ ಅವರ ವಿರೋಧಕ್ಕೆ ದನಿಗೂಡಿಸಿದರು. ಪ್ರತಿಭಟನೆ ಶುರುವಾಯ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಸಂಸದೆಯನ್ನು ಸ್ಪೀಕರ್ ಜಾಬ್ ನುಡ್‌ಗೈ ಹೊರಹಾಕಿದರು. ಸಂಸತ್ತಿಗೆ ಸರಿಹೊಂದುವಂಥ ಸರಿಯಾಗಿರುವ ಬಟ್ಟೆಯನ್ನು ಧರಿಸಿ ವಾಪಸ್‌ ಬರುವಂತೆ ಸ್ಪೀಕರ್‌ ಹೇಳಿದರು.

    ಅಂದಹಾಗೆ ಈ ಹಿಂದೆ ಕೂಡ ಇಲ್ಲಿ ಮಹಿಳೆಯರ ಉಡುಪಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗಿದೆ. ಸಂಸದೆಯರು ಹಾಗೂ ಶಾಸಕಿಯರ ವಿರುದ್ಧ ಸ್ಪೀಕರ್‌ಗೆ ಇದಾಗಲೇ ಹಲವಾರು ದೂರುಗಳು ಬಂದಿವೆ.

    ಇದರಿಂದಾಗಿ ಈಗ ಬಟ್ಟೆಯ ಕುರಿತು ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಸ್ಪೀಕರ್‌ ಆದೇಶಿಸಿದ್ದಾರೆ. ಸಂಸತ್ತು ಸಮಾಜದ ಪ್ರತಿಬಿಂಬವಾಗಿದೆ. ಇಂಥ ಜಾಗದಲ್ಲಿ ಜೀನ್ಸ್‌ ಧರಿಸಿವುದು, ಟೈಟ್‌ ಪ್ಯಾಂಟ್‌ ಧರಿಸಿ ಬರುವುದು ಶೋಭೆ ತರುವುದಿಲ್ಲ. ಆದ್ದರಿಂದ ಇಂಥ ನಿಯಮ ಕಡ್ಡಾಯ ಎಂದು ಸಂಸತ್ತು ಹೇಳಿದೆ.

    ಮಹಿಳೆಯರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ: ಮುಂಬೈ ರೈಲು ಆರಂಭದಾದರೂ ಸ್ತ್ರೀಯರಿಗೆ ಪ್ರವೇಶವಿಲ್ಲ

    ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌

    ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts