ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌

ನವದೆಹಲಿ: ನರ್ಸ್‌ಗಳು ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲಯಾಳಿ ಭಾಷೆ ಮಾತನಾಡಬಾರದು. ಹಿಂದಿ ಅಥವಾ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂಬ ಸುತ್ತೋಲೆಯು ಭಾರಿ ವಿವಾದಕ್ಕೆ ಕಾರಣವಾಗಿ, ಆ ಸುತ್ತೋಲೆಯನ್ನು ಮಧ್ಯಾಹ್ನ ವಾಪಸ್‌ ಪಡೆದುಕೊಳ್ಳಲಾಗಿದೆ. ನರ್ಸ್‌ಗಳು ಏನು ಮಾತನಾಡುತ್ತಾರೆ ಎಂದು ತಮಗೆ ಅರ್ಥವೇ ಆಗುತ್ತಿಲ್ಲ ಎಂದು ರೋಗಿಗಳ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಮಲಯಾಳಿ ಮಾತನಾಡಲು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದ್ದರು, ಕರ್ತವ್ಯ ನಿರ್ವಹಿಸುವ ನರ್ಸ್‌ಗಳು ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇಷ್ಟು ಆಗುತ್ತಿದ್ದಂತೆಯೇ ಜಾಲತಾಣದಲ್ಲಿಯೂ … Continue reading ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌