More

    ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌

    ನವದೆಹಲಿ: ನರ್ಸ್‌ಗಳು ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲಯಾಳಿ ಭಾಷೆ ಮಾತನಾಡಬಾರದು. ಹಿಂದಿ ಅಥವಾ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂಬ ಸುತ್ತೋಲೆಯು ಭಾರಿ ವಿವಾದಕ್ಕೆ ಕಾರಣವಾಗಿ, ಆ ಸುತ್ತೋಲೆಯನ್ನು ಮಧ್ಯಾಹ್ನ ವಾಪಸ್‌ ಪಡೆದುಕೊಳ್ಳಲಾಗಿದೆ.

    ನರ್ಸ್‌ಗಳು ಏನು ಮಾತನಾಡುತ್ತಾರೆ ಎಂದು ತಮಗೆ ಅರ್ಥವೇ ಆಗುತ್ತಿಲ್ಲ ಎಂದು ರೋಗಿಗಳ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಮಲಯಾಳಿ ಮಾತನಾಡಲು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದ್ದರು, ಕರ್ತವ್ಯ ನಿರ್ವಹಿಸುವ ನರ್ಸ್‌ಗಳು ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

    ಇಷ್ಟು ಆಗುತ್ತಿದ್ದಂತೆಯೇ ಜಾಲತಾಣದಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬಹುತೇಕ ಆಸ್ಪತ್ರೆಗಳಲ್ಲಿನ ನರ್ಸ್‌ಗಳು ಮಲಯಾಳಿಗಳೇ ಆಗಿರುವ ಹಿನ್ನೆಲೆಯಲ್ಲಿ, ಇದು ದೊಡ್ಡ ವಿವಾದ ಸೃಷ್ಟಿಮಾಡಿತ್ತು. ಈ ಕುರಿತು ಇದೀಗ ಸ್ಪಷ್ಟನೆ ನೀಡಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ (ಜಿಐಪಿಎಂಇಆರ್) ಸಂಸ್ಥೆಯ ಅಧಿಕಾರಿ ಗೋವಿಂದ್ ವಲ್ಲಭ ಪಂತ್ ‘ನಮ್ಮ ಗಮನಕ್ಕೆ ಬಾರದಂತೆ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದನ್ನು ವಾಪಸ್‌ ಪಡೆದಿದ್ದೇವೆ ಎಂದಿದ್ದಾರೆ.

    ’ಕರ್ತವ್ಯದ ವೇಳೆ ಮಲಯಾಳಿ ಭಾಷೆ ಮಾತನಾಡುವ ವಿಚಾರವಾಗಿ ದೂರುಗಳು ಬಂದಿದೆ. ಇಲ್ಲಿನ ಬಹುತೇಕ ರೋಗಿಗಳು ಹಾಗೂ ಸಿಬ್ಬಂದಿಗೆ ಈ ಭಾಷೆ ಬರದುದರಿಂದ ಅಸಹಾಯಕತೆ ಉಂಟಾಗುತ್ತಿದ್ದು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತ್ರವೇ ಬಳಸಬೇಕೆಂದು ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ಬೆಳಗ್ಗೆ ಸುತ್ತೋಲೆ ಹೊರಡಿಸಲಾಗಿತ್ತು.

    ನಮ್ಮ ಆಸ್ಪತ್ರೆಯಲ್ಲಿ 350ಕ್ಕೂ ಮಲಯಾಳಿ ನರ್ಸ್‌ಗಳು ಇದ್ದೇವೆ. ನಮ್ಮ ನಮ್ಮಲ್ಲಿ ಮಾತನಾಡುವುದಕ್ಕೂ ನಿರ್ಬಂಧ ಹೇರಿದರೆ ಹೇಗೆ ಎಂದು ಗಿಪ್‌ಮರ್ ಆಸ್ಪತ್ರೆಯ ನರ್ಸ್‌ ಪ್ರತಿಕ್ರಿಯಿಸಿದ್ದಾರೆ.ಒಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. “ಈ ಆಸ್ಪತ್ರೆಯಲ್ಲಿ 300-350 ಮಲಯಾಳಂ ನರ್ಸಿಂಗ್ ಸಿಬ್ಬಂದಿಗಳು ಇದ್ದು ಅವರೆಲ್ಲರೂ ರೋಗಿಗಳೊಂದಿಗೆ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ನಾವು ಮಲಯಾಳಂ ಭಾಷೆಯಲ್ಲಿ ಮಾತನಾಡಿದರೆ ಆ ರೋಗಿಗಳಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೀರಾ? ಆದರೆ ಈಗ ನಮ್ಮೊಳಗೆ ಮಲಯಾಳಿ ಭಾಷೆಯನ್ನು ಮಾತನಾಡಬಾರದು ಎಂದು ಪ್ರಶ್ನಿಸಿದ್ದರು.

    ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts