More

    ಪೂರ್ಣಚಂದ್ರ ತೇಜಸ್ವಿ ಪತ್ನಿ ಇನ್ನಿಲ್ಲ- ‘ನನ್ನ ತೇಜಸ್ವಿ’ ಮೂಲಕ ಮನೆಮಾತಾಗಿದ್ದ ರಾಜೇಶ್ವರಿ ಅಮ್ಮಾ: ದೇಹದಾನಕ್ಕೆ ಸಿದ್ಧತೆ

    ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಸಾಹಿತ್ಯ ಲೋಕದ ದಿಗ್ಗಜ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84) ಇಂದು ನಿಧನರಾಗಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರನ್ನು ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಬೆಳಗ್ಗೆ ಮೃತಪಟ್ಟಿದ್ದಾರೆ.

    ಇವರು ಚಿಕ್ಕಮಗಳೂರಿನ ಮೂಡಿಗೆರೆಯ ಹ್ಯಾಂಡ್ ಪೋಸ್ಟ್‌ನಲ್ಲಿ ವಾಸವಾಗಿದ್ದರು. ಪೂರ್ಣಚಂದ್ರ ತೇಜಸ್ವಿ ಅವರು 2007ರಲ್ಲಿ ನಿಧನರಾದ ಬಳಿಕ ಮೂಡಿಗೆರೆಯ ತೋಟದಲ್ಲಿ ಒಬ್ಬರೇ ವಾಸವಾಗಿದ್ದರು. ರಾಜೇಶ್ವರಿ ಅಮ್ಮಾ ಎಂದೇ ಪರಿಚಿತರಾಗಿದ್ದ ಇವರ ತೋಟದ ಮನೆಯನ್ನು ನೋಡಲು ರಾಜ್ಯದ ಮೂಲೆಮೂಲೆಗಳಿಂದ ಇಂದಿಗೂ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಿದ್ದುದು ವಿಶೇಷ. ಅವರನ್ನೆಲ್ಲಾ ಆತ್ಮೀಯವಾಗಿ ರಾಜೇಶ್ವರಿ ಅವರು ಮಾತನಾಡಿಸುತ್ತಿದ್ದುದರಿಂದ ಎಲ್ಲರ ಬಾಯಲ್ಲಿಯೂ ಇವರು ರಾಜೇಶ್ವರಿ ಅಮ್ಮಾ ಆಗಿದ್ದರು.

    ಕಳೆದ ಕೆಲ ದಿನದ ಹಿಂದೆ ಬೆಂಗಳೂರಿಗೆ ಹೋಗಿದ್ದರು. ಅನಾರೋಗ್ಯ ಬಾಧಿಸಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದ ಬಡಾವಣೆಯೊಂದರಲ್ಲಿ ಜನಿಸಿದ್ದ ರಾಜೇಶ್ವರಿ ಅವರು, ತತ್ವಶಾಸ್ತ್ರದಲ್ಲಿ ಆನರ್ಸ್ ಮಾಡಿದ್ದ ರಾಜೇಶ್ವರಿ ಅವರು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು. 1966ರಲ್ಲಿ ಮಂತ್ರ ಮಾಂಗಲ್ಯ ಕಲ್ಪನೆಯಂತೆ ಇವರ ಮದುವೆ ನೆರವೇರಿತ್ತು.

    2007ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಮೃತಪಟ್ಟ ಬಳಿಕ ‘ನನ್ನ ತೇಜಸ್ವಿ’ ಎಂಬ ಪುಸ್ತಕ ಬರೆದಿದ್ದರು. ಇದುವರೆಗೆ ಈ ಪುಸ್ತಕ ಐದು ಮುದ್ರಣಗಳನ್ನು ಕಂಡಿದೆ. ಆ ನಂತರ ಅವರು ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎಂಬ ಪುಸ್ತಕ ಬರೆದಿದ್ದಾರೆ.

    ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಷ್ಮಿತಾ ಹಾಗೂ ಈಶಾನ್ಯ. ಇವರಿಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌. 

    ಸಂಜೆ 5:30 ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಎಚ್ ಎಸ್ ಅರ್ ಲೇಔಟ್ ನಲ್ಲಿ ಅಂತಿಮ ದರ್ಶನ ನಡೆಸಬಹುದಾಗಿದೆ. ಇವರ ದೇಹವನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. 

    VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts