More

    VIDEO| ಶಾಲೆಗಳ ಪುನರಾರಂಭದ ಬಗೆಗಿರುವ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವರು

    ಬೆಂಗಳೂರು: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಶಾಲೆಗಳು ಯಾವಾಗ ಆರಂಭವಾಗಬೇಕು? ಯಾವ ರೀತಿ ಶಾಲೆಗಳು ನಡೆಯಬೇಕು? ಎಂಬುದರ ಬಗ್ಗೆ ರಾಜ್ಯದಲ್ಲಿ ವಿಸ್ತೃತ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಇರುವ ಗೊಂದಲಗಳಿಗೆ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಅವರು ಫೇಸ್​ಬುಕ್​ ಲೈವ್​ ಮೂಲಕ ಪರಿಹಾರ ನೀಡಿದ್ದಾರೆ.

    ಇದನ್ನೂ ಓದಿ: ಶಾಲೆ ಆರಂಭ ಯಾವಾಗ? ಶಿಕ್ಷಣ ಸಚಿವರ ಪ್ರಶ್ನೆಗೆ ಪುಟ್ಟ ಬಾಲೆ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ

    ಶಾಲಾ-ಕಾಲೇಜುಗಳನ್ನು ತರಾತುರಿಯಲ್ಲಿ ಆರಂಭ ಮಾಡಬೇಕು ಎಂಬ ತೀರ್ಮಾನವನ್ನು ಶಿಕ್ಷಣ ಇಲಾಖೆ ಮಾಡಿಲ್ಲ ಎಂದು ಮೊದಲು ಸ್ಪಷ್ಟಪಡಿಸುತ್ತೇನೆ. ಜೂನ್​ 25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿ ಜುಲೈ 4ರಂದು ಮುಗಿಯುತ್ತದೆ. ಬಹಳ ಹಿಂದಿನ ದಿನವೇ ಎಲ್​ಕೆಜಿ ಹಾಗೂ ಯುಕೆಜಿಯನ್ನು ಆರಂಭಿಸಬೇಕೆ? ಬೇಡವೇ? ಎಂದು ನನ್ನ ಫೇಸ್​ಬುಕ್​ನಲ್ಲಿ ಕೇಳಿದ್ದೆ. ಅದಕ್ಕೆ ಬಹುತೇಕರು ಸದ್ಯದ ಪರಿಸ್ಥಿತಿಯಲ್ಲಿ ಬೇಡವೆಂದು ಪ್ರತಿಕ್ರಿಯಿಸಿದ್ದಾರೆ.

    ಇದರ ನಡುವೆ ಶಾಲೆ ಆರಂಭಿಸಲು ಪೋಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾಲುದಾರರ ಅಭಿಪ್ರಾಯ ಕೇಳಬೇಕು ಎಂದು ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿದೆ. ಜುಲೈ 1ರೊಳಗೆ ವರದಿಯನ್ನು ಕಳುಹಿಸಿಕೊಡಬೇಕಾಗಿದ್ದು, ಅದರಂತೆ ಜೂನ್​ 1ರಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದೇವೆ. ಅದರ ಮೂಲಕ ಎಲ್ಲಾ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಬೇಕೆಂದು ತಿಳಿಸಿದ್ದೇವೆ. ಜೂನ್​ 10,11 ಮತ್ತು 12ರಂದು ಎಲ್ಲೆಡೆ ಸಭೆ ನಡೆಯಲಿದೆ. ಇನ್ನೊಂದೆಡೆ ಜುಲೈನಿಂದ ಆರಂಭಿಸಬೇಕೆಂದು ಪ್ರಸ್ತಾವನೆ ಮಾಡಿದ್ದೇವೆ. ಆದರೆ, ಅದು ಅಂತಿಮ ನಿರ್ಧಾರವಲ್ಲ ಎಂದು ತಿಳಿಸಿದರು.

    ಇದನ್ನೂ ಓದಿ: ರಾಜ್ಯದ 2 ಸೈನಿಕ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದು 4,800 ಬಾಲಕಿಯರು, ಆಯ್ಕೆಯಾಗಿದ್ದು 18 ಮಾತ್ರ!

    ಮೊದಲು ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ. ನಂತರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಪ್ರಸ್ತುತ ಸ್ಥಿತಿಯಲ್ಲಿ ಬಹುತೇಕ ಜನರ ಅಭಿಪ್ರಾಯ ಸದ್ಯಕ್ಕೆ ಶಾಲೆಗಳನ್ನು ತೆರೆಯಬೇಡಿ ಎಂಬುದಾಗಿದೆ. ಇದನ್ನು ಸಹ ಗಣನೆಗೆ ತೆಗೆದುಕೊಂಡಿದ್ದೇವೆ.

    ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು? ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳಬೇಕು? ಯಾವ ರೀತಿ ಸುರಕ್ಷಿತಾ ಕ್ರಮಗಳನ್ನು ತೆಗದುಕೊಳ್ಳಬೇಕು? ಎಂಬ ಮೂರು ಪ್ರಶ್ನೆಗಳನ್ನು ಪೋಷಕರಿಗೆ ಕೇಳಲಾಗಿದೆ. ಇದರೊಂದಿಗೆ ಶಾಲೆಗಳು ನಿಧಾನವಾಗಿ ಆರಂಭವಾದರೆ ಮಕ್ಕಳ ನಿರಂತರ ಕಲಿಕೆಯನ್ನು ಹೇಗೆ ನಿರ್ವಹಿಸಬೇಕೆಂಬುದರ ಚರ್ಚೆಯೂ ಆಗಿದೆ. ಅದಕ್ಕಾಗಿ ಈಗಾಗಾಲೇ ಚಂದನ ವಾಹಿನಿಯಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳಿಗಾಗಿ ಪುನರ್ಮನನ ತರಗತಿಗಳು ಸಹ ನಡೆಯುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿಯೇ ಪ್ರತ್ಯೇಕ ಚಾನಲ್​ ಆರಂಭಿಸಬೇಕೆಂಬ ಪ್ರಯತ್ನವು ನಡೆಯುತ್ತಿದೆ. ಅಲ್ಲದೆ, ಯಾವೆಲ್ಲಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬಹುದು ಎಂಬುದರ ಯೋಚನೆಯನ್ನು ಮಾಡುತ್ತಿದ್ದೇವೆ ಎಂದರು.

    ಇದನ್ನೂ ಓದಿ: ನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್​ವುಡ್​ ಸಂತಾಪ

    ಕೊನೆಯದಾಗಿ ಶಿಕ್ಷಣ ಇಲಾಖೆಯು ತರಾತುರಿಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುವುದಿಲ್ಲ. ನಾವು ಯಾವ ಲಾಭಿಗೂ ಶರಣಾಗಿಲ್ಲ. ಅಭಿಪ್ರಾಯಗಳನಷ್ಟೇ ಸಂಗ್ರಹ ಮಾಡುತ್ತಿದ್ದೇವೆ ಹೊರತು ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಮಕ್ಕಳ ಸುರಕ್ಷತೆ ಜತೆಗೆ ಮಕ್ಕಳ ಕಲಿಕೆ ಹಾಗೂ ಭವಿಷ್ಯವೇ ನಮ್ಮ ಮೊದಲ ಆದ್ಯತೆಯಾಗಿದೆ. ಇದ್ಯಾವುದಕ್ಕೂ ತೊಂದರೆಯಾಗದಂತೆ ಸೂಕ್ತ ಹೆಜ್ಜೆಯನ್ನು ಇಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಯಾವ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದರು.

    Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 4, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts