More

    ರಾಜ್ಯದ 2 ಸೈನಿಕ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದು 4,800 ಬಾಲಕಿಯರು, ಆಯ್ಕೆಯಾಗಿದ್ದು 18 ಮಾತ್ರ!

    ಬೆಂಗಳೂರು: 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಎರಡು ಸೈನಿಕ ಶಾಲೆಗಳಲ್ಲಿ ಪ್ರವೇಶ ಬಯಸಿ 4,800 ಬಾಲಕಿಯರು ಸಲ್ಲಿಸಿದ್ದರು. ಇವರಲ್ಲಿ ಕೇವಲ 18 ಬಾಲಕಿಯರು ಆಯ್ಕೆಯಾಗಿದ್ದು, ಇನ್ನೂ 5 ಮಂದಿ ವೇಟಿಂಗ್​ ಲಿಸ್ಟ್​ನಲ್ಲಿದ್ದಾರೆ.

    ಬಿಜಾಪುರ ಮತ್ತು ಕೊಡುಗುನಲ್ಲಿರುವ ಸೈನಿಕ್​ ಶಾಲೆಗಳಲ್ಲದೆ ಇನ್ನೂ ನಾಲ್ಕು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಅವಕಾಶ ಕಲ್ಪಿಸಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕಳೆದ ವರ್ಷ ಆದೇಶ ಹೊರಡಿಸಿದ್ದರು. 6ನೇ ತರಗತಿಗೆ ದಾಖಲಿಸಿಕೊಳ್ಳಲಾಗುವ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.10 ಬಾಲಕಿಯರು ಇರಬೇಕು ಎಂದು ಆ ಆದೇಶದಲ್ಲಿ ತಿಳಿಸಲಾಗಿತ್ತು.

    ಈ ಬಾರಿ ಬಿಜಾಪುರ ಸೈನಿಕ ಶಾಲೆಯಲ್ಲಿ ದಾಖಲಾತಿ ಬಯಸಿ 4,200 ಮತ್ತು ಕೊಡಗಿನ ಶಾಲೆಗೆ ಪ್ರವೇಶ ಬಯಸಿ 600 ಸೇರಿ ಒಟ್ಟು 4,800 ಬಾಲಕಿಯರು ಅರ್ಜಿ ಸಲ್ಲಿಸಿದ್ದರು. ಬಿಜಾಪುರ ಸೈನಿಕ ಶಾಲೆಯ ಪ್ರವೇಶಕ್ಕೆ ಈಗಾಗಲೆ 9 ಬಾಲಕಿಯರು ಆಯ್ಕೆಯಾಗಿದ್ದಾರೆ. ಇನ್ನೂ ಐದು ಬಾಲಕಿಯರ ಹೆಸರು ವೇಟಿಂಗ್​ ಲಿಸ್ಟ್​ನಲ್ಲಿದೆ. ಅಂತೆಯೇ ಕೊಡಗು ಸೈನಿಕ ಶಾಲೆಯಲ್ಲಿ 9 ಬಾಲಕಿಯರು ಪ್ರವೇಶ ಪಡೆದುಕೊಂಡಿದ್ದಾರೆ ಎಂದು ಆಯಾ ಶಾಲೆಗಳ ಮೂಲಗಳು ತಿಳಿಸಿವೆ.

    ಶಾಲೆಗೆ ಬಂದಿದ್ದ ಮಕ್ಕಳಿಗೆ ಚಾಕುವಿನಿಂದ ಇರಿದು, ಗಾಯಗೊಳಿಸಿದ ಸೆಕ್ಯೂರಿಟಿ ಗಾರ್ಡ್; 39 ವಿದ್ಯಾರ್ಥಿಗಳಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts