More

    ಎಸ್​ಸಿ ಎಸ್​ಟಿ ಜಮೀನು ಗುಳುಂ- ಇನ್ನೊಂದೇ ತಿಂಗಳಲ್ಲಿ ಎಚ್​ಡಿಕೆ ಹಗರಣ ಅಂತ್ಯ ಕಾಣಿಸುವೆ!

    ರಾಯಚೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜಮೀನು ಕಬಳಿಕೆ ಸಂಪೂರ್ಣ ವಿಷಯವನ್ನು ಇನ್ನೊಂದೇ ತಿಂಗಳಿನಲ್ಲಿ ದಾಖಲೆ ಸಹಿತ ಬಯಲಿಗೆಳೆಯಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಕಿತಿ ಕಾರಿದ್ದಾರೆ.

    ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು. ರಾಮನಗರದ ಕೇತಗಾನಹಳ್ಳಿ 200 ಎಕರೆ, 65 ಎಕರೆ ಗೋಮಾಳ ಜಮೀನು ಪರಿಶಿಷ್ಟ ಜಾತಿಗೆ ಸೇರಿತ್ತು. ಅದನ್ನು ಕುಮಾರಸ್ವಾಮಿ ಅವರು ಕಬಳಿಕೆ ಮಾಡಿದ್ದೇನೆ. ಇದಾಗಲೇ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿದ್ದು, ಶೀಘ್ರದಲ್ಲೇ ಹಗರಣವನ್ನ ತಾತ್ವಿಕ ಹಂತಕ್ಕೆ ಒಯ್ಯುತ್ತೇವೆ ಎಂದಿದ್ದಾರೆ.

    ಈ ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತ ಮೆಟ್ಟಿಲು ಏರಿತ್ತು, ಹೈಕೋರ್ಟ್​ಗೂ ಹೋಗಿತ್ತು. ಇವರೆಲ್ಲರ ನಿರ್ದೇಶನವಿದ್ದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ನಾನು ಸುಮ್ಮನೇ ಬಿಡುವುದಿಲ್ಲ. ಅಂತ್ಯ ಕಾಣಿಸುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ

    ಇದೇ ವೇಳೆ ಕೇಂದ್ರ ಸರ್ಕಾರದ ರೈತರ ಕಾನೂನುಗಳ ಕುರಿತು ಮಾತನಾಡಿದ ಹಿರೇಮಠ, ದೆಹಲಿಯಲ್ಲಿ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರ್ಕಾರ ದುಡಿಯುವ ಜನರ ಪರವಾಗಿ ಕೆಲಸ ಮಾಡಬೇಕು. ಶ್ರೀಮಂತರ ಪರವಾಗಿ ಕಾನೂನು ಮಾಡುವುದನ್ನು ಬಿಡಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದರು.

    ಕಾಫಿ ಡೇ ಹಗರಣದ ಕುರಿತೂ ಪ್ರಸ್ತಾಪಿಸಿದ ಹಿರೇಮಠ, ಸಿಬಿಐ ನಿವೃತ್ತ ಡಿಐಜಿ ಅಶೋಕ್ ಮಲ್ಹೋತ್ರ ವರದಿ ನೀಡಿದ್ದಾರೆ. ಆದರೆ ವರದಿಯಲ್ಲಿ ಅನೇಕ ಭ್ರಷ್ಟರ, ಭ್ರಷ್ಟತನದ ಉಲ್ಲೇಖವಿಲ್ಲ. ಡಿ.ಕೆ.ಶಿವಕುಮಾರ್​, ಮಾಳವಿಕ ಹೆಗಡೆ ಸೇರಿ ಅನೇಕರು ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಹಗರಣದ ಬಗ್ಗೆ ಗಂಭೀರವಾದ ತನಿಖೆ ನಡೆದಿಲ್ಲ ಎಂದರು.

    ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕ್ರಿಮಿನಲ್ಸ್​ಗಳನ್ನು ಬೆಳೆಸಿದ್ದಾರೆ. ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಕೃಷ್ಣ ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸೇರಿರಬೇಕು. ಹೊರಗೆ ಬಂದು ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಅನ್ನೋದನ್ನ ಎಸ್.ಎಂ.ಕೃಷ್ಣ ಸ್ವತಃ ಹೇಳಬೇಕು ಅಂತ ಒತ್ತಾಯಿಸಿದರು.

    ಕಂಗನಾ ವಿರುದ್ಧ ಅಜ್ಜಿ ಕಿಡಿಕಿಡಿ- ಟ್ವೀಟ್​ ಡಿಲೀಟ್​ ಬಳಿಕವೂ ನಟಿಗೆ ಸಿಗಲಿಲ್ಲ ‘ಮುಕ್ತಿ’

    ಅರ್ಚಕರು ಅರೆಬೆತ್ತಲೆಯಲ್ಲಿರ್ತಾರೆ- ಭಕ್ತರಿಗೇಕೆ ಸಂಪ್ರದಾಯದ ಉಡುಗೆ ಎಂದು ಪ್ರಶ್ನಿಸಿದ ಹೋರಾಟಗಾರ್ತಿ!

    ಸಿಎಂ ಯೋಗಿ- ನಟ ಅಕ್ಷಯ್​ ಕುಮಾರ್ ಭೇಟಿ: ಶುರುವಾಯ್ತು ಗುಸುಗುಸು

    ಟ್ರಂಪ್​ಗೆ ಪಾಕ್​ ಲಿಂಕ್?- ಇವ್ರು ನನ್ನಪ್ಪ ಎಂದು ಗೋಳೋ ಅಂತಿರೋ ಯುವತಿ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts