More

    ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈ ಜೋಡಿಸಿ

    ಗೊಳಸಂಗಿ: ಬಡ ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕಾಗಿ ಸರ್ಕಾರ ಪ್ರತಿವರ್ಷ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದು ಪಾಲಕರು ಮತ್ತು ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರಭಾರ ಮುಖ್ಯ ಗುರುಮಾತೆ ಶಾರದಾ ಹಿರೇಮಠ ಹೇಳಿದರು.

    ಸ್ಥಳೀಯ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಪಾಲಕರು, ಶಿಕ್ಷಕರು ಮತ್ತು ಮಕ್ಕಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಾಲಕ, ಪಾಲಕ ಮತ್ತು ಶಿಕ್ಷಕರು ಶಾಲೆ ಎಂಬ ಒಲೆಯ ಮೂರು ಗುಂಡುಗಳಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಶಿಕ್ಷಣ ಎಂಬ ಅಡುಗೆ ಸಮೃದ್ಧವಾಗಿ ಸಿದ್ಧಗೊಳ್ಳಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಮಾನ ಜವಾಬ್ದಾರಿ ವಹಿಸಿ ಕಾರ್ಯೋನ್ಮುಖರಾಗಬೇಕು ಎಂದರು.

    ಶಿಕ್ಷಕ ಬಿ.ಐ. ಚಲಮಿ, ಶಿಕ್ಷಕಿ ರಾಧಾ ಹಂಗರಗಿ ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ವಸಂತ ಅಮೀನಗಡ ಅಧ್ಯಕ್ಷತೆ ವಹಿಸಿದ್ದರು. ಪಾಲಕರಾದ ಸಂಗೀತಾ ಚಿಮ್ಮಲಗಿ, ಚಂದ್ರಕಲಾ ದೊಡಮನಿ, ನೀಲಮ್ಮ ಹಳ್ಳದ, ಸಂಗೀತಾ ಸಂದಿಮನಿ, ರೇಣುಕಾ ಹಡಪದ, ಲಕ್ಷ್ಮೀ ಪವಾರ, ದೇವಕಿ ಮೇಲಿನಮನಿ, ಈರಮ್ಮ ಮಾದರ, ಕಮಲಾ ಭಜಂತ್ರಿ, ಈರಪ್ಪ ಹೆಬ್ಬಾಳ, ಶಿವಾನಂದ ಮನಗೂಳಿ, ಗೋಲಪ್ಪ ಬೇವಿನಮರದ, ಸೋನಾಬಾಯಿ ಕಾಳಗಿ, ಕವಿತಾ ಗುಡ್ಡದ, ನಿಸಾರ ಸೈಯದ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts