More

    ವಿಧವೆಯರು, ಮಕ್ಕಳ ಬಾಳಿಗೆ ಬೆಳಕಾಗಿದ್ದರು ರಾವತ್‌ ಪತ್ನಿ: ಅನಾಥವಾಗೋಯ್ತು ಅನಾಥಾಶ್ರಮ- ಎಲ್ಲೆಡೆ ಕಣ್ಣೀರಧಾರೆ

    ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ 13 ಮಂದಿ ಪೈಕಿ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಒಬ್ಬರು. ಇವರನ್ನು ಕಳೆದುಕೊಂಡ ಸಹಸ್ರಾರು ವಿಧವೆಯರು, ಅನಾಥ ಮಕ್ಕಳು ಅಕ್ಷರಶಃ ಕಣ್ಣೀರಾಗಿದ್ದಾರೆ. ಸಹಸ್ರಾರು ಮಂದಿಯ ಬಾಳಿಗೆ ಬೆಳಕಾಗಿದ್ದ ಮಧುಲಿಕಾ ಅವರನ್ನು ಕಳೆದುಕೊಂಡ ಅವರ ಸ್ವಯಂ ಸೇವಾ ಸಂಸ್ಥೆ ಅನಾಥವಾಗಿದೆ.

    ಮಧ್ಯಪ್ರದೇಶದ ಶಹ್ದೋಲ್ ಜಿಲ್ಲೆಯ ಸೋಹಾಗಪುರ್​ದ ರಾಜಕಾರಣಿ ಮೃಗೇಂದ್ರ ಸಿಂಗ್ ಅವರ ಮಗಳು ಮಧುಲಿಕಾ ರಾವತ್. ಇವರು ಸೇನಾ ಪತ್ನಿಯಂದಿರ ಕ್ಷೇಮಾಭಿವೃದ್ಧಿಸ ಸಂಘದ ಅಧ್ಯಕ್ಷೆಯಾಗಿದ್ದರು. ಈ ಸಂಘದ ಮೂಲಕ ಇವರು ಮಾಡುತ್ತಿದ್ದ ಸೇವಾ ಕಾರ್ಯಕ್ಕೆ ಲೆಕ್ಕವೇ ಇಲ್ಲ. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸೈಕಾಲಜಿ ವಿಷಯಲ್ಲಿ ಪದವಿ ಪಡೆದಿದ್ದಾರೆ. ರಾವತ್ ದಂಪತಿಗೆ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಎಂಬ ಇಬ್ಬರು ಪುತ್ರಿಯರಿದ್ದಾರೆ.

    ಸಿಬ್ಬಂದಿಯ ಪತ್ನಿಯರು, ಮಕ್ಕಳು ಮತ್ತು ಅವಲಂಬಿತರಿಗೆ ಸಾಕಷ್ಟು ದುಡಿದಿದ್ದಾರೆ ಮಧುಲಿಕಾ. ಇದು ಭಾರತದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆ ಎನಿಸಿಕೊಂಡಿದ್ದು, ಮಧುಲಿಕಾ ಅವರು ಸೇನಾ ಹೋರಾಟದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡ ಮಹಿಳೆಯರು ಮತ್ತು ಅಂಗವಿಕಲ ಮಕ್ಕಳಿಗೆ ನೆರವಾಗುತ್ತಿದ್ದರು. ಇವರ ಸಲುವಾಗಿ ಅನೇಕ ಸೇವಾ ಕಾರ್ಯ ಮತ್ತು ಅಭಿಯಾನಗಳನ್ನು ಆಯೋಜಿಸಿದ್ದರು.

    ಇವರು ಸೇನಾ ಸಿಬ್ಬಂದಿಯ ಪತ್ನಿಯರನ್ನು ಸಬಲೀಕರಣಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದರು. ಪತಿಯರನ್ನು ಕಳೆದುಕೊಂಡ ಸೇನಾ ವಿಧವೆಯರಿಗೆ ಬ್ಯೂಟಿಷಿಯನ್ ಕೋರ್ಸ್‌ ಸೇರಿದಂತೆ ಟೈಲರಿಂಗ್ ಮತ್ತು ಬ್ಯಾಗ್ ಮೇಕಿಂಗ್ ಕೋರ್ಸ್‌ಗಳನ್ನು ಕಲಿಸಿಕೊಡುತ್ತಿದ್ದರು. ಅವರನ್ನು ಆರ್ಥಿಕರನ್ನಾಗಿ ಸಬಲರನ್ನಾಗಿ ಮಾಡುವ ಸಲುವಾಗಿ ಕೇಕ್ ಮತ್ತು ಚಾಕೊಲೇಟ್ ತಯಾರಿಸುವ ಕೋರ್ಸ್​ಗಳನ್ನೂ ನೀಡುತ್ತಿದ್ದರು. ಅಷ್ಟೇ ಅಲ್ಲದೇ, ಕ್ಯಾನ್ಸರ್ ಪೀಡಿತರ ಶ್ರೇಯೋಭಿವೃದ್ಧಿಗೆ ಇವರು ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲರೂ ಇದೀಗ ಕಣ್ಣೀರಾಗಿದ್ದಾರೆ.

    ರಾವತ್‌ ಜೀವಕ್ಕೆ ಕುತ್ತಾಗೋಯ್ತಾ ಕೊನೆಕ್ಷಣದ ಆ ನಿರ್ಧಾರ? ರಸ್ತೆ ಮಾರ್ಗಕ್ಕೆ ವ್ಯವಸ್ಥೆಯಾಗಿದ್ದಾಗ ಹೆಲಿಕಾಪ್ಟರ್‌ ಏರಿದ್ದೇಕೆ?

    ಮದುವೆ ಆಸೆ ತೋರಿಸಿ ತಾಳಿ, ಒಡವೆ, ರೇಷ್ಮೆ ಸೀರೆ ಸಹಿತ ಆಂಟಿ ಎಸ್ಕೇಪ್‌! ಬೆಂಗಳೂರಿನ ಮಹಿಳೆಗೆ ನಡೆದಿದೆ ತಲಾಶ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts