More

    ಸಮಾಜಸೇವೆ ಮಾಡುವ ತುಡಿತ ಅಗತ್ಯ

    ಸೊರಬ: ಸಮಾಜಕ್ಕೆ ಏನಾದರೂ ಸೇವೆ ಮಾಡುವ ತುಡಿತ ನಮ್ಮಲ್ಲಿದ್ದಾಗ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಹೇಳಿದರು.

    ತಾಲೂಕಿನ ಆನವಟ್ಟಿ ವಿಶ್ವಭಾರತಿ ಶಾಲೆ ಆವರಣದಲ್ಲಿ ವಿಶ್ವಭಾರತಿ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ಶಿವಮೊಗ್ಗದ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ನಾವು ಗಳಿಸುವ ಸಂಪತ್ತು ನಮಗಷ್ಟೆ ವ್ಯಯವಾಗುವ ಬದಲು ಸಮಾಜದಲ್ಲಿ ಕಷ್ಟದಲ್ಲಿರುವ ಜನರಿಗೆ ಸಮಯಕ್ಕೆ ಅನುಗುಣವಾಗಿ ವಿನಿಯೋಗವಾದಗ ಮಾತ್ರ ನಮ್ಮ ಗಳಿಕೆಗೆ ಅರ್ಥ ಬರಲಿದೆ. ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಜಾಗೃತಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮವನ್ನು ಮಾಡುವ ಮೂಲಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.
    ತಜ್ಞ ವೈದ್ಯರ ತಂಡ ಶಿಬಿರಕ್ಕೆ ಆಗಮಿಸಿದೆ. ವಿಶೇಷವಾಗಿ ನರ, ಕೀಲು, ಮೂಳೆ, ರಕ್ತದೊತ್ತಡ, ಇಸಿಜಿ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಸೇರಿದಂತೆ ತಪಾಸಣೆ ನಡೆಸಲಾಗುತ್ತದೆ ಎಂದರು.
    ವಿಶ್ವ ಭಾರತಿ ಟ್ರಸ್ಟ್ ಕಾರ್ಯದರ್ಶಿ ಸಂಜಯ್ ಡೊಂಗ್ರೆ ಮಾತನಾಡಿ, ತಂದೆ-ತಾಯಿ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದು, ವೈದ್ಯರ ತಪಾಸಣೆ ನಂತರ ಹೆಚ್ಚಿನ ಚಿಕಿತ್ಸೆಗೆ ಹಣದ ಸಮಸ್ಯೆ ಇದ್ದವರಿಗೆ ವೆಚ್ಚ ಭರಿಸಲಾಗುವುದು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶ ಹೊಂದಿದ್ದು, ಸಾರ್ವಜನಿಕ ಸೇವೆಗೆ ಜನರ ಸಹಕಾರ ಇರಬೇಕು ಎಂದು ಮನವಿ ಮಾಡಿದರು.
    ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಡಾ. ನಾಗರಾಜ್, ಪ್ರಮುಖರಾದ ಕೃಷ್ಣಪ್ಪ ಓಟೂರು, ಡಾ. ಸಮರ್ಥ್, ಡಾ. ವಿನಯ್, ಡಾ. ಗಣೇಶ್, ಓಂಕಾರ್ ನಾಡಿಗೇರ್, ನಾಗರಾಜ್ ಮಿರಾಜಕರ್, ಪ್ರೇಮಾ, ಪೂಜಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts