More

    ಸಂಪತ್ತು ಇದ್ದಾಗ ಕಣ್ಮುಚ್ಚಿ ದಾನ ಮಾಡಿ

    ಭದ್ರಾವತಿ: ಮಾನವರಾಗಿ ಹುಟ್ಟಿದ ಪ್ರತಿಯೊಬ್ಬರೂ ಸೇವೆಯನ್ನು ಕರ್ತವ್ಯ ಎಂದೇ ಭಾವಿಸಬೇಕು. ಭದ್ರಾವತಿ ಕ್ಷೇತ್ರದಲ್ಲಿ ಅನೇಕ ಶ್ರೀಮಂತರಿದ್ದಾರೆ. ಆದರೆ ದಾನಿಗಳ ಸಂಖ್ಯೆ ಕಡಿಮೆ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.

    ಇಲ್ಲಿನ ಸಿದ್ಧಾರೂಢನಗರದಲ್ಲಿ ಶ್ರೀ ಬಸವೇಶ್ವರ ಧರ್ಮಸಂಸ್ಥೆಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಡತನದಲ್ಲಿ ಹುಟ್ಟಿದರೂ ಶ್ರಮಪಟ್ಟು ಶ್ರೀಮಂತರಾಗಬೇಕು. ಶ್ರೀಮಂತಿಕೆ ಬಂದ ಮೇಲೆ ದಾನಿಗಳಾಗಬೇಕು. ದೇವರು ಕೊಟ್ಟೂ ನೋಡುತ್ತಾನೆ, ಕೊಡದೆಯೂ ನೋಡುತ್ತಾನೆ. ಕೊಟ್ಟಾಗ ದಾನ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಆಗಮಾತ್ರ ದೇವರು ಮೆಚ್ಚುತ್ತಾನೆ ಎಂದರು.
    ಬಿಇಒ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಅನೇಕ ಅನುದಾನರಹಿತ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಕೊಡುಗೆ ಮಹತ್ವದ್ದು. ಸಂಘ-ಸಂಸ್ಥೆಗಳ ಸಹಕಾರವಿಲ್ಲದಿದ್ದರೆ ಶಿಕ್ಷಣ ವ್ಯವಸ್ಥೆ ಅತಂತ್ರವಾಗುತ್ತದೆ ಎಂದು ತಿಳಿಸಿದರು.
    ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಟ್ರಸ್ಟಿ ತಸ್ಮೈ ಕಿರಣ್, ಮುಖ್ಯಶಿಕ್ಷಕ ಸಿ.ಬಸವರಾಜ್, ಸಾಹಿತಿ ಬಸವರಾಜಪ್ಪ ಇತರರಿದ್ದರು. ನಂದಿನಿ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು. ಅಪೇಕ್ಷ ಮಂಜುನಾಥ್ ಸ್ವಾಗತಿಸಿದರು. ಅಣ್ಣಪ್ಪ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts