More

    ಕೇಸ್‌ ಮುಗಿಸುತ್ತಿಲ್ಲ ಎಂಬ ಸಿಟ್ಟಿನಿಂದ ಜಡ್ಜ್‌ ಮೇಲೆ ಚಪ್ಪಲಿ ಎಸೆದವನಿಗೆ 9 ವರ್ಷಗಳ ನಂತರ ಶಿಕ್ಷೆ

    ಅಹಮದಾಬಾದ್: ಕೋರ್ಟ್‌ನಲ್ಲಿ ವರ್ಷಾನುಗಟ್ಟಲೇ ಇತ್ಯರ್ಥವಾಗದ ಕೇಸ್‌ನಿಂದಾಗಿ ಕೋರ್ಟ್‌ಗೆ ಬರಲೂ ದುಡ್ಡಿಲ್ಲದಂತಾಗಿ ರೊಚ್ಚಿಗೆದ್ದಿದ್ದ ವ್ಯಕ್ತಿಯೊಬ್ಬ ಹೈಕೋರ್ಟ್‌ ನ್ಯಾಯಮೂರ್ತಿಗಳ ಮೇಲೆ 2012ರಲ್ಲಿ ಚಪ್ಪಲಿ ಎಸೆದಿದ್ದ. ಈ ಕೇಸ್‌ ಈಗ ಒಂಬತ್ತು ವರ್ಷಗಳ ನಂತರ ನಂತರ ಇತ್ಯರ್ಥವಾಗಿದ್ದು ಆ ವ್ಯಕ್ತಿಗೆ ಎಂಟು ತಿಂಗಳ ಶಿಕ್ಷೆ ವಿಧಿಸಲಾಗಿದೆ.

    ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಚಹಾ ಮಾರಾಟಗಾರ ಬಾವಾಜಿ ಎಂಬಾತನಿಗೆ ಈ ಶಿಕ್ಷೆ ನೀಡಲಾಗಿದೆ.

    2012 ರ ಏಪ್ರಿಲ್ 11 ರಂದು ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಕೆ ಎಸ್. ಝವೇರಿ ಅವರತ್ತ ತನ್ನ ಚಪ್ಪಲಿ ಎಸೆದಿದ್ದ. ಅದೃಷ್ಟವಶಾತ್, ನ್ಯಾಯಮೂರ್ತಿಗಳಿಗೆ ಅದು ತಾಕಲಿಲ್ಲ. ನಂತರ ಅಲ್ಲಿಯೇ ಅವನನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ ಇದಕ್ಕೆ ಕಾರಣ ಕೇಳಿದ್ದರು. ಆಗ ತನ್ನ ನೋವನ್ನು ಈತ ಹೇಳಿಕೊಂಡಿದ್ದ. ಯಾವುದೇ ಆದಾಯದ ಮೂಲವಿಲ್ಲದೆ, ವಿಚಾರಣೆಗೆ ಹಾಜರಾಗಲು ಅಹಮದಾಬಾದ್‌ಗೆ ಪ್ರಯಾಣಿಸಲು ತನ್ನ ಬಳಿ ದುಡ್ಡು ಕೂಡ ಇಲ್ಲ. ಹೀಗಿದ್ದರೂ ವರ್ಷಗಳೇ ಉರುಳುತ್ತಿದ್ದರೂ ನನ್ನ ಕೇಸ್‌ ಮುಗಿಯುತ್ತಿಲ್ಲ, ಇದರಿಂದ ತಾನು ರೊಚ್ಚಿಗೆದ್ದಿರುವ ಬಗ್ಗೆ ಆತ ಹೇಳಿದ್ದ.

    ಚಪ್ಪಲಿ ಎಸೆತವನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್‌ ಈತನ ವಿರುದ್ಧ ಮೊಕದ್ದಮೆ ದಾಖಲು ಮಾಡಿತ್ತು. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡ ಮ್ಯಾಜಿಸ್ಟ್ರೇಟ್ ಕೋರ್ಟ್‌ 18 ತಿಂಗಳ ಶಿಕ್ಷೆ ವಿಧಿಸಿದೆ. ಆತನಿಗೆ ಆದಾಯದ ಮೂಲಗಳು ಇಲ್ಲದ ಕಾರಣ, ಯಾವುದೇ ರೀತಿಯ ದಂಡ ವಿಧಿಸಲಿಲ್ಲ.

    ಬಾಂಗ್ಲಾ ಯುವತಿ ರೇಪಿಸ್ಟ್‌ಗಳಿಗೆ ದಿನಕ್ಕೆ ಲಕ್ಷ ಲಕ್ಷ ರೂ.ಆದಾಯ! ಬಾಯಿಬಿಡ್ತಿದ್ದಾರೆ ಒಂದೊಂದೇ ಭಯಾನಕ ಸತ್ಯ…

    ವಿಚ್ಛೇದನಕ್ಕೆ ಅರ್ಜಿ ಹಾಕಿದ್ರೆ ಅವಳೇ ಪರಿಹಾರ ಕೊಡಬೇಕಾಗತ್ತೆ ಎಂದು ಸುಮ್ಮನಿದ್ದಾಳೆ ಪತ್ನಿ- ಹೀಗೂ ಕಾನೂನು ಇದ್ಯಾ?

    ಸಹಸ್ರಕೋಟಿ ವಂಚಕ ಚೋಕ್ಸಿ ಸಿಗದೇ ಬರಿಗೈಯಲ್ಲಿ ವಾಪಸ್‌- ಆಕೆ ಗರ್ಲ್‌ಫ್ರೆಂಡ್‌ ಅಲ್ಲ, ಪತಿ ಅಂಥವರಲ್ಲ ಎಂದ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts