More

    ಆಕಾಶದಲ್ಲಿ ಹುಟ್ಟಿತೊಂದು ಮಗು- ಹೆಸರು ‘ಸ್ಕೈ’!

    ಅಲಕ್ಸಾ: ರಸ್ತೆ ಮಧ್ಯೆ, ಅಂಬ್ಯುಲೆನ್ಸ್‌ನಲ್ಲಿ , ಆಟೋರಿಕ್ಷಾಗಳಲ್ಲಿ ಹೆರಿಗೆ ಆಗುವುದು ಆಗಿಂದಾಗ್ಗೆ ನಡೆದೇ ಇದೆ.

    ಆದರೆ ಇಲ್ಲೊಬ್ಬ ಮಹಿಳೆ ಆಕಾಶದಲ್ಲಿ ಮಗುವೊಂದನ್ನು ಹೆತ್ತಿದ್ದಾಳೆ! ಅದ್ಹೇಗೆ ಅಂತೀರಾ? ವಿಮಾನದಲ್ಲಿ ಹೋಗುವಾಗ ಈಕೆಗೆ ಹೆರಿಗೆ ಆಗಿದೆ.

    ಆಗಸ್ಟ್​ 5ರ ನಸುವಿನ ಒಂದು ಗಂಟೆ ಸುಮಾರಿಗೆ ಈ ಮಗು ಹುಟ್ಟಿದ್ದು, ಅದಕ್ಕೆ ವಿಶೇಷ ರೀತಿಯ ಹೆಸರು ಕೂಡ ಇಡಲಾಗಿದೆ. ಅದೇನೆಂದರೆ ’ಸ್ಕೈ’. ಕನ್ನಡದಲ್ಲಿ ಆಕಾಶ ಹೆಸರು ಮಾಮೂಲು. ಆದರೆ ಸ್ಕೈ ಅಂತ ಇದುವರೆಗೆ ಯಾರೂ ಹೆಸರು ಇಟ್ಟಂತಿಲ್ಲ. ಇದೇ ಮೊದಲಿಗೆ ಆಕಾಶದಲ್ಲಿ ಹುಟ್ಟಿದ ಈ ಮಗುವಿಗೆ ಸ್ಕೈ ಎಂದು ಅಲ್ಲಿಯೇ ನಾಮಕರಣವನ್ನೂ ಮಾಡಲಾಗಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ಕ್ರಿಸ್ಟಲ್ ಹಿಕ್ಸ್‌ ಎಂಬಾಕೆ ಐದು ತಿಂಗಳ ಗರ್ಭಿಣಿ. ಏಕಾಏಕಿ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹಾಗಾಗಿ ಆಕೆಯನ್ನು ಆಂಕಾರೋಜ್​ ಆಸ್ಪತ್ರೆಗೆ ವಿಮಾನದ ಮೂಲಕ ಕರೆದುಕೊಂಡು ಹೋಗಲಾಯಿತು. ಆದರೆ ಹೊಟ್ಟೆನೋವು ತಾಳಲಾರದೆ ಆಕೆ ವಿಮಾನದಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಪೂರ್ವ ಮಗು ಹುಟ್ಟಿದೆ.

    ಆಕಾಶದಲ್ಲ್ಲಿಹಾರುವ ವೇಳೆ ಹುಟ್ಟಿದ ಕಾರಣದಿಂದ ಕ್ರಿಸ್ಟಲ್​ ಹಿಕ್ಸ್​​ ತನ್ನ ಮಗುವಿಗೆ ಸ್ಕೈ ಏರೋನ್​ ಹಿಕ್ಸ್​ ಎಂದು ಹೆಸರಿಟ್ಟಿದ್ದಾಳೆ. ಸದ್ಯ ತಾಯಿ ಮಗು ಇಬ್ಬರು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದಾರೆ. ಅವಧಿಪೂರ್ವ ಪ್ರಸವ ಆಗಿರುವ ಹಿನ್ನೆಲೆಯಲ್ಲಿ ಇನ್‌ಕ್ಯುಬಲೇಟರ್‌ನಲ್ಲಿ ಮಗುವನ್ನು ಇಡಲಾಗಿದೆ.

    ಇದನ್ನೂ ಓದಿ: ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು

    ಆದರೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಅದೇನೆಂದರೆ ಮಗು ಹುಟ್ಟಿರುವುದು ಸುಮಾರು 18 ಸಾವಿರ (5,500 ಮೀಟರ್)​ ಎತ್ತರದಲ್ಲಿ. ಅದು ಯಾವ ಪ್ರದೇಶ ಎಂದು ಗೊತ್ತಿಲ್ಲ. ಆದ್ದರಿಂದ ಮಗುವಿನ ಹುಟ್ಟಿದ ಸ್ಥಳ ಯಾವುದು ಎಂದ ನಮೂದು ಮಾಡಬೇಕು ಎನ್ನುವುದೇ ಇದೀಗ ಪ್ರಶ್ನೆಯಾಗಿದೆ.

    ಅಂದಹಾಗೆ ಕ್ರಿಸ್ಟಲ್‌ಗೆ ಈಗಾಗಲೇ 3, 9 ಮತ್ತು 11 ವರ್ಷದ ಮಕ್ಕಳಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

    ನಾಯಿಗೆ ಕೃಷ್ಣವೇಷ ಹಾಕಿ ಕಿಡಿ ಹೊತ್ತಿಸಿದ ಮಂಗಳೂರು ಮಾಡೆಲ್‌!

    ನಕ್ಸಲ್‌ ಆಗಲು ಅನುಮತಿ ಕೊಡಿ- ರಾಷ್ಟ್ರಪತಿಗೆ ಯುವಕನ ಪತ್ರ: ಆಂಧ್ರದಲ್ಲಿ ತಲ್ಲಣ!

    ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

    ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

    ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

    ಕೇರಳ ಸಿಎಂ ಸೇರಿ ಆರು ಸಚಿವರು ಕ್ವಾರಂಟೈನ್‌: ಸಹಕಾರ ಸಚಿವ ಧ್ವಜಾರೋಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts