More

    ಬಾಲಿವುಡ್‌ನಲ್ಲಿ ನಟ ಶಿವರಾಮ್‌ ದಾಖಲೆ: ಮೂವರು ಸೂಪರ್‌ಸ್ಟಾರ್‌ಗಳ ಭಾರತದ ಏಕೈಕ ಸಿನಿಮಾ ಕೊಟ್ಟವರು ಇವರೇ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳ ಕಾಲ ಮಿಂಚಿದ್ದ ಹಿರಿಯ ನಟ ಶಿವರಾಮ್‌ ಇನ್ನಿಲ್ಲ. ಶಿವರಾಮ್‌ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಹಾಸ್ಯನಟನೆ. ಹಾಗೆಂದು ಅವರು ಇದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಪೋಷಕ ನಟರಾಗಿ, ಹಾಸ್ಯ ನಟರಾಗಿ ಬಹಳಷ್ಟು ಜನಪ್ರಿಯತೆ ಗಳಿಸಿರುವ ಶಿವರಾಮ್‌ ಅವರ ಬಗ್ಗೆ ಹಲವರಿಗೆ ತಿಳಿಯದ ಒಂದು ವಿಷಯವಿದೆ. ಅದೇನೆಂದರೆ ಇವರು ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

    ಇವುಗಳ ಹೊರತಾಗಿಯೂ ಚಿತ್ರರಂಗದಲ್ಲಿ ದಾಖಲೆ ಬರೆದವರು ಈ ಹಿರಿಯ ನಟ. ಅದೇನೆಂದರೆ ಮೂವರು ಸೂಪರ್‌ಸ್ಟಾರ್‌ಗಳನ್ನು ಒಂದೇ ಚಿತ್ರದಲ್ಲಿ ಹಾಕಿಕೊಂಡು ಇವರು ನಿರ್ಮಾಣ ಮಾಡಿದ್ದ ಸಿನಿಮಾವೊಂದು ದಾಖಲೆ ಸೃಷ್ಟಿಸಿದೆ. ಭಾರತದ ಇತಿಹಾಸದಲ್ಲಿಯೇ ಇಂಥದ್ದೊಂದು ಸಾಧನೆ ಮಾಡಿದ ಶ್ರೇಯಸ್ಸು ಶಿವರಾಮ್‌ ಅವರಿಗೆ ಸಲ್ಲುತ್ತದೆ.

    ಆ ಸಿನಿಮಾನದ ಹೆಸರು ಗಿರಫ್ತಾರ್‌. ಬಾಲಿವುಡ್‌ನ ಈ ಸಿನಿಮಾ ನಿರ್ಮಿಸಿದ್ದು ಶಿವರಾಮ್‌ ಹಾಗೂ ಅವರ ಸಹೋದರ ಎಸ್‌. ರಾಮನಾಥ್‌. ಇದರ ನಿರ್ಮಾಣವಾಗಿದ್ದು 1985ರಲ್ಲಿ. ಈ ಚಿತ್ರದಲ್ಲಿ ಅಂದು ಕೂಡ ಮೇರುನಟರಾಗಿ ಮಿಂಚುತ್ತಿದ್ದ ಅಮಿತಾಭ್‌ ಬಚ್ಚನ್‌, ಕಮಲ ಹಾನ್‌ ಮತ್ತು ರಜನೀಕಾಂತ್‌ ನಟಿಸಿದ್ದರು. ಈ ಮೂವರು ಮೇರು ನಟರು ನಟಿಸಿದ್ದ ಹಾಗೂ ಇಂಥ ಸ್ಟಾರ್‌ ನಟರು ಒಂದೇ ಚಿತ್ರದಲ್ಲಿ ನಟಿಸಿದ್ದು ಅದೇ ಮೊದಲು, ಅದೇ ಕೊನೆ ಎನ್ನಲಾಗಿದೆ.

    ಇಂಥದ್ದೊಂದು ನಿರ್ಮಾಣ ಕಾರ್ಯಕ್ಕೆ ಶಿವರಾಮ್‌ ಅವರು ಕೈಹಾಕಿದ್ದು ತಮ್ಮ ‘ರಾಶಿ ಬ್ರದರ್ಸ್‌’ ಸಂಸ್ಥೆಯಿಂದ. ಸಹೋದರ ಎಸ್‌.ರಾಮನಾಥ್‌ ಅವರ ಜತೆಗೂಡಿ 70ರ ದಶಕದಲ್ಲಿ ಈ ಸಂಸ್ಥೆ ಕಟ್ಟಿದ್ದ ಇವರು, ಇದರ ಮೂಲಕವೇ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಸೂಪರ್‌ ಹಿಟ್‌ ಚಲನಚಿತ್ರ ಎನಿಸಿಕೊಂಡಿರುವ ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು (1980) ಚಿತ್ರಗಳನ್ನು ಕೂಡ ಇದೇ ಸಂಸ್ಥೆಯಡಿ ನಿರ್ಮಿಸಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪೆಟ್ಟು: ಹಿರಿಯ ನಟ ಶಿವರಾಮ್ ವಿಧಿವಶ

    ಭಾವಿ ಅಳಿಯನಿಗೆ ಷರತ್ತು ವಿಧಿಸಿ ಮಗಳನ್ನು ಕಳೆದುಕೊಂಡ ಅಪ್ಪ- ಮನನೊಂದು ಆತ್ಮಹತ್ಯೆ ಮಾಡಿಕೊಂಡ ಜೋಡಿ!

    ಲ್ಯಾಪ್‌ಟಾಪ್‌, ಫೋನ್‌ಗಳನ್ನೂ ಸೋಪ್‌ ಹಾಕಿ ತೊಳೀತಾಳೆ, ಆರು ಸಲ ಸ್ನಾನ ಮಾಡ್ತಾಳೆ… ಬೆಂಗಳೂರಿನ ಟೆಕ್ಕಿಯಿಂದ ಕೇಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts