More

    ಕೃಷಿ ಕಾನೂನು ಜಾರಿ: ಕೇಂದ್ರಕ್ಕೆ ‘ಸುಪ್ರೀಂ’ ಮಹತ್ವದ ಸೂಚನೆ- ರೈತರಿಗೂ ಕಿವಿಮಾತು

    ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾನೂನು ವಿರೋಧಿಸಿ ಭಾರಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಈ ವಿವಾದ ಸುಪ್ರೀಂಕೋರ್ಟ್​ಗೂ ಹೋಗಿತ್ತು. ಕೃಷಿ ಕಾನೂನು ರೈತ ವಿರೋಧಿಯಾಗಿರುವ ಹಿನ್ನೆಲೆಯಲ್ಲಿ ಇದನ್ನು ರದ್ದು ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೆಲವರು ಕೋರ್ಟ್​ ಮೊರೆ ಹೋಗಿದ್ದಾರೆ.

    ಇಂದು ದೇಶವ್ಯಾಪಿ ರೈತರ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದೆ. ಕೃಷಿ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಇಂದು ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ಪೀಠ, ಕೇಂದ್ರ ಸರ್ಕಾರ ಹಾಗೂ ರೈತರು ಇಬ್ಬರಿಗೂ ಕೆಲವೊಂದು ಸೂಚನೆಗಳನ್ನು ನೀಡಿದೆ.

    ಅದರಲ್ಲಿ ಮಹತ್ವವಾಗಿ, ಈ ಎಲ್ಲಾ ಪ್ರಕರಣಗಳನ್ನು ಡಿಸೆಂಬರ್​ 3ನೇ ವಾರದಲ್ಲಿ ಕುಳಿತುಕೊಳ್ಳುವ ರಜಾಕಾಲದ ಪೀಠಕ್ಕೆ ವಹಿಸುವುದಾಗಿ ಕೋರ್ಟ್​ ಹೇಳಿದೆ. ಅದರ ಜತೆಗೆ, ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಕಾನೂನನ್ನು ಜಾರಿಗೆ ತರಲು ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಈ ಕುರಿತು ಯಾವುದೇ ರೀತಿಯ ಆದೇಶ ಹೊರಡಿಸದಿದ್ದರೂ ಮೌಖಿಕವಾಗಿ ಇಂಥದ್ದೊಂದು ಸೂಚನೆಯನ್ನು ನೀಡಿದ್ದಾರೆ ನ್ಯಾಯಮೂರ್ತಿಗಳು.

    ಅದೇ ವೇಳೆ ರೈತರಿಗೂ ನ್ಯಾಯಮೂರ್ತಿಗಳು ಕೆಲವೊಂದು ಕಿವಿಮಾತು ಹೇಳಿದ್ದಾರೆ. ಅದೇನೆಂದರೆ, “ಕಾನೂನಿನ ವಿರುದ್ಧ ಪ್ರತಿಭಟಿಸುವ ಮೂಲಭೂತ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದು, ರಸ್ತೆಗಳನ್ನು ಬ್ಲಾಕ್​ ಮಾಡುವುದು, ಜನರಿಗೆ ಅನಾನುಕೂಲ ಆಗುವಂತೆ ನಡೆದುಕೊಳ್ಳುವುದು ಸರಿಯಲ್ಲ. ಇದು ನಿಯಮ ಬಾಹಿರ. ಆದ್ದರಿಂದ ಶಾಂತಯುತವಾಗಿ ಪ್ರತಿಭಟನೆಗೆ ಅವಕಾಶವಿದೆ ಎಂದಿದೆ.

    “ಪ್ರತಿಭಟನೆಯ ಉದ್ದೇಶವು ಅಹಿಂಸಾತ್ಮಕ ವಿಧಾನಗಳಿಂದ ಈಡೇರಬೇಕು. ಪ್ರತಿಭಟನೆಗಳು ಸಮಸ್ಯೆಗಳ ಬಗ್ಗೆ ಇರಬೇಕೇ ವಿನಾ ಅದು ಹಾದಿ ತಪ್ಪಬಾರದು. ಅನ್ಯಾಯಕ್ಕೊಳಗಾದವರು ತಮಗಾಗಿರುವ ಅನ್ಯಾಯಗಳನ್ನು ಸಮಾಧಾನವಾಗಿ ಹೇಳಲು ಅನುವು ಮಾಡಿಕೊಡಬೇಕು ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.

    ಸಮಿತಿ ರಚನೆ
    ರೈತರು ಕೇಂದ್ರ ಸರ್ಕಾರದ ಮಾತುಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಕೇಳಲು ತಯಾರಿಲ್ಲ ಎನ್ನುವುದನ್ನು ನಾವು ಗಮನಿಸಿದ್ದೇವೆ ಎಂದ ನ್ಯಾಯಮೂರ್ತಿಗಳು ಈ ಹಿನ್ನೆಲೆಯಲ್ಲಿ ಸಮಿತಿಯೊಂದರ ರಚನೆ ಮಾಡಲು ನಿರ್ದೇಶಿಸಿದ್ದಾರೆ.

    ಇದನ್ನು ಒಂದು ಸಮಿತಿ ರಚನೆ ಮಾಡಿ ಪರಿಹರಿಸುವ ಅಗತ್ಯವಿದೆ. ಕೃಷಿಯ ಬಗ್ಗೆ ಅಪಾರ ತಜ್ಱತೆ ಇರುವ ಯಾವುದೇ ಪಕ್ಷಕ್ಕೆ ಸೇರದ ಸ್ವತಂತ್ರ ಸದಸ್ಯರು ಇದನ್ನು ಆಲಿಸಬೇಕು. ನಂತರ ಎರಡೂ ಕಡೆಯವರನ್ನು ಆಲಿಸಿದ ನಂತರ ತೀರ್ಮಾನಕ್ಕೆ ಬಂದು ಒಂದು ವರದಿ ನೀಡಬೇಕು. ಅಲ್ಲಿಯವರೆಗೆ ಬೇಕಿದ್ದರೆ ಪ್ರತಿಭಟನೆ ಮಾಡುವ ಹಕ್ಕು ರೈತರಿಗೆ ಇದೆ, ಆದರೆ ಎಲ್ಲಿಯೂ ಹಿಂಸಾತ್ಮಕ ಆಗಿರಬಾರದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

    ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ, ಗಂಡನ ಕೊಲೆ ಮಾಡಿರುವ ಶಂಕೆಯಿದ್ದರೂ ಈ ಕೇಸ್​ನಲ್ಲಿ ಆಸ್ತಿ ಸಿಗುತ್ತೆ…

    ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

    ಫುಟ್​ಬಾಲ್​ ತಾರೆ ಮರಡೋನಾಗೆ 5 ವಿವಾದಿತ ಮಕ್ಕಳು: ಮೃತದೇಹ ಸಂರಕ್ಷಿಸಿಡಲು ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts