More

    VIDEO: ಕಾರು, ಬಸ್ಸು ಅಲ್ಲ… ರೈಲನ್ನೇ ತಳ್ಳಿದ ಜನರು- ವಿಡಿಯೋ ವೈರಲ್‌

    ಹರ್ಡಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಹರ್ಡಾದ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್‌ನಲ್ಲಿ (ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳಿಗೆ ಶಕ್ತಿ ತುಂಬುವ ಕೇಬಲ್‌ಗಳನ್ನು ಪರೀಕ್ಷಿಸಲು ಬಳಸುವ ಸ್ವಯಂ-ಚಾಲಿತ ಘಟಕ) ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜನರು ರೈಲನ್ನು ತಳ್ಳಿಕೊಂಡು ಹೋಗಿರುವ ಘಟನೆ ನಡೆದಿದೆ.

    ಈ ಟ್ರ್ಯಾಕ್‌ ಬಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಟವರ್‌ ವ್ಯಾಗನ್‌ ನಿಂತಿತ್ತು. ಅದರಲ್ಲಿ ತಾಂತ್ರಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಚಲಿಸಲು ಸಾಧ್ಯವಾಗಲಿಲ್ಲ. ಈ ರೈಲಿನ ಬೆನ್ನಲ್ಲೇ ಇದೇ ಟ್ರ್ಯಾಕ್‌ ಮೇಲೆ ಇಟಾರಸಿಯಿಂದ ಪವನ್‌ ಎಕ್ಸ್‌ಪ್ರೆಸ್‌ ರೈಲು ಬರುತ್ತಿತ್ತು. ಅದನ್ನು ದೂರವೇ ನಿಲ್ಲಿಸಲಾಗಿತ್ತು. ಅದರೆ ಈ ರೈಲು ಮುಂದೆ ಸಾಗದ ಕಾರಣ, ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿ ಜನರೇ ರೈಲನ್ನು ತಳ್ಳಿಕೊಂಡು ಹೋಗುವಂತಾಯಿತು.

    ಸಾಮಾನ್ಯವಾಗಿ ಇಂಥ ಸಮಸ್ಯೆ ಎದುರಾದಾಗ ಯಂತ್ರಗಳ ಸಹಾಯದಿಂದ ರೈಲು ಚಲಿಸುವಂತೆ ಮಾಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಅದು ಆರಂಭದಲ್ಲಿ ಸಾಧ್ಯವಾಗದ ಕಾರಣ, ಜನರೇ ರೈಲನ್ನು ತಳ್ಳಿಕೊಂಡು ಹೋಗಿದ್ದಾರೆ. ನಂತರ ಅದನ್ನು ಸರಿಪಡಿಸಲಾಗಿದೆ.

    ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಹಲವಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ.

    ನೀವೂ ನೋಡಿ ವಿಡಿಯೋ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts