More

    ಪುಲ್ವಾಮಾದಲ್ಲಿ ಪಾಕ್‌ ಉಗ್ರರ ಅಟ್ಟಹಾಸಕ್ಕೆ ಎರಡು ವರ್ಷ: 40 ಯೋಧರ ನೆನೆದು ಕಣ್ಣೀರು

    ಪುಲ್ವಾಮಾ: 2019ರ ಫೆಬ್ರುವರಿ 14. ಒಂದೆಡೆ ಅನೇಕ ಮಂದಿ ಪ್ರೇಮಿಗಳ ದಿನದ ಖುಷಿಯಲ್ಲಿದ್ದರೆ, ಅತ್ತ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. 40 ಯೋಧರು ಹುತಾತ್ಮರಾದರು. ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದ ಉಗ್ರರು ಭಾರತದ ಯೋಧರನ್ನು ಬಲಿ ಪಡೆದಿದ್ದರು.

    ನವದೆಹಲಿ: ಪಾಕಿಸ್ತಾನ ಇದರಲ್ಲಿ ತನ್ನ ಕೈವಾಡ ಇಲ್ಲ ಎಂದು ಬಾಯಿ ಮಾತಿನಿಂದ ಹೇಳಿದ್ದರೂ, ನಿಜ ಏನು ಎಂಬುದು ಇಡೀ ಭಾರತೀಯರಿಗೆ ಹಾಗೂ ಪಾಪಿ ಪಾಕಿಗಳಿಗೂ ಅರಿವಿತ್ತು. ಜೈಷ್‌ ಎ ಮೊಹಮ್ಮದ್​ಗೆ ಸೇರಿದ್ದ ಅದಿಲ್ ಅಹ್ಮದ್ ದಾರ್ ಅನ್ನೋ ದುರುಳ ಸಿಆರ್​ಪಿಎಫ್​ ಯೋಧರು ಸಂಚರಿಸುತ್ತಿದ್ದ ಬಸ್​ಗೆ ಆರ್​ಡಿಎಕ್ಸ್ ತುಂಬಿದ್ದ ಕಾರನ್ನ ಡಿಕ್ಕಿ ಹೊಡೆಸಿದ್ದರು. ಮಂಡ್ಯದ ವೀರಯೋಧನೂ ಇಂದೇ ಹುತಾತ್ಮನಾಗಿರುವ ದಿನವಿದು. ಅಂದು ಜಮ್ಮುವಿನಿಂದ ಶ್ರೀನಗರದ ಕಡೆ 78 ಬಸ್​ಗಳಲ್ಲಿ 2,500 ಜನ ಸಿಆರ್​ಪಿಎಫ್ ಯೋಧರು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

    ಪುಲ್ವಾಮಾದಲ್ಲಿ ನಡೆದಿದ್ದ ಈ ರಕ್ಕಸ ಕೃತ್ಯವನ್ನು ಇಡೀ ಭಾರತ ಎಂದೂ ಮರೆಯದು. ಇಂತಹ ನೋವಿನ ದಿನಕ್ಕೆ ಇವತ್ತಿಗೆ ಎರಡು ವರ್ಷ ತುಂಬಿದೆ.
    ದೇಶಕ್ಕಾಗಿ ಬಲಿದಾನ ಮಾಡಿದ ಅನೇಕ ಯೋಧರನ್ನು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಅನೇಕ ಗಣ್ಯರು ನೆನೆದಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಇದಾಗಲೇ ಪಾಕಿಸ್ತಾನಕ್ಕೆ ಭಾರತ ದಿಟ್ಟ ಉತ್ತರವನ್ನೂ ನೀಡಿಯಾಗಿದೆ.


    ಈ ದಿನಂದು ದೇಶಕ್ಕಾಗಿ ಪುಲ್ವಾಮಾ ಮಾತ್ರವಲ್ಲದೇ ದಿನನಿತ್ಯವೂ ತಮ್ಮ ಜೀವವನ್ನು ಪಣಕ್ಕಿಟ್ಟಿರುವ ಯೋಧರನ್ನು ಹುರಿದಂಬಿಸಲು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ವಿವಿಧ ರೀತಿ ಕಮಂಟ್‌ಗಳನ್ನು ಹಾಕಿದ್ದಾರೆ. ಓ ವೀರರೇ, ನಿಮ್ಮ ತ್ಯಾಗವನ್ನು ನಾವೆಂದೂ ಮರೆಯಲಾರೆವು. ಇಡೀ ಭಾರತದ ಪ್ರತಿಯೊಬ್ಬರ ಹೃದಯ ಸಿಂಹಾಸನದಲ್ಲಿ ನೀವೆಂದೂ ಅಜರಾಮರ… ನಮ್ಮ ವೀರರಿಗೆ ನಮ್ಮ ಸೆಲ್ಯೂಟ್‌; ಕೆಚ್ಚೆದೆಯ ವೀರರೇ. ನಿಮ್ಮ ತ್ಯಾಗ, ಬಲಿದಾನವನ್ನು ನಾವೆಂದೂ ಮರೆಯಲಾರೆವು. ನಿಮ್ಮ ಧೈರ್ಯ, ಸಾಹಸ ನಮ್ಮ ಬದುಕಿಗೆ ಸ್ಫೂರ್ತಿ. ಎಲ್ಲಾ ಹುತಾತ್ಮರಿಗೂ ನಮ್ಮ ಪ್ರಣಾಮಗಳು; ನಮಗಾಗಿ ಕಷ್ಟಪಟ್ಟಿರಿ, ನಮಗಾಗಿ ಜೀವ ನೀಡಿದಿರಿ… ಭಾರತ ಮಾತೆಯ ಹೆಮ್ಮೆಯ ಪುತ್ರರೇ, ನಿಮ್ಮ ನೆನಪೆಂದೂ ಶ್ವಾಶ್ವತ. ಸೂರ್ಯ ಚಂದ್ರರಿರುವವರೆಗೂ ನೀವು ಅಮರ…; ತಾವೆಲ್ಲಾ ನಿಜವಾದ ನಾಯಕರು. ತಮ್ಮ ತ್ಯಾಗ ಬಲಿದಾನದಿಂದ ನಾವಿಂದು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಓ ವೀರರೇ, ನಿಮ್ಮ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ… ವಂದೇ ಮಾತರಂ… ಹೀಗೆ ಹಲವಾರು ಮಂದಿ ಕಮೆಂಟ್‌ ಮೂಲಕ ನಮನ ಸಲ್ಲಿಸುತ್ತಿದ್ದಾರೆ.

    ರಾಮಸೇತು ನಿರ್ಮಾಣಕ್ಕೆ 48 ಅಡಿ ಉದ್ದದ ಕೇಕ್‌ ಮೇಲೆ ಕಲ್ಲುಹೊತ್ತು ಸಾಗುತಿದೆ ವಾನರಸೇನೆ

    ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಉಗ್ರ ಕೊನೆಗೂ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts