More

    ಅಜ್ಜನ ಆಸ್ತಿ ನಿಮ್ಮಮ್ಮನ ಹಕ್ಕು, ಉಳಿದವರು ಕೊಡಲ್ಲ ಎಂದರೂ ಬಂದೇ ಬರುತ್ತದೆ, ಚಿಂತಿಸಬೇಡಿ…

    ಅಜ್ಜನ ಆಸ್ತಿ ನಿಮ್ಮಮ್ಮನ ಹಕ್ಕು, ಉಳಿದವರು ಕೊಡಲ್ಲ ಎಂದರೂ ಬಂದೇ ಬರುತ್ತದೆ, ಚಿಂತಿಸಬೇಡಿ...ನಮ್ಮ ತಾಯಿಯ ತಂದೆಗೆ ಅವರ ತಂದೆಯಿಂದ ಐದು ಆಸ್ತಿಗಳು ಬಂದಿದ್ದವು. ಈಗ ನಮ್ಮ ತಾಯಿಯ ತಂದೆ ತೀರಿಕೊಂಡಿದ್ದಾರೆ. ನಮ್ಮ ತಾತನಿಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬ ಗಂಡು ಮಗ ಮತ್ತು ಒಬ್ಬ ಹೆಣ್ಣು ಮಗಳು ತೀರಿಕೊಂಡಿದ್ದಾರೆ. ಈಗ ಇರುವವರು ನಮ್ಮ ತಾಯಿ ಮತ್ತು ಅವರ ಅಣ್ಣ ಇಬ್ಬರೇ. ಆಸ್ತಿಯಲ್ಲಿ ನನ್ನ ಅರ್ಧ ಭಾಗ ಕೊಡು ಎಂದರೆ ನಮ್ಮ ತಾಯಿಗೆ ಭಾಗವೇ ಇಲ್ಲ ಎನ್ನುತ್ತಿದ್ದಾರೆ. ನಮ್ಮ ತಾಯಿಯ ತಾಯಿಯೂ ಅವರಿಗೇ ಸಪೋರ್ಟು ಮಾಡುತ್ತಿದ್ದಾರೆ ಗಂಡು ಮಗನಿಗೇ ಎಲ್ಲ ಭಾಗ ಎನ್ನುತ್ತಿದ್ದಾರೆ. ನಾವು ತುಂಬಾ ಬಡವರು. ನಾವೀಗ ಏನು ಮಾಡಬೇಕು.?

    ಉತ್ತರ: ನಿಮ್ಮ ತಾಯಿಯ ತಂದೆಯ ಆಸ್ತಿ ಐದು ಭಾಗ ಆಗುತ್ತದೆ. ನಿಮ್ಮ ಅಜ್ಜಿಗೆ ಮತ್ತು ಅವರ ನಾಲ್ಕು ಮಕ್ಕಳಿಗೆ . ಮೃತ ಮಕ್ಕಳ ಭಾಗ ಅವರವರ ವಾರಸುದಾರರಿಗೆ ಹೋಗುತ್ತದೆ. ನಿಮ್ಮ ತಾಯಿಗೆ ಅರ್ಧ ಭಾಗ ಬರುವುದಿಲ್ಲ ಆದರೆ, ಐದನೇ ಒಂದು ಭಾಗ ಬರುತ್ತದೆ.

    ವಿಭಾಗದ ಕೇಸು ಹಾಕಿ. ಹಣ ಇಲ್ಲದೇ ಇದ್ದರೆ ಉಚಿತ ಕಾನೂನು ಸೇವೆಯ ಸಹಾಯ ಪಡೆಯಿರಿ. ಒಂದು ಪೈಸೆಯೂ ಖರ್ಚು ಮಾಡದೇ ನಿಮ್ಮ ತಾಯಿ ನ್ಯಾಯ ಪಡೆಯಬಹುದು. ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಕಾನೂನು ಸೇವಾ ಕೇಂದ್ರಕ್ಕೆ ಹೋದರೆ ಅವರೇ ಎಲ್ಲ ಮಾಹಿತಿ ಕೊಡುತ್ತಾರೆ.

    VIDEO: ಇನ್‌ಸ್ಟಾಗ್ರಾಂ ಪೋಸ್ಟ್‌ ನಿಜವಾಗೋಯ್ತಲ್ಲಾ! ಅಪಘಾತದಲ್ಲಿ ಸಾಯೋ ಮುನ್ನ ನಟಿಯ ಸಂದೇಶ ಓದಿ ಕಣ್ಣೀರು..

    ಅಪ್ಪುವಿನ ಸಮಾಧಿ ಬಳಿ ನೂಕುನುಗ್ಗಲು: ಐದು ದಿನ ಸಿಗದು ದರ್ಶನ- ಗೇಟ್‌ ಬಳಿ ಕಣ್ಣಿರಿಡುತ್ತರೋ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts