More

    ‘ಇಲ್ಲಿರುವುದು ಒಂದೇ ಸರ್ಕಾರ, ಅದು ಶಿವನ ಸರ್ಕಾರ- ಇಲ್ಲಿಂದು ಇತಿಹಾಸ ಸೃಷ್ಟಿಯಾಗಿದೆ…’

    ವಾರಣಾಸಿ: ವಾರಾಣಸಿಯಲ್ಲಿ 339 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಶಿ ನೆಲದ ಮಹತ್ವದ ಬಗ್ಗೆ ವಿವರಿಸಿದರು. ಕಾಶಿಯ ಬಗ್ಗೆ ಎಷ್ಟೇ ಮಾತನಾಡಿದರೂ ಅಷ್ಟೇ ಭಾವುಕರಾಗುತ್ತೇನೆ. ಕಾಶಿ ಎಂದರೆ ಇದು ಸಂವೇದನೆಯ ಸೃಷ್ಟಿ, ಕಾಶಿ ಎಂದರೆ ಇಲ್ಲಿ ಮೃತ್ಯು ಕೂಡ ಮಂಗಳವೇ. ಕಾಶಿಯಲ್ಲಿ ಸತ್ಯವೇ ಸಂಸ್ಕಾರ, ಕಾಶಿಯಲ್ಲಿ ಪ್ರೇಮವೇ ಪರಂಪರೆ ಎಂದರು.

    ನಾಲ್ಕು ಜೈನ ತೀರ್ಥಂಕರರ ಜನ್ಮಭೂಮಿಯಾಗಿರುವ ಕಾಶಿಯಲ್ಲಿ ಇಲ್ಲಿಯವರೆಗೆ ಆಗಿ ಹೋಗಿರುವ ಹಲವಾರು ಮಹನೀಯರ ಬಗ್ಗೆ ಮೋದಿ ಪ್ರಸ್ತಾಪಿಸಿದರು.

    ಕಾಶಿ ಎಂದರೆ ಅವಿನಾಶಿನಿ. ಇಲ್ಲಿ ಇರುವುದು ಒಂದೇ ಸರ್ಕಾರ, ಅದು ಶಿವನ ಸರ್ಕಾರ. ಇಲ್ಲಿ ಯಾರೇ ಬರಬೇಕು ಎಂದರೂ ಶಿವನ ಅನುಗ್ರಹ ಆಗಬೇಕು. ಅಂಥದ್ದೊಂದು ಪುಣ್ಯಭೂಮಿಯಲ್ಲಿ ಇಂಥದ್ದೊಂದು ಕೆಲಸ ಮಾಡುವ ಅವಕಾಶ ನಮ್ಮ ಸರ್ಕಾರಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಪ್ರಧಾನಿ ಹೇಳಿದರು.

    ಕಾರಿಡಾರ್‌ ನಿರ್ಮಾಣಕ್ಕೆ ಕರೊನಾದಂಥ ಕಾಲದಲ್ಲಿಯೂ ಹಗಲು ರಾತ್ರಿ ಶ್ರಮಿಸಿದ ಕಾರ್ಮಿಕರು, ಇಂಜಿನಿಯರ್‌ ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಆಡಳಿತಾವಧಿಯಲ್ಲಿ ಆಗಿರುವ ವಿವಿಧ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು.

    ಸುಮಾರು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದೆ. ದೇಶ-ವಿದೇಶಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿಗಳು, ಆಹಾರ ಮಳಿಗೆ ಮುಂತಾದವು ಇದರಲ್ಲಿ ಸೇರಿವೆ. ಈ ಕಾರ್ಯಕ್ರಮವನ್ನು ದೇಶದ 51 ಸಾವಿರ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗಿದೆ.

    LIVE: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಕಾಶಿ: 339 ಕೋಟಿ ರೂ.ವೆಚ್ಚದ ಕಾರಿಡಾರ್‌ಗೆ ಪ್ರಧಾನಿ ಚಾಲನೆ

    VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts