More

    ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

    ಇಸ್ಲಾಮಾಬಾದ್: ಇಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಬಹಳ ಖುಷಿಯಲ್ಲಿದ್ದಾರೆ. ಕಾರಣ ಅವರ ಸರ್ಕಾರ ಇಂದು ಸೇಫ್​ ಆಗಿದೆ. ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾರಣದಿಂದ ಬಹುಮತ ಸಾಬೀತು ಮಾಡುವುದು ಇಮ್ರಾನ್​ ಖಾನ್​ ಅವರಿಗೆ ಅನಿವಾರ್ಯವಾಗಿತ್ತು. ಬಹುಮತ ಸಾಬೀತು ಪಡಿಸುವಂತೆ ವಿರೋಧ ಪಕ್ಷದವರು ಆಗ್ರಹಿಸಿದ್ದರು.

    ಈ ಹಿನ್ನೆಲೆಯಲ್ಲಿ, ಅವರು ಇಂದು ಬಹುಮತ ಸಾಬೀತು ಮಾಡಿದ್ದರು. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಿ, ಬಹುಮತ ಗಳಿಸಿದ್ದಾರೆ ಇಮ್ರಾನ್​ ಖಾನ್​.

    ಪಾಕಿಸ್ತಾನ್ ಡೆಮಾಕ್ರಾಟಿಕ್​ ಮೂವ್​ಮೆಂಟ್​ ಅಭ್ಯರ್ಥಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಶೇಖ್ ಅವರು ಪರಾಭವಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದವು. ಆದ್ದರಿಂದ ಬಹುಮತ ಸಾಬೀತು ಪಡಿಸುವಂತೆ ಆಡಳಿತ ಪಕ್ಷದ ಉಪಾಧ್ಯಕ್ಷ ಖುರೇಶಿ ಅವರು ಆದೇಶಿಸಿದ್ದರು. ಶೇಖ್​ ಅವರ ಸೋಲಿನಿಂದ ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷಕ್ಕೆ ವ್ಯಾಪಕ ಹಿನ್ನಡೆಯಾಗಿತ್ತು. ಗೌಪ್ಯ ಮತದಾನದಲ್ಲಿ ಮಿತ್ರಪಕ್ಷಗಳು ಪಕ್ಷಾಂತರ ಮಾಡಿರುವ ಸಾಧ್ಯತೆ ಇತ್ತು. ಈಗ ಎಲ್ಲವನ್ನೂ ಮೀರಿ ಇಮ್ರಾನ್​ ಖಾನ್​ ಬಹುಮತ ಸಾಬೀತು ಪಡಿಸಿದ್ದಾರೆ.

    ಇಮ್ರಾನ್​ ಖಾನ್​ ಸರ್ಕಾರದ ಪರ 178 ಮತಗಳು ಚಲಾವಣೆಯಾಗಿರುವ ಕಾರಣ, ಸರ್ಕಾರ ಇದೀಗ ಸೇಫ್​ ಆಗಿದೆ. ಬಹುತಮವನ್ನು ಸಾಬೀತು ಮಾಡಲು 172 ಮತಗಳು ಅಗತ್ಯವಿತ್ತು. ಆರು ಮತಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ಬಹುಮತ ಸಾಬೀತು ಪಡಿಸಿದ್ದಾರೆ.

    ಎಂಟು ವರ್ಷಗಳ ಹಿಂದೆ 176 ಸ್ಥಾನಗಳೊಂದಿಗೆ ಅಧಿಕಾರ ಪಡೆದಿದ್ದರು ಇಮ್ರಾನ್ ಖಾನ್, ಇದೀಗ 178 ಮತ ಬಂದಿರುವ ಕಾರಣ, ಇನ್ನೂ ಇಬ್ಬರು ಇವರ ಪರ ಒಲುವು ತೋರಿರುವುದು ಸಾಬೀತಾಗಿದೆ. ಸಂಸತ್​ನಲ್ಲಿ ಇಮ್ರಾನ್ ಖಾನ್ ಬಹುಮತ ಪಡೆದಿದ್ದು, ಇದೀಗ ದೇಶದ ಜನರ ಬೆಂಬಲ ಪಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಪಾಕಿಸ್ತಾನ ಪ್ರಮುಖ ರಾಜಕೀಯ ಮುಖಂಡರೊಬ್ಬರು ಹೇಳಿದ್ದಾರೆ.

    ಬೆನಜೀರ್ ಭುಟ್ಟೋ, ನವಾಜ್ ಷರೀಫ್, ಜಫರುಲ್ಲಾ ಜಮಾಲಿ, ಚೌಧರಿ ಶುಜಾತ್, ಶೌಕತ್‌ಅಜೀಜ್ ಹಾಗೂ ಯೂಸುಫ್ ರಾಜಾ ಗಿಲಾನಿ ಅವರು ಈ ಹಿಂದೆ ವಿಶ್ವಾಸಮತ ಯಾಚನೆ ಮಾಡಿದ್ದರು.

    ನನಗೆ ಹೇಳದೇ ನನ್ನ ಪಾಲಿನ ಜಮೀನು ಮಾರಿ ಅಮ್ಮ ತೀರಿಕೊಂಡರು- ಅದನ್ನು ಮರಳಿ ಪಡೆಯಬಹುದೆ?

    VIDEO: ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ಎಂದು ಡಾನ್ಸ್​ ಮಾಡಿದ ಹಾಲಿ, ಮಾಜಿ ಸಿಎಂಗಳು!

    ಯುವಕನಾದರೂ ಯುವತಿಯರ ಕಂಡರೆ ಅಸಹ್ಯವಾಗುತ್ತಿದ್ದು, ಭಯ ಶುರುವಾಗಿದೆ… ಏನಿದು?

    ದೀದಿಯಿಂದ ‘ಮಾ’ಗೆ ಬಡ್ತಿ ಪಡೆದ ಮಮತಾ: ಪಶ್ಚಿಮ ಬಂಗಾಳದ ತುಂಬಾ ಸಾಂಬಾರ್​, ಮೊಟ್ಟೆ ಕರಿ ಘಮಲು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts