More

    ಶುಕ್ರವಾರ ಕರ್ನಾಟಕ ಬಂದ್​ ಮಾಡಲ್ಲ ಎಂದ ರೈತ ಸಂಘಟನೆ: ಆದರೆ…

    ಬೆಂಗಳೂರು: ಎಪಿಎಂಸಿ, ವಿದ್ಯುತ್ ಹಾಗೂ ಭೂಸುಧಾರಣೆ ಕಾಯ್ದೆ ವಿರೋಧಿಸಿ ರೈತ ಸಂಘಟನೆ ಸೇರಿದಂತೆ ಕೆಲವು ಸಂಘಟನೆಗಳು ಇದೇ ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ ಎನ್ನಲಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರೈತ ಸಂಘಟನೆಯು ಸೆ.25ರಂದು ನಾವು ಕರ್ನಾಟಕ ಬಂದ್​ ಮಾಡಲ್ಲ ಎಂದು ಹೇಳಿದೆ.

    ಸರ್ಕಾರದ ನಡೆ ವಿರೋಧಿಸಿ ರೈತ ಪರ ಸಂಘಟನೆಯಿಂದ ಇದೇ 25ರಂದು ಬಂದ್​ಗೆ ಕರೆ ನೀಡುವ ಬಗ್ಗೆ ನಿರ್ಧರಿಸಿದ್ದೆವು. ಆದರೆ ಕರ್ನಾಟಕ ಬಂದ್​ ಮಾಡುವುದಿಲ್ಲ. ಬದಲಿಗೆ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಕರುಬೂರು ಶಾಂತಕುಮಾರ್ ಹೇಳಿದ್ದಾರೆ.

    ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಹೊಸ ಕೃಷಿ ಕಾನೂನು: ವಾಸ್ತವವೇನು? ಗಾಳಿಮಾತುಗಳೇನು? ಪ್ರಧಾನಿ ಏನು ಹೇಳಿದ್ದಾರೆ ನೋಡಿ…

    ಈ ನಡುವೆ, ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ಕೈಬಿಡುವ ಮಾತೇ ಇಲ್ಲ ಎಂದಿದ್ದಾರೆ. ರೈತ ಸಂಘಟನೆಗಳಿಗೆ ತಾವು ಕೈಜೋಡಿಸುವುದಾಗಿ ಎಐವೈಎಫ್ ಹೇಳಿದೆ. ಈಗ ತರಲು ಹೊರಟಿರುವ ಕಾಯ್ದೆಗಳಿಂದ ನಮ್ಮ ದೇಶದ ಮತ್ತು ರಾಜ್ಯದ ರೈತರ ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.ಆದ್ದರಿಂದ ರೈತರು ನಡೆಸುವ ಪ್ರತಿಭಟನೆಗಳಿಗೆ ನಮ್ಮ ಬೆಂಬಲ ಇದೆ ಎಂದು ಕರ್ನಾಟಕ ಎಐವೈಫ್ ರಾಜ್ಯಾಧ್ಯಕ್ಷ ಹರೀಶ್ ಬಾಲ ಹೇಳಿದ್ದಾರೆ.

    ಅದೇ ಮತ್ತೊಂದೆಡೆ, ಹುಬ್ಬಳ್ಳಿಯಲ್ಲಿಯೂ ಪ್ರತಿಭಟನೆಯ ಕೂಗು ಕೇಳಿಬರುತ್ತಿದೆ. ರೈತರು ಯಾವುದೇ ರೀತಿಯಲ್ಲಿ ಪ್ರತಿಭಟನೆ ಮಾಡಿದರೂ ತಾವು ಅದರಲ್ಲಿ ಪಾಲ್ಗೊಳ್ಳುವುದಾಗಿ ಕಳಸಾ- ಬಂಡೂರಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಆಟೋ ರಿಕ್ಷಾ ಚಾಲಕರ ಸಂಘ, ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘ, ಬೀಡಿ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಹೇಳಿವೆ.

    ರೈತರ ವ್ಯಾಪಾರ ಸುಲಭ ಮಾಡುವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಸಿಕ್ಕಿತು ಅಂಗೀಕಾರ

    ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ

    ಆಕೆ ನಿಮ್ಮವಳಾಗಬೇಕೆ? ಹಾಗಿದ್ದರೆ ಡಾನ್ಸ್​ ಮಾಡಿ, ಏಳು ದಿನ ಅವಳನ್ನು ಕರಕೊಂಡು ಹೋಗಿ!

    ಅಳಿಯನಿಗೆ ಬೇರೆ ಸಂಬಂಧವಿದೆ- ಮಗಳ ಜೀವನ ಸರಿಮಾಡಲು ಕಾನೂನಲ್ಲಿ ಮಾರ್ಗಗಳಿವೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts