More

    ಮುಸ್ಲಿಂ ಯುವತಿಯ ಸ್ನೇಹಕ್ಕಾಗಿ ಬಿತ್ತು ಮತ್ತೊಂದು ಹೆಣ: ಐವರಿಂದ ಹಿಂದೂ ಯುವಕನ ಹತ್ಯೆ!

    ನವದೆಹಲಿ: ಎರಡು ವರ್ಷಗಳ ಹಿಂದೆ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಅಂಕಿತ್​ ಸಕ್ಸೇನಾ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಇಂದು ಅದೇ ಮಾದರಿಯಲ್ಲಿಯೇ ಮತ್ತೊಬ್ಬ 18 ವರ್ಷದ ಹಿಂದೂ ಯುವಕನ ಹತ್ಯೆ ಮಾಡಿರುವ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.

    ಆದರ್ಶ್ ನಗರದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಪ್ರೀತಿಸಿದ್ದ 18 ವರ್ಷದ ದೆಹಲಿ ವಿಶ್ವವಿದ್ಯಾಲಯದ ಅಹುಲ್ ರಜಪೂತ್ ಎಂಬಾತನನ್ನು ಐದು ಮಂದಿ ಮುಸ್ಲಿಂ ಯುವಕರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಹುಲ್ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ.

    ಮೊಹಮ್ಮದ್​ ಅಫ್ರೋಲ್​, ಮೊಹಮ್ಮದ್​ ರಾಜ್​ ಸೇರಿದಂತೆ ಐವರು ಹಲ್ಲೆ ಮಾಡುತ್ತಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಅಹುಲ್​ ತನ್ನ ಮನೆಯ ಸಮೀಪ ಇರುವ ಯುವತಿಯ ಜತೆ ಸ್ನೇಹ ಬೆಳೆಸಿದ್ದ. ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಯುವತಿಯೂ ಯುವಕನ ಜತೆ ಹತ್ತಿರವಾಗಿದ್ದಳು.

    ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಉಗ್ರರ ತಂಡಕ್ಕೆ ಸೇರಿಸುತ್ತಿದ್ದ ಮೂವರು ಶಿಕ್ಷಕರು ಅರೆಸ್ಟ್​!

    ನಿನ್ನೆ ಇಬ್ಬರೂ ಒಟ್ಟಿಗೇ ಇರುವುದನ್ನು ಕುಟುಂಬಸ್ಥರು ನೋಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ನಾಲ್ಕೈದು ಮಂದಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಇದರಲ್ಲಿ ಯುವತಿಯ ಸಹೋದರನೂ ಸೇರಿದ್ದಾನೆ. ಯುವತಿ ಆತನನ್ನು ಕಾಪಾಡಲು ನೋಡಿದ್ದಾಳೆ, ಆದರೆ ಸಾಧ್ಯವಾಗಲಿಲ್ಲ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಯುವಕನ ಚಿಕ್ಕಪ್ಪ ನೀಡಿರುವ ದೂರಿನ ಅನ್ವಯ ಇಬ್ಬರೂ ಪರಸ್ಪರ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು. ಆದರೆ ಆಕೆಯ ಮನೆಯವರು ಅದರಲ್ಲಿಯೂ ವಿಶೇಷವಾಗಿ ಯುವತಿಯ ಸಹೋದರ ಈ ಸ್ನೇಹಕ್ಕೆ ಅಡ್ಡಿಯಾಗಿದ್ದ ಎಂದಿದ್ದಾರೆ.

    ತನ್ನ ತಂಗಿಯ ಜತೆ ಮಾಡತನಾಡಿದರೆ ಕೊಲೆ ಮಾಡುವ ಬೆದರಿಕೆಯನ್ನು ಆಕೆಯ ಅಣ್ಣ ಹಾಕಿದ್ದ. ಆದರೂ ಇಬ್ಬರೂ ಸ್ನೇಹ ಮುಂದುವರೆಸಿದ್ದರು. ಅವನ ಮೇಲೆ ಹಲ್ಲೆ ಮಾಡುತ್ತಿರುವ ವಿಷಯವನ್ನು ನನ್ನ ಸ್ನೇಹಿತರೊಬ್ಬರು ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆತ ಅದಾಗಲೇ ಮೃತಪಟ್ಟ ಎಂದು ಚಿಕ್ಕಪ್ಪ ಹೇಳಿದ್ದಾರೆ.

    ಘಟನೆಯನ್ನು ಖಂಡಿಸಿರುವ ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ 10 ಲಕ್ಷ ರೂಪಾಯಿ ಪರಿಹಾರವನ್ನು ಯುವಕನ ಕುಟುಂಬಕ್ಕೆ ಘೋಷಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

    ಮಾಜಿ ಸಚಿವನಿಂದ ರೇಪ್​ ಆಗಿದೆ ಎಂದಾಕೆ ಕೋರ್ಟ್​ನಲ್ಲಿ ಇದೆಲ್ಲ ಸುಳ್ಳು ಅನ್ನೋದಾ? ವಕೀಲರೇ ದಂಗು!

    ಬೇರೆ ಬೇರೆ ಮದುವೆಯಾಗಲು ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ- ಮುಂದೇನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts