More

    6ನೇ ವರ್ಷವೂ ಚಿಕನ್‌ ಬಿರಿಯಾನಿ ನಂ.1 – ಬೆಂಗಳೂರಿಗರು ಮಸಾಲೆದೋಸೆ ಪ್ರಿಯರು, ಸಮೋಸಾಕ್ಕೂ ಭಾರಿ ಡಿಮಾಂಡ್‌

    ನವದೆಹಲಿ: ಆಯಾ ವರ್ಷಗಳಲ್ಲಿ ಅತಿ ಹೆಚ್ಚಾಗಿ ಆರ್ಡರ್‌ ಮಾಡಿರುವ ಆಹಾರಗಳ ಪಟ್ಟಿಯನ್ನು ‘ಸ್ವಿಗ್ಗಿ’  ಸಿದ್ಧಪಡಿಸುತ್ತದೆ. ಅದೇ ರೀತಿ 2021 ಇನ್ನೇನು ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ತನಗೆ ಆರ್ಡರ್‌ ಮಾಡಿರುವವರ ಪಟ್ಟಿಯನ್ನು ಇದು ಸಿದ್ಧಪಡಿಸಿದೆ.

    ಹರಿಯಾಣದ ಗುರುಗ್ರಾಮ ಮೂಲದ ಸ್ವಿಗ್ಗಿ, ಕಳೆದ ಆರು ವರ್ಷಗಳಿಂದ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ದೇಶದ ವಿವಿಧ ಮೂಲೆಗಳ ಜನರು ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿರುವವರ ಪಟ್ಟಿ ಇದಾಗಿದೆ. ಆದರೆ ಅಚ್ಚರಿ ಎಂದರೆ, ಕಳೆದ ಐದು ವರ್ಷಗಳಂತೆ ಈ ಬಾರಿಯೂ ಚಿಕನ್‌ ಬಿರಿಯಾನಿ ನಂ.1 ನೇ ಸ್ಥಾನವನ್ನು ಪಡೆದಿದೆ. ಅಂದರೆ ಸತತ ಆರು ವರ್ಷಗಳಿಂದಲೂ ದೇಶದ ನಾನಾ ಭಾಗಗಳ ಜನರು ಸ್ವಿಗ್ಗಿ ಮೂಲಕ ಚಿಕನ್‌ ಬಿರಿಯಾನಿಯನ್ನು ಪಾರ್ಸೆಲ್‌ ತರಿಸುತ್ತಿದ್ದಾರೆ. ಅದು ಯಾವ ಪರಿ ಎನ್ನುತ್ತೀರಾ? ನಿಮಿಷಕ್ಕೆ 115 ಚಿಕನ್​ ಬಿರಿಯಾನಿ ಆರ್ಡರ್ ಆಗಿದೆ ಎಂದಿದೆ ಸ್ವಿಗ್ಗಿ.

    ಇದರ ಅಂಕಿಅಂಶ ನೀಡುವ ಕಂಪೆನಿ 2020ರಲ್ಲಿ ನಿಮಿಷಕ್ಕೆ 90 ಚಿಕನ್​ ಬಿರಿಯಾನಿ ಆರ್ಡರ್​ ಮಾಡಲಾಗಿತ್ತು. ಆದರೆ ಅದರ ಪ್ರಮಾಣ ಇದೀಗ 115ಕ್ಕೆ ಏರಿದೆ ಎಂದಿದೆ. ಚೆನ್ನೈ, ಹೈದರಾಬಾದ್‌, ಲಖನೌ, ಕೋಲ್ಕತಾಗಳಲ್ಲಿ ಚಿಕನ್​ ಬಿರಿಯಾನಿ ಆರ್ಡರ್​ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಕಳೆದ ವರ್ಷಕ್ಕಿಂತ ಹೊಸ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿರುವುದು ವಿಶೇಷ ಎಂದಿದೆ ಕಂಪೆನಿ. ಇದೇ ವೇಳೆ ವೆಜ್​ ಬಿರಿಯಾನಿ ಆರ್ಡರ್​​ ಮಾಡುವ ಸಂಖ್ಯೆ 4.3 ಕಡಿಮೆ ಆಗಿದೆ ಎಂದಿದೆ.

    ಇನ್ನು ಬೆಂಗಳೂರಿಗರ ಮಟ್ಟಿಗೆ ಬರುವುದಾದರೆ, ಇಲ್ಲಿ ಚಿಕನ್‌ ಬಿರಿಯಾನಿ ಆರ್ಡರ್‌ ಮಾಡಿದವರ ಸಂಖ್ಯೆ ಕಮ್ಮಿ. ಆದರೆ ಬೆಂಗಳೂರಿಗರಿಗೆ ಮಸಾಲೆದೋಸೆ ಮೇಲೆ ವ್ಯಾಮೋಹನ ಹೆಚ್ಚಾಗಿದೆ. ಅತ್ಯಧಿಕ ಪ್ರಮಾಣದಲ್ಲಿ ಮಸಾಲಾ ದೋಸೆಯನ್ನು ಆರ್ಡರ್‌ ಮಾಡಿದ್ದಾರೆ. ದೇಶದ ಮಟ್ಟಿಗೆ ಹೇಳುವುದಾದರೆ ವಿವಿಧ ದೋಸೆಗಳು ಟಾಪ್‌-2 ಸ್ಥಾನದಲ್ಲಿವೆ. 8.8 ದಶಲಕ್ಷ ಆರ್ಡರ್‌ಗಳು ವಿವಿಧ ವೆರೈಟಿ ದೋಸೆಗಳಿಗೆ ಬಂದಿದೆ ಎಂದು ಈ ಕಂಪೆನಿ ಹೇಳಿದೆ.

    ಮುಂಬೈ ಮಂದಿ ಚಿಕನ್​ ಬಿರಿಯಾನಿಗಿಂತ ದಾಲ್​ ಕಿಚಡಿ ಮೊರೆ ಹೋಗಿದ್ದರೆ, ಜೈಪುರ ಜನರು ದಾಲ್​ ಫ್ರೈ ಅತ್ಯಧಿಕವಾಗಿ ಆರ್ಡರ್‌ ಮಾಡಿದ್ದಾರೆ. ದೆಹಲಿಯಲ್ಲಿ ದಾಲ್ ಮಖನಿ ಹೆಚ್ಚು ಆರ್ಡರ್‌ ಆಗಿದೆ ಎಂದು ಅದು ಅಂಕಿಅಂಶ ನೀಡಿದೆ.

    ಇನ್ನು ಸ್ನಾಕ್ಸ್‌ ವಿಷಯಕ್ಕೆ ಬರುವುದಾದರೆ ಸೊಮೋಸ ಚಟ್ನಿ ನಂ.1 ಸ್ಥಾನದಲ್ಲಿದೆ, ಇದನ್ನು ಬಿಟ್ಟರೆ ಚೀಸ್‌ ಗಾರ್ಲಿಕ್ ಬ್ರೇಡ್​, ಪಾಪ್​ ಕಾರ್ನ್​​, ಫ್ರೆಂಚ್​ ಫ್ರೈಸ್ ಹೆಚ್ಚು ಅಂಕ ಗಳಿಸಿದ್ದರೆ, ಡೆಸರ್ಟ್​ನಲ್ಲಿ ಗುಲಾಬ್​ ಜಾಮುನ್‌ ಟಾಪ್‌ನಲ್ಲಿ ಇದ್ದು,​ ರಸ್​ಮಲಾಯಿ 1.27 ಮಿಲಿಯನ್ ಜನರು ಆರ್ಡರ್​ ಮಾಡಿ ಟಾಪ್​ 2 ಸ್ಥಾನ ಪಡೆದಿದೆ ಎಂದು ಸ್ವಿಗ್ಗಿ ಹೇಳಿದೆ. ಇನ್ನು ಇನ್ನೊಂದು ಆನ್‌ಲೈನ್‌ ಫುಡ್‌ ಡೆಲಿವರಿ ಕಂಪೆನಿ ಜೊಮ್ಯಾಟೊ ಕೂಡ ಚಿಕನ್‌ ಬಿರಿಯಾನಿ ನಂ.1 ಸ್ಥಾನದಲ್ಲಿ ಇರುವುದಾಗಿ ಹೇಳಿದೆ.

    ಸ್ಟಾರ್ಟ್‌ಅಪ್‌ ಮೂಲಕ ಮಹಿಳಾ ಜಗತ್ತಿಗೆ ಅಮೋಘ ಕೊಡುಗೆ ನೀಡಿದ ಯುವ ಉದ್ಯಮಿ ಪಂಖೂರಿ ಇನ್ನಿಲ್ಲ

    VIDEO: ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್‌ ಬಾವುಟ, ಕ್ಯಾಚ್‌ ಹಿಡಿದ ಸೋನಿಯಾಗಾಂಧಿ! ವಿಡಿಯೋ ವೈರಲ್‌

    ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ನುಡಿದಿದ್ದಾರೆ 2022ರ ಭವಿಷ್ಯ: ವಿಶ್ವದ ನಿಖರ ಮಾಹಿತಿ ನೀಡುತ್ತಿರುವ ಈಕೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts