More

    ಸ್ಟಾರ್ಟ್‌ಅಪ್‌ ಮೂಲಕ ಮಹಿಳಾ ಜಗತ್ತಿಗೆ ಅಮೋಘ ಕೊಡುಗೆ ನೀಡಿದ ಯುವ ಉದ್ಯಮಿ ಪಂಖೂರಿ ಇನ್ನಿಲ್ಲ

    ನವದೆಹಲಿ: ಮಹಿಳಾ ಉದ್ಯಮ ಕ್ಷೇತ್ರದಲ್ಲಿ ಅಪರೂಪದ ಕೊಡುಗೆ ನೀಡಿ, ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತಿದ್ದ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

    32 ವರ್ಷದ ಹರೆಯಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ್ದ ಪಂಖೂರಿ, ಈ ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟಿರುವುದು ಉದ್ಯಮ ಕ್ಷೇತ್ರಕ್ಕೆ ಆಘಾತವನ್ನು ತಂದಿದೆ.

    ಪಂಖೂರಿ ಅವರು 2016ರಲ್ಲಿ ಆನ್‌ಲೈನ್‌ ಜಾಹೀರಾತು ಕಂಪನಿ ಕ್ವಿಕರ್‌ ಶುರು ಮಾಡಿ, ರೀಟೈಲ್‌ ಸ್ಟಾರ್ಟ್‌-ಅಪ್‌ ಗ್ರಾಬ್‌ ಹೌಸ್‌ ಸ್ಥಾಪಿಸಿದ್ದರು. ಭಾರತದ ಮಹಿಳೆಯರು ಲೈವ್‌ ಸ್ಟ್ರೀಮಿಂಗ್‌, ಚಾಟ್‌ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡಲು ಪಂಖೂರಿ ಅವರ ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯವು ವೇದಿಕೆಯಾಗಿದೆ. ಈ ಮೂಲಕ ಹಲವಾರು ಮಹಿಳೆಯರ ಉನ್ನತಿಗಾಗಿ ಅವರು ಶ್ರಮಿಸುತ್ತಿದ್ದರು.

    ಝಾನ್ಸಿ ಮೂಲದ ಪಂಖೂರಿ ರಾಜೀವ್‌ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವಿ ಪಡೆದಿದ್ದರು. ಇವರ ಅಗಲಿಕೆಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

    VIDEO: ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್‌ ಬಾವುಟ, ಕ್ಯಾಚ್‌ ಹಿಡಿದ ಸೋನಿಯಾಗಾಂಧಿ! ವಿಡಿಯೋ ವೈರಲ್‌

    ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ನುಡಿದಿದ್ದಾರೆ 2022ರ ಭವಿಷ್ಯ: ವಿಶ್ವದ ನಿಖರ ಮಾಹಿತಿ ನೀಡುತ್ತಿರುವ ಈಕೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts