More

    ಮೆಟ್ರೋ ರೈಲಿನಲ್ಲಿ ರವಾನೆಯಾಯ್ತು ಜೀವಂತ ಹೃದಯ- ಇದನ್ನು ಸಾಗಿಸಿದ್ದೇ ರೋಚಕ

    ಹೈದರಾಬಾದ್: ದೇಶದ ಯಾವುದೋ ಮೂಲೆಯಲ್ಲಿ ಅಗತ್ಯವಿರುವ ರೋಗಿಗೆ ಹೃದಯದ ಕಸಿ ಮಾಡುವ ಸಲುವಾಗಿ ಇನ್ನೆಲ್ಲಿಯೋ ಇರುವ ಮೃತನ ಹೃದಯವನ್ನು ಕೊಂಡೊಯ್ಯುವ ಘಟನೆಗಳು ಇದಾಗಲೇ ನಡೆದಿವೆ. ಒಂದು ಕಡೆಯಿಂದ ಇನ್ನೊಂದು ಕಡೆ ಹೃದಯವನ್ನು ಸಾಗಿಸುವ ಮೂಲಕ ಯಶಸ್ವಿ ಚಿಕಿತ್ಸೆಯನ್ನು ನಡೆಸಿರುವ ಹೆಮ್ಮೆ ನಮ್ಮ ವೈದ್ಯ ತಂಡದ್ದು.

    ಇಂಥ ಸಂದರ್ಭದಲ್ಲಿ ಸದಾ ಜೀರೋ ಟ್ರಾಫಿಕ್​ ಮೂಲಕ ಹೃದಯ ರವಾನೆಯಾಗುತ್ತದೆ. ಇದರರ್ಥ ಹೃದಯವನ್ನು ಹೊತ್ತ ವಾಹನಗಳು ಹೋಗುವ ಜಾಗದಲ್ಲಿ ಸಂಪೂರ್ಣವಾಗಿ ರಸ್ತೆಯನ್ನು ತೆರವು ಮಾಡಲಾಗುತ್ತದೆ.

    ಆದರೆ ಹೈದರಾಬಾದ್​ನ ವೈದ್ಯಕೀಯ ತಂಡ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಅಂಬ್ಯುಲೆನ್ಸ್​ ಅಥವಾ ಇನ್ನಾವುದೋ ವಾಹನದ ಬದಲಾಗಿ ಇದೇ ಮೊದಲ ಬಾರಿಗೆ ಜೀವಂತ ಹೃದಯವನ್ನು ಮೆಟ್ರೋ ರೈಲಿನ ಮೂಲಕ ಸಾಗಿಸಲಾಗಿದೆ.

    ಜೀವಂತ ಹೃದಯ ಸಾಗಿಸಲೆಂದೇ ಹೈದರಾಬಾದ್ ಮೆಟ್ರೋ ರೈಲ್ವೆ ಮಂಗಳವಾರ ನಾಗೋಲೆ ಹಾಗೂ ಜುಬಿಲಿ ಹಿಲ್ಸ್‌ ನಡುವೆ ವಿಶೇಷ ಗ್ರೀನ್ ಕಾರಿಡಾರ್ ರೂಪಿಸಿತ್ತು. 21 ಕಿ.ಮೀಗಳ ದೂರವಿರುವ ಆಸ್ಪತ್ರೆಯನ್ನು ರೈಲಿನಲ್ಲಿ ತಲುಪಲಾಗಿದೆ. 30 ನಿಮಿಷದಲ್ಲಿ ಹೃದಯವು ರೋಗಿಯ ಬಳಿ ತಲುಪಿಸಲಾಗಿದೆ.
    ಕಮಿನೇನಿ ಆಸ್ಪತ್ರೆಯಿಂದ ಜುಬಿಲಿ ಹಿಲ್ಸ್‌ವರೆಗೂ ತಡೆರಹಿತ ಮೆಟ್ರೋ ರೈಲಿನ ಸೇವೆ ಒದಗಿಸಿ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೃದ್ರೋಗಿಯೊಬ್ಬರ ಜೀವ ಉಳಿಸಲಾಗಿದೆ. ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಹೈದರಾಬಾದ್ ಕಮಿನೇನಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯವನ್ನು, ಹೃದ್ರೋಗಿಯೊಬ್ಬರಿಗೆ ನೀಡಲಾಗಿದೆ. ನಾಗೋಲೆ ಮೆಟ್ರೋ ಸ್ಟೇಷನ್​ನಿಂದ ಈ ವಿಶೇಷ ರೈಲು ಆರಂಭಗೊಂಡು ಜುಬಿಲಿ ಹಿಲ್ಸ್‌ವರೆಗೂ ತಲುಪಿದೆ. ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ ಮಾಡಲಾಗಿದೆ” ಎಂದು ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎನ್ ವಿಎಸ್ ರೆಡ್ಡಿ ತಿಳಿಸಿದ್ದಾರೆ.

    ಆ ಭಾಗದಲ್ಲಿ ತುಂಬಾ ತುರಿಕೆ, ಶುಚಿಯಾಗಿದ್ದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ- ಏನು ಮಾಡಲಿ?

    ಅಪ್ಪ ಹಾಕಿದ ಲವ್​ ಜಿಹಾದ್​​ ಕೇಸ್​- ಪುತ್ರಿ ಎಂದಳು ನಮ್ದು ಪ್ಯೂರ್​ ಲವ್​: ಹೈಕೋರ್ಟ್​ ಏನು ಹೇಳ್ತು ನೋಡಿ…

    ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?

    VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts