More

    ಲಡಾಖ್​ ಗಡಿಯಲ್ಲಿ ಆರು ಶಿಖರಗಳ ಮೇಲೆ ಹಿಡಿತ ಸಾಧಿಸಿದ ಯೋಧರು: ಪೇಚಿನಲ್ಲಿ ಚೀನಾ

    ಲಡಾಖ್: ಅತ್ತ ಕುತಂತ್ರಿ ಚೀನಾ ಭಾರತದ ಗಡಿಯೊಳಕ್ಕೆ ನುಸುಳಿ ಇನ್ನಿಲ್ಲದ ಕುತಂತ್ರವನ್ನು ಮಾಡಲು ಸಂಚುರೂಪಿಸುತ್ತಿರುವ ನಡುವೆಯೇ, ಇತ್ತ ಭಾರತದ ಯೋಧರು, ಚೀನಿಯರಿಗೆ ಸದ್ದಿಲ್ಲದೇ ಭಾರಿ ಏಟು ನೀಡಿದ್ದಾರೆ.

    ಕಳೆದ 20 ದಿನಗಳಲ್ಲಿ ಗಡಿಯಲ್ಲಿರುವ 6 ಪ್ರಮುಖ ಪರ್ವತಗಳ ಮೇಲೆ ಭಾರತೀಯ ಸೇನೆಯು ಹಿಡಿತ ಸಾಧಿಸುವ ಮೂಲಕ, ಚೀನಿ ಕಮ್ಯುನಿಸ್ಟರು ಪೇಚಿನಲ್ಲಿ ಸಿಲುಕುವ ಕೆಲಸ ಮಾಡಿದ್ದಾರೆ.

    ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ಸಂಘರ್ಷಕ್ಕೆ ಪೂರ್ವ ಲಡಾಖ್ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನ ಪ್ರದೇಶವೂ ಮುಖ್ಯ ಕಾರಣವಾಗಿದೆ. ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರ ಮತ್ತು ಉತ್ತರ ಪ್ಯಾಂಗಾಂಗ್ ತ್ಸೋ ಸರೋವರದ ಪ್ರದೇಶಕ್ಕಾಗಿ ಎರಡು ಸೇನೆಗಳ ನಡುವೆ ತಿಕ್ಕಾಟ ನಡೆಯುತ್ತಿದ್ದು, ಈ ನಡುವೆಯೇ, ಭಾರತದ ಸೇನಾಪಡೆ ಈ ಕಾರ್ಯವನ್ನು ಸಾಧಿಸಿ ತೋರಿಸಿದೆ.

    ಕಮಾಂಡರ್ ಮಟ್ಟದ ಮಾತುಕತೆ ನಡೆಯುವುದಕ್ಕೆ ಕೆಲವೇ ಗಂಟೆಗಳ ಮುಂಚೆ ಆಯಕಟ್ಟಿನ ದೃಷ್ಟಿಯಿಂದ ಬಹುಮುಖ್ಯವೂ ಆಗಿರುವ ಆರು ಶಿಖರಗಳನ್ನು ವಶಕ್ಕೆ ಪಡೆದಿದು ಚೀನಾಕ್ಕೆ ಬುದ್ಧಿ ಕಲಿಸಿದ್ದಾರೆ. ಈ ಶಿಖರಗಳು ಅತ್ಯಂತ ಎತ್ತರವಾಗಿರುವ ಹಿನ್ನೆಲೆಯಲ್ಲಿ, ಚೀನಾದ ಪ್ರತಿಯೊಂದು ನಡೆಯ ಮೇಲೂ ಹದ್ದಿನ ಕಣ್ಣಿಡುವುದಕ್ಕೆ ಭಾರತೀಯ ಯೋಧರಿಗೆ ಸಾಧ್ಯವಾಗಲಿದೆ.

    ವಿಚಿತ್ರ ಎಂದರೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರು ಈ ಆರು ಹೊಸ ಪರ್ವತಗಳ ಮೇಲೆ ಹಿಡಿತ ಸಾಧಿಸಲು ಹಾತೊರೆದಿದ್ದರು. ಅದಕ್ಕಾಗಿ ಸರ್ವ ಸನ್ನದ್ಧರಾಗಿರುವ ಬೆನ್ನಲ್ಲೇ ಭಾರತೀಯ ಯೋಧರು ಹಿಡಿತ ಸಾಧಿಸಿಕೊಂಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

    ಇದನ್ನೂ ಓದಿ: LIVE: ಬಿಹಾರದಲ್ಲಿಂದು ಐತಿಹಾಸಿಕ ದಿನ: ಡಿಜಿಟಲ್​ ಕ್ಷೇತ್ರ, ಹೆದ್ದಾರಿ ಯೋಜನೆಯಲ್ಲಿ ಕ್ರಾಂತಿ- ಪ್ರಧಾನಿಯಿಂದ ಚಾಲನೆ

    ಭಾರತ-ಚೀನಾದ ಪೂರ್ವ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಬಲಿಷ್ಠವಾಗಿದೆ. ಚೀನಾದ ಅತಿಕ್ರಮಣ ನೀತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸೈನಿಕರು ಸದೀ ಸನ್ನದ್ಧರಾಗಿತ್ತಾರೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮೂಲಕ ಚೀನಾ ಸೇನೆಗೆ ಎಚ್ಚರಿಕೆ ಸಂದೇವಶವನ್ನು ರವಾನಿಸಿದ್ದಾರೆ.

    ಇದರ ಜತೆಜತೆಗೇನೇ, ಚೀನಾದ ಫೈಟರ್ ಜೆಟ್​ಗಳ ಚಟುವಟಿಕೆಗಳನ್ನು ಗಮನಿಸುವುದಕ್ಕಾಗಿ ಇತ್ತೀಚೆಗಷ್ಟೇ ವಾಯುಪಡೆ ಸೇರಿದ್ದ ರಾಫೆಲ್ ಫೈಟರ್ ಜೆಟ್​ಗಳನ್ನು ಬಳಸಿಕೊಳ್ಳುತ್ತಿದ್ದು, ಇದರ ಹಾರಾಟವನ್ನು ಮುಂದುವರೆಸಲಾಗಿದೆ.

    ಜಾಗತಿಕ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವ ಚೀನಾದ ಪ್ರಾದೇಶಿಕ ವ್ಯಾಪ್ತಿಗೆ ಸೇರಿರುವ ಬ್ಲಾಕ್ ಟಾಪ್ ಮತ್ತು ಹೆಲ್ಮೆಟ್ ಟಾಪ್ ಪರ್ವತಗಳ ಮೇಲೆ ಚೀನಾ ಹೆಚ್ಚು ನಿಗಾ ವಹಿಸಿದೆ. ಚೀನಾ ಗಡಿಯಲ್ಲಿ ಇರುವ ಪರ್ವತಗಳಲ್ಲಿ ಸೇನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಭಾರತೀಯ ಸೇನೆಯನ್ನು ಎದುರಿಸುವುದಕ್ಕಾಗಿ ಗಡಿ ಪರ್ವತ ಪ್ರದೇಶಗಳಲ್ಲಿ 3000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಇದೇ ವೇಳೆ ತಿಳಿದು ಬಂದಿದೆ.

    ಕಡಿಮೆ ವೆಚ್ಚದಲ್ಲಿ ಕರೊನಾ ಪರೀಕ್ಷೆಗೆ ಸಿದ್ಧವಾಯ್ತು ‘ಫೆಲುದಾ’- ವಿಶ್ವದ ಕಣ್ಣು ಭಾರತದತ್ತ

    ತೋಟ, ಹೊಳೆಗಳಲ್ಲಿ ಉಗ್ರರಿಂದ ಭೂಗತ ಬಂಕರ್​ನಿರ್ಮಾಣ! ಸ್ಫೋಟಕ ಮಾಹಿತಿ ಬಹಿರಂಗ

    ಲಡಾಖ್​ ಗಡಿಯಲ್ಲಿನ್ನು ಅವಳಿ ಡುಬ್ಬಗಳ ಒಂಟೆಗಳದ್ದೇ ಕಾರುಬಾರು: ಏಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts