More

    ಲಡಾಖ್​ ಗಡಿಯಲ್ಲಿ ಗುಂಡಿನ ಸದ್ದು- 45 ವರ್ಷಗಳ ನಂತರ ಫೈರಿಂಗ್​! ಕದನದ ಮುನ್ಸೂಚನೆ?

    ಲಡಾಖ್​: ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಗುಂಡಿನ ಚಕಮಕಿ ಶುರುವಾಗಿದ್ದು, ಆತಂಕ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಕದನದ ಮುನ್ಸೂಚನೆಯೂ ಸಿಗುತ್ತಿದೆ.

    ಪ್ಯಾನ್‍ಗಾಂಗ್ ಸರೋವರ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಗುಂಡಿನ ಸದ್ದು ಕೇಳಿಬಂದಿದೆ. ಪೂರ್ವ ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ನಡುವೆ ಚಕಮಕಿ ಶುರುವಾಗಿರುವುದಾಗಿ ವರದಿಯಾಗಿದೆ.

    1975ರ ಬಳಿಕ ಮೊದಲ ವಾರ್ನಿಂಗ್ ಶಾಟ್‌ ಅಥವಾ ಗುಂಡಿನ ಚಕಮಕಿ ಇದು ಎಂದು ಹೇಳಲಾಗುತ್ತಿದೆ.

    ಎರಡೂ ದೇಶಗಳು ಇದೀಗ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ಎಲ್‍ಎಸಿ ದಾಟಿ ತಮ್ಮ ಮೇಲೆ ಭಾರತೀಯರ ಯೋಧರು ಗುಂಡಿನ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಪ್ರತಿಯಾಗಿ ನಾವು ಗುಂಡಿನ ದಾಳಿ ನಡೆಸಿರುವುದಾಗಿ ಚೀನಾ ಆರೋಪಿಸುತ್ತಿದೆ.

    ಇದನ್ನೂ ಓದಿ: ಪುನಃ ಗಡಿ ಸಂಘರ್ಷಕ್ಕೆ ಸಜ್ಜಾದ ಕುತಂತ್ರಿ ಚೀನಾ: ನಿಯಮ ಉಲ್ಲಂಘಿಸಿ ಪ್ರಚೋದನೆ

    ಪೂರ್ವ ಲಡಾಖ್‍ನಲ್ಲಿ ಅತ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್. ಈ ಬಿಕ್ಕಟ್ಟನ್ನು ತಿಳಿಗೊಳಿಸಲು ಉಭಯ ದೇಶಗಳ ಕಮಾಂಡರ್​ಗಳು ಮಾತುಕತೆ ಮುಂದುವರೆಸಲಿರುವುದಾಗಿ ಹೇಳಿದ್ದಾರೆ.

    ಈ ಘಟನೆ ಕುರಿತು ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಉಭಯ ದೇಶಗಳು ಪೂರ್ವ ಲಡಾಖ್ ಪ್ರದೇಶದಲ್ಲಿ ಗರಿಷ್ಠ ಸಂಯಮ ಕಾಯ್ದುಕೊಳ್ಳುವಂತೆ ತಿಳಿಸಿದೆ.

    ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ನಡೆದಿತ್ತು. ಅದರಲ್ಲಿ 80 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. 400 ಮಂದಿ ಚೀನಿ ಸೈನಿಕರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರು. ಭಾರತಕ್ಕೆ ಹೆದರಿ ಚೀನಾ ಕಾಲ್ಕಿತ್ತಿತ್ತು. 1975ರಲ್ಲಿ ಚೀನಾ ಸೈನಿಕರು ಹೊಂಚು ಹಾಕಿ ಭಾರತದ ಮೇಲೆ ದಾಳಿ ಮಾಡಿದ್ದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಅದೇ ಕೊನೆ. ಅಲ್ಲಿಂದ ಇದುವರೆಗೂ ಗುಂಡಿನ ಚಕಮಕಿ ನಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ.

    1996ರ ಒಪ್ಪಂದದ ಪ್ರಕಾರ ಗಡಿ ರೇಖೆಯ 2 ಕಿಲೋ ಮೀಟರ್ ಸುತ್ತಳತೆಯಲ್ಲಿ ಗುಂಡಿನ ದಾಳಿಯಾಗಲಿ, ಸ್ಫೋಟ ನಡೆಸುವಂತಿಲ್ಲ. ಹೀಗಾಗಿ ಭಾರತ, ಚೀನಾ ಯೋಧರು ಶಸ್ತ್ರಾಸ್ತ್ರ ಬಳಸದೇ ಮಲ್ಲಯುದ್ಧದ ತಂತ್ರಗಾರಿಕೆ ಬಳಸುತ್ತಾರೆ. ಇದೇ ಕಾರಣಕ್ಕೆ ಕಳೆದ ಜೂನ್​ ತಿಂಗಳಿನಲ್ಲಿ ಕೂಡ ಎರಡೂ ದೇಶಗಳ ಸೈನಿಕರು ಶಸ್ತ್ರಾಸ್ತ್ರ ಬಳಸಿರಲಿಲ್ಲ.

    ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

    ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!

    ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts