More

    ಸಾಲ ಮರುಪಾವತಿಗೆ ಬ್ಯಾಂಕ್​ನವರು ಬಂದ್ರೆ ಹೇಗೆ ಹಲ್ಲೆ ಮಾಡ್ಬೇಕೆಂದು ನಾಯಿಗಳಿಗೆ ತರಬೇತಿ ನೀಡಿದ ಸಾಲಗಾರ!

    ಕೊಚ್ಚಿ: ಜನರು ಬ್ಯಾಂಕ್​ನಿಂದ ಸಾಲ ಪಡೆದುಕೊಂಡಾಗ ಅದನ್ನು ವಸೂಲಿ ಮಾಡಲು ತಮ್ಮದೇ ಮಾರ್ಗಗಳನ್ನು ಬ್ಯಾಂಕ್​ನವರು ಅನುಸರಿಸುತ್ತಾರೆ. ಹಾಗೆಂದು ಬ್ಯಾಂಕ್​ನವರು ಮನೆಗೆ ಬಂದಾಗ ಮನೆಯವರು ನಾಯಿಯನ್ನು ಛೂ ಬಿಟ್ಟರೆ ಹೇಗಿರುತ್ತೆ?

    ಅಂಥದ್ದೇ ಒಂದು ಘಟನೆ ನಡೆದಿರುವುದು ಕೊಚ್ಚಿಯಲ್ಲಿ. ಬ್ಯಾಂಕ್​ ಒಂದರಿಂದ ವ್ಯಾಪಾರ ಮಾಡಲು ಏಳು ಕೋಟಿ ರೂಪಾಯಿ ಸಾಲು ಪಡೆದು ಅದನ್ನು ವಾಪಸು ಮಾಡದ ಅಣ್ಣಮ್ಮ ಚೆರಿಯನ್ ಎಂಬ ಸಾಲಗಾರ ಹಾಗೂ ಆತನ ಕುಟುಂಬಸ್ಥರು ಈ ರೀತಿ ಮಾಡಿದ್ದಾರೆ.

    ಸಾಲವನ್ನು ಮರುಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ಕೋರ್ಟ್​ ಆದೇಶದ ಮೇರೆಗೆ ಮನೆಯನ್ನು ಸೀಜ್​ ಮಾಡಲು ಬಂದಿದ್ದರು. ಆಗ ಅಧಿಕಾರಿಗಳ ಮೇಲೆ ಮೂರು ನಾಯಿಗಳನ್ನು ಛೂ ಬಿಡಲಾಗಿದೆ. ಬ್ಯಾಂಕ್​ ಅಧಿಕಾರಿಗಳಿಗೆ ಏನು ಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಾರೆ. ಇಷ್ಟೇ ಅಲ್ಲದೇ ಸಾಲಗಾರನ ಮಗ ಚಾಕುವಿನಿಂದ ಹಲ್ಲೆ ಕೂಡ ನಡೆಸಿದ್ದಾನೆ.

    ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಿಕವರಿ ತಂಡವು ಅಣ್ಣಮ್ಮ ಚೆರಿಯನ್ ಅವರ ಮನೆಗೆ ಹೋದಾಗ ಈ ರೀತಿ ನಡೆದುಕೊಳ್ಳಲಾಗಿದೆ. ಅಧಿಕಾರಿಗಳು ಮನೆಗೆ ಬಂದಾಗ ಯಾವ ರೀತಿ ಅವರ ಮೇಲೆ ಹಲ್ಲೆ ಮಾಡಬೇಕು ಎಂಬ ಬಗ್ಗೆ ನಾಯಿಗಳಿಗೆ ತರಬೇತಿಯನ್ನೂ ಕೊಡಲಾಗಿತ್ತಂತೆ! ಅಧಿಕಾರಿಗಳು ಹಲ್ಲೆಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    “ಅವರು ವ್ಯಾಪಾರ ಉದ್ದೇಶಗಳಿಗಾಗಿ ಸಾಲವನ್ನು ಪಡೆದಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆಸ್ತಿಯನ್ನು ಜಪ್ತಿ ಮಾಡಲು ಹೋಗಿದ್ದೆವು. ಆದರೆ ಅವರು ಈ ರೀತಿ ಮಾಡಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸದ್ಯ ಅವರು ದೂರು ಕೊಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    VIDEO: ಭಾರತದ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು! ಅನುಭವ ಇಲ್ಲಿದೆ ಕೇಳಿ…

    ‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts