More

    ‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ… ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ…’

    ನವದೆಹಲಿ: 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಹೇಳುವ ಮೂಲಕ ಕೆಲವರ ಕಣ್ಣನ್ನು ಕೆಂಪಗೆ ಮಾಡಿರುವ ನಟಿ ಕಂಗನಾ ರಣಾವತ್‌, ತಮ್ಮ ಮಾತಿನ ಚಾಟಿಯನ್ನು ಮುಂದುರೆಸಿದ್ದಾರೆ.

    ನಿಜವಾಗಿ ಸ್ವಾತಂತ್ರ್ಯ ತಂದುಕೊಟ್ಟವರು ಹುತಾತ್ಮರಾದರು. ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ಕೊಲೆ ಮಾಡಿದ, ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ನಾಯಕರು ಹಾಗೂ ಲಕ್ಷಾಂತರ ಸಾರ್ವಜನಿಕರನ್ನು ಕೊಂದವರ ಸಾವಿಗೆ ಕಾರಣವಾಗಿರುವ ಬ್ರಿಟಿಷರ ವಿರುದ್ಧ ಯಾವುದೇ ಕೇಸ್‌ ದಾಖಲು ಮಾಡದೇ, ಎಲ್ಲಾ ಸಾಧ್ಯತೆಗಳು ಇದ್ದರೂ ಅವರನ್ನು ಆಗ ಏಕೆ ಸುಮ್ಮನೆ ಬಿಡಲಾಯಿತು ಎಂಬ ಬಗ್ಗೆ ಎಂದಾದರೂ ಯೋಚನೆ ಮಾಡಿರುವಿರಾ ಎಂದು ಈ ಹಿಂದೆ ಹೇಳಿಕೆ ನೀಡಿ ತಮ್ಮನ್ನು ಕಂಡರೆ ಬೆಂಕಿ ಕಾರುತ್ತಿರುವವರ ಮೇಲೆ ತುಪ್ಪ ಸುರಿದಿದ್ದ ಕಂಗನಾ, ಇದೀಗ ಮತ್ತೆ ಮಾತಿನ ಸಮರ ಮುಂದುವರೆಸಿದ್ದಾರೆ.

    ‘ನಾನು ಈಗಲೂ ಹೇಳುತ್ತಿದ್ದೇನೆ. 1947ರಲ್ಲಿ ನಮಗೆ ಸಿಕ್ಕಿದ್ದು ಭಿಕ್ಷೆಯೇ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿರುವುದು ನಾನಲ್ಲ, ನಿಜವಾಗಿ ಹೋರಾಟ ಮಾಡಿದವರು ಬಲಿಯಾದರು. ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ರಂಥ ನಿಜವಾದ ನಾಯಕರು ಪ್ರಾಣತೆತ್ತರು. ಆದರೆ ಇನ್ನಾರೋ ಅದರ ಕ್ರೆಡಿಟ್‌ ಪಡೆದುಕೊಳ್ಳುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.
    ಅದೇ ವೇಳೆ ಗಾಂಧಿಯ ಅಹಿಂಸಾ ಮಾರ್ಗದ ಪ್ರಸಿದ್ಧ ನುಡಿಯಾಗಿರುವ ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ’ ಎನ್ನುವ ಮಾತನ್ನು ಪ್ರಸ್ತಾಪಿಸಿದ ನಟಿ, ‘ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ’ ಎಂದು ಪೋಸ್ಟ್‌ ಮಾಡಿದ್ದಾರೆ.

    Kangana Ranaut shared an old article on Instagram.(Instagram)

    ‘ನೇತಾಜಿ ಅವರನ್ನು ಹಸ್ತಾಂತರಿಸಲು ಗಾಂಧಿ ಮತ್ತು ಇತರರ ಸಮ್ಮತಿ’ ಎಂದು ಶೀರ್ಷಿಕೆಯಿರುವ 1940ರಲ್ಲಿ ಪ್ರಕಟಗೊಂಡಿದ್ದ ಲೇಖನವನ್ನು ಕಂಗನಾ ಇದೇ ಸಂದರ್ಭದಲ್ಲಿ ಶೇರ್ ಮಾಡಿದ್ದಾರೆ. ಈ ಕುರಿತು ಬರೆದಿರುವ ಅವರು, ನೀವು ಗಾಂಧಿ ಮತ್ತು ನೇತಾಜಿಯನ್ನು ಒಟ್ಟಿಗೆ ಅಭಿನಂದಿಸಬೇಡಿ. ಇವರಿಬ್ಬರ ಹೋಲಿಕೆ ಬೇಡ. ಯಾರು ಉತ್ತಮರು ಎಂದು ನೀವೇ ನಿರ್ಧರಿಸಿ. ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಿಮ್ಮದು.

    ವಿರೋಧಿಗಳನ್ನು ಎದುರಿಸಲಾಗದ ಕುತಂತ್ರಿಗಳು, ಬ್ರಿಟಿಷರ ಜತೆ ಹೋರಾಡಲು ಬಿಸಿರಕ್ತವಿಲ್ಲದ, ಆದರೂ ಅಧಿಕಾರ ದಾಹವಿದ್ದವರು ನಿಜವಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದರು ಎಂಬುದನ್ನು ಪತ್ರಿಕೆಯ ಈ ವರದಿ ಸ್ಪಷ್ಟಪಡಿಸುತ್ತದೆ. ಗಾಂಧಿ ಯಾವತ್ತೂ ನೈಜ ಹೋರಾಟಗಾರರಾಗಿರುವ ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ ಅವರಿಗೆ ಬೆಂಬಲವನ್ನೇ ನೀಡಲಿಲ್ಲ. ಈಗಲಾದರೂ ಯೋಚನೆ ಮಾಡಿ, ನಿಜಾಂಶ ತಿಳಿದುಕೊಳ್ಳಿ ಎಂದಿದ್ದಾರೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂದು ಗಾಂಧಿ ಮಾರ್ಗ ಅನುಸರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ಕಂಗನಾ ಹೇಳಿದ್ದಾರೆ.

    ‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ... ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ...’

    ‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ... ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ...’

    ‘ನಿಜವಾದ ಹೋರಾಟಗಾರರ ಕೊಂದ ಬ್ರಿಟಿಷರನ್ನು ಬಿಟ್ಟದ್ದೇಕೆ? ಚರ್ಚಿಲ್‌ನನ್ನು ಹೀರೋ ಮಾಡಿದ್ದೇಕೆ? ನೆಹರೂ ಪತ್ರ ಓದಿದ್ದೀರಾ? ತಪ್ಪು ನನ್ನದಾ?’

    ಆಗಿಂದು ಭಿಕ್ಷೆ, ಇದು ನೈಜ ಸ್ವಾತಂತ್ರ್ಯ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ ಕಂಗನಾ- ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts