More

    ಗಾಂಧೀಜಿ, ಭಗತ್‌ಸಿಂಗ್ ಜೀವನ ಸ್ಫೂರ್ತಿ

    ಮೂಡಲಗಿ: ಸತ್ಯ ಅಹಿಂಸೆಗಳ ಪ್ರತೀಕವಾದ ಗಾಂಧೀಜಿ, ಯುವಶಕ್ತಿಯ ಪ್ರೇರಕಶಕ್ತಿಯಾದ ಭಗತ್ ಸಿಂಗ್ ಇವರಿಬ್ಬರ ಶಾಂತಿ-ಕ್ರಾಂತಿಯ ಮೂಲಕ ಭಾರತ ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ ಸ್ವತಂತ್ರವಾಯಿತು. ಅವರ ಜೀವನ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.

    ಪಟ್ಟಣದಲ್ಲಿ ಜ್ಞಾನದೀಪ್ತಿ ಫೌಂಡೇಷನ್, ಯುವಜೀವನ ಸೇವಾ ಸಂಸ್ಥೆ ಹಾಗೂ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ’ಶಾಂತಿ-ಕ್ರಾಂತಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
    ಭಗತ್ ಸಿಂಗ್ ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ ದೇಶಭಕ್ತ. ಅಂತಹ ಹೆಮ್ಮೆಯ ವೀರನಿಗೆ ಜನ್ಮನೀಡಿದ್ದು ಭಾರತಮಾತೆ. ನಮ್ಮಲ್ಲಿಯೂ ಅಂತಹ ಶಕ್ತಿ ದಯಪಾಲಿಸಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಟಗೇರಿಯ ನಿವೃತ್ತ ಉಪ ಪ್ರಾಚಾರ್ಯ ಅರ್ಜುನ ಹೊಂಗಲ ಮಾತನಾಡಿ, ಶಾಂತಿ-ಕ್ರಾಂತಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.

    ಯುವಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಸಂತೋಷ ಹಂಜಿ, ಲಯನ್ಸ ಕ್ಲಬ್ ಅಧ್ಯಕ್ಷ ಶ್ರೀಶೈಲ ಲೋಕಣ್ಣವರ, ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ್, ಮುಖ್ಯ ಶಿಕ್ಷಕಿ ಗೀತಾ ಕರಗಣಿ, ಶಿಕ್ಷಕ ಮುತ್ತು ಬಂಬಲವಾಡ, ಪ್ರಕಾಶ ಕಾಳಪ್ಪಗೊಳ, ಸುರೇಶ ಮರೆನ್ನವರ, ಗೋವಿಂದ ಸಣ್ಣಕ್ಕಿ, ಸತೀಶ ಪಾಟೀಲ, ಡೇವಿಡ್ ಪರಸನ್ನವರ, ಶಿವಾನಂದ ಕಿತ್ತೂರ, ಬಿ.ಆರ್.ತರಕಾರ, ಚಂದ್ರಶೇಖರ ತೇಲಿ, ರವಿ ಮಹಾಲಿಂಗಪುರ, ಯಲ್ಲಪ್ಪ ಸಲಬನ್ನವರ
    ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts